HEALTH TIPS

ದೇಶದಲ್ಲಿ ಭಾವಚಿತ್ರವುಳ್ಳ ಗುರುತಿನ ಚೀಟಿ ಇಲ್ಲದ 3.83 ಲಕ್ಷ ಮಂದಿಗೂ ಲಸಿಕೆ

              ನವದೆಹಲಿ: ದೇಶದಲ್ಲಿ ಭಾವಚಿತ್ರವುಳ್ಳ ಗುರುತಿನ ಚೀಟಿ ಇಲ್ಲದಿದ್ದರೂ 3.83 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

          ಭಾವಚಿತ್ರವುಳ್ಳ ಗುರುತು ಚೀಟಿ ದಾಖಲೆಯು ಇಲ್ಲದ ಜನರಿಗೆ ಕೋವಿನ್ ಅಪ್ಲಿಕೇಷನ್ ಮೂಲಕ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವೆ ಭಾರತಿ ಪವಾರ್ ಮಾಹಿತಿ ನೀಡಿದ್ದಾರೆ.

       ಫೋಟೊ ಗುರುತಿನ ಚೀಟಿ ಇಲ್ಲದವರಿಗೆ ಲಸಿಕೆ ನೀಡಲುಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು, ಡಿಜಿಟಲ್ ತಂತ್ರಜ್ಞಾನದ ಸೌಲಭ್ಯವಿರುವ ಜನರು ಲಸಿಕೆ ಕೇಂದ್ರದಲ್ಲಿಯೇ ಹೆಸರು ನೋಂದಣಿ ಮಾಡಿಸಬಹುದಿತ್ತು ಎಂದು ಅವರು ತಿಳಿಸಿದ್ದಾರೆ.


          ಭಾರತದಲ್ಲಿ ಲಸಿಕೆ ಪಡೆದಿರುವ ಎಲ್ಲಾ ಫಲಾನುಭವಿಗಳಿಗೂ ಕೋ-ವಿನ್ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಲೋಕಸಭೆಯಲ್ಲಿ ಶುಕ್ರವಾರ ತಿಳಿಸಿದ್ದಾರೆ.

          ಆಗಸ್ಟ್ ತಿಂಗಳಲ್ಲಿ ಬಯೋಲಾಜಿಕಲ್ ಇ ಕಂಪನಿಯು ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ. ದೇಶದ 94 ಕೋಟಿ ವಯಸ್ಕ ಜನರಿಗೆ ಲಸಿಕೆ ನೀಡಲು ಬಯೋಲಾಜಿಕಲ್ ಇ ಕಂಪನಿಯ ಲಸಿಕಾ ಉತ್ಪಾದನೆಯು ಮಹತ್ವದ ಪಾತ್ರ ವಹಿಸಲಿದೆ.

        ರಷ್ಯಾದ ಸ್ಪುಟ್ನಿಕ್ ಲಸಿಕೆಯ 32 ಲಕ್ಷ ಡೋಸ್ ಭಾರತಕ್ಕೆ ಅಮದು ಆಗಿದೆ. ಇದರ ಪೈಕಿ ಇದುವರೆಗೂ 4.23 ಲಕ್ಷ ಡೋಸ್ ಲಸಿಕೆಯನ್ನು ಮಾತ್ರ ಜನರಿಗೆ ನೀಡಲಾಗಿದೆ.

