ಚಂಡೀಗಡ: ಹರ್ಯಾಣದ ಜಾಜ್ಜರ್ ಬಳಿ ಕಡಿಮೆ ತೀವ್ರತೆಯ ಭೂಕಂಪನ ಸಂಭವಿಸಿದ ಕಾರಣ ಸೋಮವಾರ ರಾತ್ರಿ ದಿಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಕಂಪನ ಉಂಟಾಗಿದೆ. ಭೂಕಂಪದ ಪ್ರಮಾಣ 3.7 ರಷ್ಟಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಟ್ವಿಟರ್ ಬಳಕೆದಾರರು ತಮ್ಮ ಭೂಕಂಪದ ಅನುಭವವನ್ನು ಹಂಚಿಕೊಳ್ಳಲು ಆರಂಭಿಸಿದ್ದು, ಭೂಕಂಪನದಿಂದಾಗಿ ತಮ್ಮ ಹಾಸಿಗೆಗಳು ನಡುಗಿದವು ಎಂದು ಕೆಲವರು ಹೇಳಿದ್ದಾರೆ.