ತಿರುವನಂತಪುರ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ನಾಲ್ಕನೇ ಹಂತದಲ್ಲಿ 1,238 ಕೋಟಿ ರೂ.ಗಳ 3.87 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಕೇರಳದಲ್ಲಿ ವಿತರಿಸಲಾಗುವುದು. ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾರತದ ಆಹಾರ ನಿಗಮ ಕೇರಳ ಜನರಲ್ ಮ್ಯಾನೇಜರ್ ವಿ.ಕೆ. ಯಾದವ್ ಈ ವಿಷಯ ತಿಳಿಸಿರುವರು. 2021 ರ ನವೆಂಬರ್ ವರೆಗೆ ರಾಜ್ಯದ 1.54 ಕೋಟಿ ಫಲಾನುಭವಿಗಳಿಗೆ 3.08 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮತ್ತು 0.79 ಲಕ್ಷ ಮೆಟ್ರಿಕ್ ಟನ್ ಗೋಧಿ ಉಚಿತವಾಗಿ ಲಭ್ಯವಾಗಲಿದೆ. ಇದು ಸಾಮಾನ್ಯ ಪಾಲಿಗಿಂತ ಎರಡು ಪಟ್ಟು ಹೆಚ್ಚಳಗೊಂಡಿದೆ ಎಂದವರು ತಿಳಿಸಿರುವರು.
ಭಾರತದ ಆಹಾರ ನಿಗಮವು ಯೋಜನೆಯ ನಾಲ್ಕನೇ ಹಂತಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ರಾಜ್ಯದ ಎಲ್ಲಾ ಭಾಗಗಳನ್ನು ತಲುಪಲು ವ್ಯವಸ್ಥೆ ಮಾಡಿದೆ ಎಂದು ಅವರು ಹೇಳಿದರು. ಕೇರಳದ ಎಫ್‍ಸಿಐ ಡಿಪೆÇೀಗಳಲ್ಲಿ ಆಹಾರ ಧಾನ್ಯಗಳ ಕೊರತೆಯಿಲ್ಲ, ಪ್ರಸ್ತುತ 3.98 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮತ್ತು 0.98 ಲಕ್ಷ ಮೆಟ್ರಿಕ್ ಟನ್ ಗೋಧಿ ಇದೆ ಎಂದು ಯಾದವ್ ಹೇಳಿದ್ದಾರೆ.
ಪಿಎಂಜಿಕೆಎಯ ಮೂರನೇ ಹಂತದ ಅವಧಿಯಲ್ಲಿ, ರಾಜ್ಯದಲ್ಲಿ ಸುಮಾರು 1.54 ಕೋಟಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅವರ ಸಾಮಾನ್ಯ ಆಹಾರ ಧಾನ್ಯದ ಕೋಟಾ ಜೊತೆಗೆ 5 ಕೆಜಿ ಅಕ್ಕಿ / ಗೋಧಿ ನೀಡಲಾಯಿತು. 2020-21ರ ಋತುವಿನಲ್ಲಿ, ಎಫ್‍ಸಿಐ 851.73 ಲಕ್ಷ ಮೆ.ಟನ್ ಭತ್ತವನ್ನು ಸಂಗ್ರಹಿಸಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 10 ರಷ್ಟು ಹೆಚ್ಚಾಗಿದೆ. 2021-22 ಋತುವಿನಲ್ಲಿ, 432.83 ಲಕ್ಷ ಮೆ.ಟನ್ ಗೋಧಿಯನ್ನು ಸಂಗ್ರಹಿಸಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 12 ರಷ್ಟು ಹೆಚ್ಚಾಗಿದೆ.