          ಸ್ಪುಟ್ನಿಕ್ ಲಸಿಕೆಯಲ್ಲಿ 2 ನೇ ಡೋಸ್ ಲಸಿಕೆಯನ್ನು ಮೊದಲ ಡೋಸ್ ನೀಡಿದ ವಯಲ್ ನಿಂದಲೇ ನೀಡಲು ಸಾಧ್ಯವಿಲ್ಲ. ಹೀಗಾಗಿ ಮೊದಲ ಡೋಸ್ ಲಸಿಕೆ ನೀಡಿದ್ದಷ್ಟೇ ಪ್ರಮಾಣದಲ್ಲಿ 2 ನೇ ಡೋಸ್ ಲಸಿಕೆಯ ದಾಸ್ತಾನು ಬಂದ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಸ್ಪುಟ್ನಿಕ್ ಲಸಿಕೆ ನೀಡಲು ಹೈದರಾಬಾದ್ ನ ಡಾಕ್ಟರ್ ರೆಡ್ಡೀಸ್ ಲ್ಯಾಬೋರೇಟರಿ ಕಂಪನಿಯು ಸಿದ್ದತೆ ನಡೆಸುತ್ತಿದೆ.

ಭಾರತದಲ್ಲೇ ಸ್ಪುಟ್ನಿಕ್ ಲಸಿಕೆಯ ಉತ್ಪಾದನೆ ಕೂಡ ಆರಂಭವಾಗಿದೆ. ಸೆಪ್ಟೆಂಬರ್ ತಿಂಗಳಿನಿಂದ ಡಿಸೆಂಬರ್ ಅವಧಿಯಲ್ಲಿ 10 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆಯು ಸಿಗುವ ವಿಶ್ವಾಸದಲ್ಲಿ ಕೇಂದ್ರ ಸರ್ಕಾರ ಇದೆ.


                 40 ಲಕ್ಷ ಡೋಸ್ ಲಸಿಕೆ ನೀಡಿಕೆ

         ಭಾರತದಲ್ಲಿ ಈಗ ನಿತ್ಯ ಸರಾಸರಿ 40 ಲಕ್ಷ ಡೋಸ್ ಲಸಿಕೆಯನ್ನ ನೀಡಲಾಗುತ್ತಿದೆ. ಡಿಸೆಂಬರ್ ನೊಳಗೆ ಎಲ್ಲ ವಯಸ್ಕರಿಗೂ ಲಸಿಕೆ ನೀಡಲು ನಿತ್ಯ ಸರಾಸರಿ 90 ಲಕ್ಷ ಡೋಸ್ ಲಸಿಕೆ ನೀಡಬೇಕು. ಹೀಗಾಗಿ ಈಗ ನೀಡುತ್ತಿರುವ ವೇಗದಲ್ಲೇ ಮುಂದಿನ 5 ತಿಂಗಳು ಕೂಡ ಲಸಿಕೆ ನೀಡಿದರೆ, ಭಾರತವು ಡಿಸೆಂಬರ್ ನೊಳಗೆ ಎಲ್ಲ 94 ಕೋಟಿ ಜನರಿಗೆ 2 ಡೋಸ್ ಲಸಿಕೆ ನೀಡಲು ಸಾಧ್ಯವಿಲ್ಲ.

               ವಿದೇಶಕ್ಕೆ ಎಷ್ಟು ಲಸಿಕೆ ರಫ್ತು?

            ಭಾರತ ಸರ್ಕಾರ ಈ ವರೆಗೂ ವಿದೇಶಗಳಿಗೆ 6.4 ಕೋಟಿ ಡೋಸ್ ಕೊರೊನಾ ಲಸಿಕೆ ರವಾನೆ ಮಾಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

          ಈ ಕುರಿತಂತೆ ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದ್ದು, ಈ ವರ್ಷದ ಜನವರಿ 12 ರಿಂದ ಜುಲೈ 22ರ ಅವಧಿಯಲ್ಲಿ ಒಟ್ಟು 6.4 ಕೋಟಿ ಕೋವಿಡ್ ಲಸಿಕೆಗಳನ್ನು ವಿದೇಶಗಳಿಗೆ ಕಳುಹಿಸಿಕೊಟ್ಟಿದೆ.

          ಲೋಕಸಭೆಯಲ್ಲಿ ಈ ಕುರಿತು ಲಿಖಿತ ಉತ್ತರ ನೀಡಿದ ನಾಗರಿಕ ವಿಮಾನಯನ ಸಚಿವ ವಿ.ಕೆ.ಸಿಂಗ್‌ ಅವರು, ಈ ಅವಧಿಯಲ್ಲಿ ಒಟ್ಟಾಗಿ 42.2 ಕೋಟಿ ಡೋಸ್‌ ಲಸಿಕೆಗಳನ್ನು ವಿಮಾನಗಳ ಮೂಲಕ ರವಾನಿಸಲಾಗಿದೆ. ಈ ಪೈಕಿ 35.8 ಕೋಟಿ ಡೋಸ್‌ ಲಸಿಕೆಗಳನ್ನು ದೇಶೀಯ ವಿಮಾನಗಳ ಮೂಲಕ ಕಳುಹಿಸಲಾಗಿದೆ.
           ಇದೇ ಅವಧಿಯಲ್ಲಿ ದೇಶದಾದ್ಯಂತ ನೀಡಲಾಗಿರುವ ಲಸಿಕೆಯ ಪ್ರಮಾಣ 45 ಕೋಟಿಗೂ ಅಧಿಕವಾಗಿದೆ. ಇವರಲ್ಲಿ 18-44 ವರ್ಷದವರಿಗೆ ನೀಡಿದ 15.38 ಕೋಟಿ ಡೋಸ್‌ ಲಸಿಕೆಗಳು ಸೇರಿವೆ ಎಂದು ತಿಳಿಸಿದ್ದಾರೆ.

             ಶೀಘ್ರ ಮಕ್ಕಳಿಗೂ ಲಸಿಕೆ

          ಕೋವಿಡ್ ಮೂರನೇ ಅಲೆ ವಯಸ್ಕರಿಗಿಂತ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮುಂದಿನ ತಿಂಗಳ ವೇಳೆಗೆ ಭಾರತದಲ್ಲಿ ಮಕ್ಕಳಿಗೂ ಕೋವಿಡ್ ಲಸಿಕೆ ನೀಡುವುದಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಸಂಸತ್​ನಲ್ಲಿ ನಡೆದ ಬಿಜೆಪಿ ಸಂಸದರ ಸಭೆ ವೇಳೆ ತಿಳಿಸಿದ್ದಾರೆ. ಹೀಗಾಗಿ, ಮುಂದಿನ ತಿಂಗಳ ವೇಳೆಗೆ ಮಕ್ಕಳಿಗೂ ಕೊರೋನಾ ಲಸಿಕೆ ಅಭಿಯಾನ ಶುರುವಾಗುವುದು ಬಹುತೇಕ ಖಚಿತವಾಗಿದೆ.

            ಕೆಲವು ದಿನಗಳ ಹಿಂದೆ, ಭಾರತದಲ್ಲಿ ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೂ ಕೊರೊನಾ ಲಸಿಕೆ ನೀಡುವ ಅಭಿಯಾನ ಆರಂಭವಾಗಬಹುದು ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ತಿಳಿಸಿದ್ದರು. ಕೋವಿಡ್ ಲಸಿಕೆಯ ರಾಷ್ಟ್ರೀಯ ತಜ್ಞರ ತಂಡದ ಮುಖ್ಯಸ್ಥ ಡಾ. ಎನ್​ಕೆ ಅರೋರ ಕೂಡ ಸೆಪ್ಟೆಂಬರ್​ನಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ ಎಂದಿದ್ದರು. ಆದರೆ, ಒಂದು ತಿಂಗಳು ಮುಂಚಿತವಾಗಿ ಅಂದರೆ ಆಗಸ್ಟ್​ ವೇಳೆಗೆ ಭಾರತದಲ್ಲಿ ಮಕ್ಕಳಿಗೂ ಕೋವಿಡ್ ಲಸಿಕೆ ಲಭ್ಯವಾಗಲಿದೆ.

