ಪುತ್ತೂರು: ಹಣ ಪಡೆಯುವ ಉದ್ದೇಶದಿಂದ ಯುವಕನೊಬ್ಬನನ್ನು ಹನಿ ಟ್ರ್ಯಾಪ್ ಜಾಲದಲ್ಲಿ ಸಿಲುಕಿಸಿ ಆತನಿಂದ ತಂಡವೊಂದು ಸುಮಾರು 30 ಲಕ್ಷ ರೂ. ವಸೂಲಿ ಮಾಡಿದೆ ಎಂದು ಆಪಾದಿಸಲಾದ ಘಟನೆಯೊಂದು ಪುತ್ತೂರು ತಾಲೂಕಿನಲ್ಲಿ ನಡೆದಿದೆ.
ಏಳು ಮಂದಿಯ ವಿರುದ್ಧ ದೂರು ದಾಖಲಿಸಲಾಗಿದ್ದು, ತನಿಶಾ ಎಂದು ತನ್ನನ್ನು ಪೋನಿನಲ್ಲಿ ಯುವಕನಿಗೆ ಪರಿಚಯ ಮಾಡಿಕೊಂಡಿದ್ದ ಕಾರ್ಕಳ ಮೂಲದವಳು ಎನ್ನಲಾದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇತರ ಆರೋಪಿಗಳಾದ ಹನೀಫ್, ಮಹಮ್ಮದ್ ಕುಂಞ, ಶಾಫಿ, ಅಝರ್, ಸಯಿದ್ ಮೋನು, ನಾಸಿರ್ ಎಂಬವರ ಸೆರೆಗೆ ಬಲೆ ಬೀಸಲಾಗಿದೆ.
ಐದು ತಿಂಗಳ ಹಿಂದೆ ಮೆಸೇಜ್ ಮೂಲಕ ಪರಿಚಯಿಸಿಕೊಂಡ ತರುಣಿ ಬಳಿಕ ಪರಚಯಸ್ಥಳಾಗಿದ್ದಳು. ಮಂಗಳೂರಿಗೆ ಬರ ಹೇಳಿ ಅಲ್ಲಿಯೂ ಮಾತನಾಡಿ ಸೆಲ್ಪೀ ತೆಗೆಸಿಕೊಂಡಿದ್ದಳು. ಬಳಿಕ ವೀಡಿಯೋ ಕಾಲ್ ಮಾಡಿ ನನ್ನ ದೇಹದ ಅಶ್ಲೀಲ ಭಂಗಿಗಳನ್ನು ನೋಡಿ ರೆಕಾಡ್೯ ಮಾಡಿಕೊಂಡಿದ್ದಳು.
ಬಳಿಕ ಆಕೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆದರೆ ಆಕೆಯ ಕಡೆಯವರಾದ ಇತರ ಪುರುಷರು ಸಂಪರ್ಕಿಸಿ ಲಕ್ಷಾಂತರ ರೂ. ಬೇಡಿಕೆ ಇಟ್ಡಿದ್ದರು. ಹಣ ನೀಡದಿದ್ದರೆ ಅಶ್ಲೀಲ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ನಿರಂತರ ಬೆದರಿಕೆ ಒಡ್ಡಿ ನನ್ನಿಂದ ಎರಡು ಕಂತುಗಳಲ್ಲಿ ಮೂವತ್ತು ಲಕ್ಚ ರೂ. ವಸೂಲು ಮಾಡಿದ್ದಾರೆ. ಇನ್ನಷ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.