ತಿರುವನಂತಪುರ: ಪೆಟ್ರೋಲ್ ಬೆಲೆಯನ್ನು ಇಂದು 35 ಪೈಸೆ ಮತ್ತು ಡೀಸೆಲ್ ಗೆ 29 ಪೈಸೆ ಹೆಚ್ಚಳಗೊಂಡಿದೆ. ಕೋಝಿಕೋಡ್‍ನಲ್ಲಿ ಪೆಟ್ರೋಲ್ ಬೆಲೆ 100 ರೂ.ತಲಪಿದೆ. ಕೋಝಿಕೋಡ್ ನಲ್ಲಿ ಪೆಟ್ರೋಲ್ ಪ್ರಸ್ತುತ 100.06 ರೂ ಮತ್ತು ಡೀಸೆಲ್ ಗೆ 94.62 ರೂ.ಬೆಲೆ ಇದೆ. ತಿರುವನಂತಪುರಂನಲ್ಲಿ ಪೆಟ್ರೋಲ್ ಬೆಲೆ 101.49 ರೂ. ಮತ್ತು ಡೀಸೆಲ್ 96.03 ರೂ. ಆಗಿದೆ. ಕೇರಳ ಸೇರಿದಂತೆ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ನಂತರ ದೇಶದಲ್ಲಿ ಇಂಧನ ಬೆಲೆ ಮತ್ತೆ ಏರಿಕೆಯಾಗಿದೆ.