                      ಲಸಿಕೆ ನೀಡಿಕೆ ಗುರಿ ವಿಫಲ

            ದೇಶದಲ್ಲಿ ಈ ವರ್ಷದ ಜನವರಿ 16 ರಿಂದ ಕೊರೊನಾ ಲಸಿಕೆ ನೀಡಿಕೆಯ ಅಭಿಯಾನ ಆರಂಭವಾಗಿದೆ. ಜುಲೈ ಅಂತ್ಯಕ್ಕೆ ದೇಶಕ್ಕೆ 51.6 ಕೋಟಿ ಡೋಸ್ ಉತ್ಪಾದನೆಯಾಗಿ ಲಭ್ಯವಾಗುತ್ತೆ. ಜುಲೈ ಅಂತ್ಯದೊಳಗೆ 51.6 ಕೋಟಿ ಡೋಸ್ ಕೊರೊನಾ ಲಸಿಕೆಯನ್ನು ನೀಡಬೇಕೆಂಬ ಗುರಿಯನ್ನು ಕೇಂದ್ರದ ಆರೋಗ್ಯ ಇಲಾಖೆ ಹಾಕಿಕೊಂಡಿತ್ತು.

          ಆದರೆ ಈಗ ಜುಲೈ ಅಂತ್ಯಕ್ಕೆ ಬಂದು ನಿಂತಿದ್ದೇವೆ. ಈಗ ನೋಡಿದರೇ, ಜುಲೈ ಅಂತ್ಯಕ್ಕೆ 51.6 ಕೋಟಿ ಡೋಸ್ ಲಸಿಕೆ ನೀಡಿಕೆಯ ಗುರಿ ಸಾಧನೆಯಲ್ಲಿ ವಿಫಲವಾಗಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತಿದೆ.

         ಜುಲೈ 29ರ ಇಂದು ಬೆಳಗ್ಗೆವರೆಗಿನ ಮಾಹಿತಿ ಪ್ರಕಾರ, ದೇಶದಲ್ಲಿ 45.07 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಜುಲೈ 28ರಂದು ದೇಶದಲ್ಲಿ 43.92 ಲಕ್ಷ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ನಿತ್ಯ 40 ಲಕ್ಷ ಡೋಸ್ ಸರಾಸರಿಯಲ್ಲಿ ಇನ್ನೂ ಮೂರು ದಿನದಲ್ಲಿ 1.20 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲು ಸಾಧ್ಯ.

         ಹೀಗಾಗಿ ಜುಲೈ ಅಂತ್ಯಕ್ಕೆ ಭಾರತದಲ್ಲಿ 46 ಕೋಟಿ ಡೋಸ್ ಕೊರೊನಾ ಲಸಿಕೆಯನ್ನು ಮಾತ್ರ ನೀಡಲು ಸಾಧ್ಯ. ಹೀಗಾಗಿ ನಿಗದಿತ ಗುರಿಗಿಂತ 5.6 ಕೋಟಿ ಡೋಸ್ ಕಡಿಮೆ ಲಸಿಕೆಯನ್ನು ನೀಡಬೇಕಾಗುತ್ತೆ.

           ಕೇಂದ್ರ ಸರ್ಕಾರವು ಭಾರತದಲ್ಲಿ 5 ಮತ್ತು 6ನೇ ಲಸಿಕೆಯ ತುರ್ತು ಅನುಮೋದನೆಗಾಗಿ ಕಾಯುತ್ತಿದೆ. ಇದುವರೆಗೂ ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ಹಾಗೂ ಮಾಡೆರ್ನಾ ಕಂಪನಿಯ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಆದರೆ, ಹೈದರಾಬಾದ್ ನ ಬಯೋಲಾಜಿಕಲ್-ಇ ಕಂಪನಿಯ ಕಾರ್ಬೋವ್ಯಾಕ್ಸ್ ಲಸಿಕೆಯು ತುರ್ತು ಬಳಕೆಗೆ ಇನ್ನೂ ಅರ್ಜಿ ಸಲ್ಲಿಸಿಲ್ಲ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries