HEALTH TIPS

ಜು.31 ರಂದು ಚೀನಾ-ಭಾರತ ಸೇನೆಯ 12 ನೇ ಸುತ್ತಿನ ಮಾತುಕತೆ: ಪ್ರಗತಿಯ ವಿಶ್ವಾಸದಲ್ಲಿ ಭಾರತ

           ನವದೆಹಲಿಭಾರತ-ಚೀನಾ ಸೇನೆ ನಡುವೆ 12 ನೇ ಸುತ್ತಿನ ಮಾತುಕತೆ ಜು.31 ರಂದು ನಡೆಯಲಿದೆ. ಈಶಾನ್ಯ ಲಡಾಖ್ ನಲ್ಲಿ ಉಭಯ ಸೇನೆಗಳ ನಡುವೆ ಘರ್ಷಣೆ ಸಂಭವಿಸಿದ್ದ ಕೇಂದ್ರಗಳಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆಯಲ್ಲಿ ಪ್ರಗತಿ ಸಾಧಿಸುವುದಕ್ಕೆ ಈ ಸಭೆಯ ಮೂಲಕ ಭಾರತ ಎದುರು ನೋಡುತ್ತಿದೆ

        ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಬೆಳಿಗ್ಗೆ 10:30ಕ್ಕೆ ಚೀನಾ ಕಡೆ ಇರುವ ಎಲ್‌ಎಸಿಯ ಮೋಲ್ಡೋ ಗಡಿ ಕೇಂದ್ರದಲ್ಲಿ ಪ್ರಾರಂಭವಾಗಲಿದೆ.

             ಹಾಟ್ ಸ್ಪ್ರಿಂಗ್ಸ್ ಹಾಗೂ ಗೋಗ್ರಾ ಪ್ರದೇಶದಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದು ಮಾತುಕತೆಯ ಕೇಂದ್ರವಾಗಿರಲಿದೆ ಎಂದು ಸೇನಾ ಪಡೆಯ ಮೂಲಗಳು ತಿಳಿಸಿವೆ. ಮೂರುವರೆ ತಿಂಗಳ ನಂತರ ಚೀನಾ-ಭಾರತದ ನಡುವೆ ಮಾತುಕತೆ ನಡೆಯುತ್ತಿದೆ. 11 ನೇ ಸುತ್ತಿನ ಮಾತುಕತೆ ಏ.09 ರಂದು ನಡೆದಿತ್ತು.

           ಪಾಂಗಾಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ಪ್ರದೇಶಗಳಲ್ಲಿ ಉಭಯ ಸೇನೆಗಳೂ ತುಕಡಿಗಳ ಹಾಗೂ ಶಸ್ತ್ರಾಸ್ತ್ರಗಳ ಹಿಂತೆಗೆತವನ್ನು ಫೆಬ್ರವರಿಯಲ್ಲಿ ಪೂರ್ಣಗೊಳಿಸಿವೆ. ಈ ಬಳಿಕ ಸೇನಾ ಹಿಂತೆಗೆತದ ಪ್ರಕ್ರಿಯೆ ಪ್ರಗತಿ ಕಂಡಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries