ನವದೆಹಲಿ: ಫ್ರಾನ್ಸ್ ನಿಂದ ಭಾರತಕ್ಕೆ 7 ನೇ ಬ್ಯಾಚ್ ನಲ್ಲಿ ಮೂರು ರಾಫೆಲ್ ಯುದ್ಧವಿಮಾನಗಳು ಜು.21 ರಂದು ಆಗಮಿಸಿವೆ. ಐಎಎಫ್ ನಲ್ಲಿ ಈಗ ರಾಫೆಲ್ ಜೆಟ್ ಗಳ ಒಟ್ಟು ಸಂಖ್ಯೆ 24 ಕ್ಕೆ ಏರಿಕೆಯಾಗಿದ್ದು ವಾಯುಪಡೆಗೆ ಹೆಚ್ಚಿನ ಬಲ ಬಂದಿದೆ.
ಹೊಸ ಬ್ಯಾಚ್ ನ ರಾಫೆಲ್ ಜೆಟ್ ಗಳು ಐಎಎಫ್ ನ ರಾಫೆಲ್ ಜೆಟ್ ನ ಎರಡನೇ ಸ್ಕ್ವಾರ್ಡನ್ ನ ಭಾಗವಾಗಲಿದೆ. ಯುನೈಟೆಡ್ ಅರಬ್ ಎಮಿರೈಟ್ಸ್ ನ ಏರ್ ಫೋರ್ಸ್ ಗಳ ಮೂಲಕ ಮಾರ್ಗ ಮಧ್ಯದಲ್ಲೇ ಇಂಧನವನ್ನು ರಾಫೆಲ್ ಜೆಟ್ ಗೆ ತುಂಬಿಸಲಾಯಿತು.
ಫ್ರಾನ್ಸ್ ನ ಇಸ್ಟ್ರೆಸ್ ಏರ್ಬೇಸ್ ನಿಂದ ಕೆಲವೇ ಸಮಯದ ಹಿಂದಷ್ಟೇ ರಾಫೆಲ್ ಯುದ್ಧವಿಮಾನಗಳು ಭಾರತಕ್ಕೆ ಆಗಮಿಸಿದವು. ಯುಎಇ ವಾಯುಪಡೆಯ ಸಹಾಕರವನ್ನು ಅಭಿನಂದಿಸುತ್ತೆವೆ ಎಂದು ಐಎಎಫ್ ಟ್ವೀಟ್ ನಲ್ಲಿ ಹೇಳಿದೆ. ಹೊಸ ಸ್ಕ್ವಾರ್ಡನ್ ನ ರಾಫೆಲ್ ಜೆಟ್ ಗಳನ್ನು ಪಶ್ಚಿಮ ಬಂಗಾಳದ ಹಸಿಮಾರ ವಾಯುನೆಲೆಯಲ್ಲಿ ಇರಿಸಲಾಗುತ್ತದೆ.