ತಿರುವನಂತಪುರ: ರಾಜ್ಯದಲ್ಲಿ ನಿನ್ನೆ 3,43,749 ಮಂದಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದಿನಕ್ಕೆ ಇಷ್ಟು ಸಂಖ್ಯೆಯ ಜನರಿಗೆ ಮೊದಲಬಾರಿ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ವ್ಯಾಕ್ಸಿನೇಷನ್ ಹೆಚ್ಚಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಜಾರಿಗೆ ತರಲಾಗಿದೆ. ದಿನಕ್ಕೆ ಎರಡು ಲಕ್ಷದಿಂದ ಎರಡೂವರೆ ಲಕ್ಷ ಲಸಿಕೆಗಳನ್ನು ನೀಡುವ ಗುರಿ ರಾಜ್ಯಕ್ಕೆ ಇತ್ತು. ಕೆಲವೇ ದಿನಗಳಲ್ಲಿ ಈ ಗುರಿಯನ್ನು ಸಹ ಸಾಧಿಸಲಾಗುತ್ತದೆ. ಲಸಿಕೆ ಲಭ್ಯತೆಯ ಕೊರತೆಯಿಂದಾಗಿ ಹೆಚ್ಚಿನ ವ್ಯಾಕ್ಸಿನೇಷನ್ ಕೇಂದ್ರಗಳು ಮತ್ತು ಸ್ಲಾಟ್‍ಗಳನ್ನು ಅನುಮತಿಸಲಾಗಿಲ್ಲ. ಆದರೆ ಎರಡು ದಿನಗಳಲ್ಲಿ 11 ಲಕ್ಷಕ್ಕೂ ಹೆಚ್ಚು ಲಸಿಕೆಗಳು ಲಭ್ಯವಾಗಿರುವುದರಿಂದ, ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡಲು ನಿರ್ಧರಿಸಲಾಯಿತು. ನಿನ್ನೆ ಹೆಚ್ಚಿನ ಜನರಿಗೆ ಲಸಿಕೆ ನೀಡಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಹೆಚ್ಚಿನ ಲಸಿಕೆಗಳು ಲಭ್ಯವಾಗದಿದ್ದಲ್ಲಿ É, ಮತ್ತೊಮ್ಮೆ ಕೊರತೆಯಾಗುವ ಸಾಧ್ಯತೆಯಿದೆ. ವ್ಯಾಕ್ಸಿನೇಷನ್ ಹೆಚ್ಚಿಸಲು ಶ್ರಮಿಸಿದ ಎಲ್ಲ ಆರೋಗ್ಯ ಕಾರ್ಯಕರ್ತರನ್ನೂ ಸಚಿವರು ಶ್ಲಾಘಿಸಿದರು.
ನಿನ್ನೆ 1504 ವ್ಯಾಕ್ಸಿನೇಷನ್ ಕೇಂದ್ರಗಳು ರಾಜ್ಯಾದ್ಯಂತ ವ್ಯವಸ್ಥೆಗೊಳಿಸಲಾಗಿತ್ತು. ಸರ್ಕಾರಿ ಮಟ್ಟದಲ್ಲಿ 1,397 ಕೇಂದ್ರಗಳು ಮತ್ತು ಖಾಸಗಿ ಮಟ್ಟದಲ್ಲಿ 107 ಕೇಂದ್ರಗಳು ಇದ್ದವು. 46,041 ಮಂದಿ ಜನರಿಗೆ ಲಸಿಕೆ ನೀಡಿ ತಿರುವನಂತಪುರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. 39,434 ಮಂದಿ ಜನರಿಗೆ ಲಸಿಕೆ ನೀಡಿ ಎರ್ನಾಕುಳಂ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಎಲ್ಲಾ ಜಿಲ್ಲೆಗಳಲ್ಲಿ 10,000 ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿರುವುದು ಗಮನಾರ್ಹ.
ಪ್ರತಿದಿನ 3 ಲಕ್ಷ ಲಸಿಕೆಗಳನ್ನು ನೀಡಲು ರಾಜ್ಯಕ್ಕೆ ತಿಂಗಳಿಗೆ 90 ಲಕ್ಷ ಲಸಿಕೆಗಳು ಬೇಕಾಗುತ್ತವೆ. ಅದಕ್ಕಾಗಿಯೇ ಕೇಂದ್ರ ತಂಡ ಬಂದಾಗ 90 ಲಕ್ಷ ಲಸಿಕೆಗಳಿಗೆ ಒತ್ತಾಯಿಸಲಾಯಿತು. ಲಸಿಕೆ ಈ ರೀತಿ ಒಟ್ಟಿಗೆ ಬಂದರೆ, ಗರಿಷ್ಠ ಸಂಖ್ಯೆಯ ಜನರಿಗೆ ಲಸಿಕೆ ನೀಡಬಹುದಾಗಿದೆ.
ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 1,70,43,551 ಮಂದಿ ಜನರಿಗೆ ಒಂದು ಮತ್ತು ಎರಡು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಈ ಪೈಕಿ 1,21,47,379 ಮಂದಿಗೆ ಮೊದಲ ಡೋಸ್ ಮತ್ತು 48,96,172 ಮಂದಿ ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಲಭ್ಯವಾಗತೊಡಗಿಡೆ.