HEALTH TIPS

ಆಯಕ್ಸಿಸ್ ಹೈಪರ್ಸೋಮ್ನಿಯಾ ಕಾಯಿಲೆ: ವರ್ಷದ 300 ದಿನಗಳು ನಿದ್ದೆಯಲ್ಲೇ ಕಳೆಯುವ ವ್ಯಕ್ತಿ

          ನಿಮಗೆಲ್ಲಾ ಕುಂಭಕರ್ಣನ ಕತೆ ಗೊತ್ತಿರುತ್ತದೆ ಅಲ್ವಾ? ಇನ್ನು ಸ್ವಲ್ಪ ಅಧಿಕ ಹೊತ್ತು ನಿದ್ದೆ ಮಾಡುವವರನ್ನು ಮನೆಯಲ್ಲಿ 'ಎಷ್ಟು ಹೊತ್ತು ನಿದ್ದೆ ಮಾಡುತ್ತೀಯಾ? ಒಳ್ಳೆ.... ಕುಂಭಕರ್ಣನ ಹಾಗೆ' ಎಂದು ಬೈಯ್ಯುವುದೂ ಉಂಟು. ಕೆಲವರು ಇಂದು ಮಲಗಿದರೆ ಏಳಲು ನಾಳೆ ಮಧ್ಯಾಹ್ನವಾಗಬಹುದು, ಇನ್ನು ಕೆಲವರು ಎರಡು ದಿನ ಕೂಡ ನಿದ್ದೆ ಮಾಡುತ್ತಾರೆ ಆದರೆ ಇಲ್ಲೊಬ್ಬ ವ್ಯಕ್ತಿ ಥೇಟ್‌ ಕುಂಭಕರ್ಣನಂತೆಯೇ ವರ್ಷದ 300 ದಿನಗಳನ್ನು ನಿದ್ದೆಯಲ್ಲೇ ಕಳೆಯುತ್ತಾನಂತೆ.

          ಈ ಕುಂಭಕರ್ಣ ಇರುವುದು ರಾಜಸ್ಥಾನದ ನಾಗೌರ್‌ನಲ್ಲಿ. ಈತ ಒಮ್ಮೆ ಮಲಗಿದರೆ 25 ದಿನಗಳವರೆಗೆ ಗಾಢ ನಿದ್ದೆ ಮಾಡುತ್ತಾನಂತೆ. ಈತನ ಹೆಸರು ಪುರ್ಕಾರಂ, 23 ವರ್ಷಗಳಿಂದ ಈತನಿಗೆ ನಿದ್ದೆ ಮಾಡುವ ಕಾಯಿಲೆ ಇದೆ, ಇದನ್ನು ವೈದ್ಯಕೀಯ ಭಾಷೆಯಲ್ಲಿ ಆಯಕ್ಸಿಸ್ ಹೈಪರ್ಸೋಮ್ನಿಯಾ ಎಂದು ಕರೆಯಲಾಗುವುದು.

           42 ವರ್ಷದ ಪುರ್ಕಾರಂ ಕಳೆದ 25 ವರ್ಷಗಳಿಂದ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಹೊರಗಡೆ ಕಾಣುವುದೇ ಬಲು ಅಪರೂಪ. ಮೊದ-ಮೊದಲಿಗೆ ಪುರ್ಕಾರಂ ತುಂಬಾ ಹೊತ್ತು ಮಲಗುತ್ತಿದ್ದಾಗ ಭಯಬಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆವಾಗ 15 ದಿನಗಳವರೆಗೆ ನಿದ್ದೆ ಮಾಡುತ್ತಿದ್ದರು. ವರ್ಷಗಳು ಕಳೆಯುತ್ತಿದ್ದಂತೆ ಅವರ ನಿದ್ದೆಯ ಸಮಯ ಕೂಡ ಹೆಚ್ಚಾಗುತ್ತೆ, ಈಗೀಗ 20-25 ದಿನದವರೆಗೆ ನಿದ್ದೆ ಮಾಡುತ್ತಿದ್ದಾರೆ.

           ಈತ ನಿದ್ದೆ ಮಾಡುವಾಗ ಆತನನ್ನು ಸ್ನಾನ ಮಾಡಿಸುವುದು, ನಿದ್ದೆಯಲ್ಲೇ ತಿನಿಸುವುದು ಎಲ್ಲವನ್ನೂ ಮನೆಯವರೇ ಮಾಡಿಸಬೇಕಾಗುತ್ತದೆ. ನಮಗೆಲ್ಲಾ ನಿದ್ದೆ ಮಾಡಿ ಎದ್ದಾಗ ತುಂಬಾ ಆರಾಮ ಅನಿಸುವುದು, ಆದರೆ ಪುರ್ಕಾರಂಗೆ ತುಂಬಾ ದಿನಗಳ ನಿದ್ದೆ ಮಾಡುವುದರಿಂದ ತುಂಬಾ ಸುಸ್ತು ಅನಿಸುವುದು, ಅಲ್ಲದೆ ವಿಪರೀತ ತಲೆನೋವು ಇರುತ್ತದೆಯಂತೆ.

          ಮಾಧ್ಯಮಗಳ ವರದಿ ಪ್ರಕಾರ ಪುರ್ಕಾರಂ ಪತ್ನಿ ಲಚ್ಮಿ ದೇವಿ ಹಾಗೂ ತಾಯಿ ಕಾನವರಿ ದೇವಿ ಮುಂದೆ ಈತನ ಆರೋಗ್ಯ ಸರಿ ಹೋಗಬಹುದು ಎಂಬ ನಿರೀಕ್ಷೆಯಿಂದ ಇದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries