ನವದೆಹಲಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಸ್ವಾತಿ ಮಲಿವಾಳ್ ಅವರನ್ನು ಮುಂದುವರೆಸಲು ದೆಹಲಿ ಸರ್ಕಾರ ನಿರ್ಧರಿಸಿದೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಮುