ಕೊಚ್ಚಿ: ನೌಕಾ ನೆಲೆ, ನೌಕಾ ಘಟಕ ಮತ್ತು ನೌಕಾದಳಕ್ಕೆ ಸೇರಿದ ಸ್ವತ್ತುಗಳ 3 ಕಿ.ಮೀ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕವಲ್ಲದ ವೈಮಾನಿಕ ವಾಹನ ಇಲ್ಲವೇ ಡ್ರೋನ್ ಮತ್ತು ಯುಎವಿಗಳು (ಮಾನವರಹಿತ ವೈಮಾನಿಕ ವಾಹನಗಳು) ಹಾರಾಟಕ್ಕೆ ಭಾರತೀಯ ನೌಕಾಪಡೆ ಶುಕ್ರವಾರ ನಿಷೇಧ ವಿಧಿಸಿದೆ.
"ಈ ನಿಷೇಧವನ್ನು ಉಲ್ಲಂಘಿಸಿದ ಆರ್‌ಪಿಎಗಳು (ರಿಮೋಟ್ ಪೈಲಟ್ ಏರ್‌ಕ್ರಾಫ್ಟ್ ಸಿಸ್ಟಮ್ಸ್) ಸೇರಿದಂತೆ ಯಾವುದೇ ಸಾಂಪ್ರದಾಯಿಕವಲ್ಲದ ವೈಮಾನಿಕ ಹಾರಾಟ ನಡೆಇಸಿದಲ್ಲಿ ಇದನ್ನು ನಾಶಪಡಿಸಲಾಗುವುದು ಅಥವಾ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ, ಅಲ್ಲದೆ ಭಾರತೀಯ ದಂಡ ಸಂಹಿತೆ 121, 121 ಎ, 287, 336, 337 ಮತ್ತು 338 ಸೆಕ್ಷನ್ ಅಡಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಹೇಳಿಕೆ ತಿಳಿಸಿದೆ.
ಕಳೆದ ತಿಂಗಳು ಜಮ್ಮುವಿನ ಭಾರತೀಯ ವಾಯುನೆಲೆಯ ಮೇಲೆ ಡ್ರೋನ್ ದಾಳಿ ನಡೆದ ಹಿನ್ನೆಲೆಯಲ್ಲಿ ನೌಕಾಪಡೆ ಈ ನಿರ್ಧಾರಕ್ಕೆ ಬಂದಿದೆ. ಭಯೋತ್ಪಾದಕ ದಾಳಿ ನಡೆಸಲು ಡ್ರೋನ್ ಬಳಕೆ ದೇಶಕ್ಕೆ ಹೊಸ ಬೆದರಿಕೆಗೆ ನಾಂದಿ ಹಾಡಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.