ಕೋಝಿಕೋಡ್: ಕೋಝಿಕೋಡ್‍ನ ಕುರಚುಂಡಿಲ್‍ನಲ್ಲಿ ಪಕ್ಷಿ ಜ್ವರ ಹಬ್ಬಿರುವ ಬಗ್ಗೆ ಶಂಕೆಗಳುಂಟಾಗಿದೆ. ಕಲಂಗಳಿ ಎಂಬಲಲಿಯ ಖಾಸಗಿ ಕೋಳಿ ಸಾಕಣೆ ಕೇಂದ್ರದಲ್ಲಿ ಸುಮಾರು 300 ರಷ್ಟು ಕೋಳಿಗಳು ಸಾಮೂಹಿಕವಾಗಿ ಸಾವನ್ನಪ್ಪಿವೆ. ಈ ಬಗ್ಗೆ ಜಿಲ್ಲಾಧಿಕಾರಿ ತುರ್ತು ಸಭೆ ಕರೆದು ಪರಿಸ್ಥಿತಿಯನ್ನು ಅವಲೋಕನ ನಡೆಸಿದರು.
ತಿರುವನಂತಪುರ ಪ್ರಾದೇಶಿಕ ಪ್ರಯೋಗಾಲಯದಲ್ಲಿ ನಡೆಸಿದ ಪ್ರಾಥಮಿಕ ಪರೀಕ್ಷೆಯಲ್ಲಿ ಇದು ಪಕ್ಷಿ ಜ್ವರ ಎಂದು ತಿಳಿದುಬಂದಿದೆ. ಭೋಪಾಲ್‍ನ ಲ್ಯಾಬ್ ಗೆ ಕಳಿಸಲಾದ ಅಂತಿಮ ವರದಿಯ ಬಳಿಕ ದೃಢೀಕರಣಗೊಳ್ಳಲಿದೆ.
ಪರೀಕ್ಷಾ ಫಲಿತಾಂಶಗಳು ಲಭ್ಯವಾಗುವಲ್ಲಿಯ ವರೆಗೆ ರೋಗ ದೃಢಪಟ್ಟ 10 ಕಿ.ಮೀ ವಿಸ್ತೀರ್ಣವನ್ನು ಮೇಲ್ವಿಚಾರಣೆ ಮಾಡಲಾಗಿದೆ ಎಂದು ಪಂಚಾಯತಿ ಅಧ್ಯಕ್ಷರು ತಿಳಿಸಿದ್ದಾರೆ. ಕೋಳಿ ಸಾಕಣೆ ಕೇಂದ್ರಗಳನ್ನು ಮುಚ್ಚುವಂತೆಯೂ ಸೂಚಿಸಲಾಗಿದೆ.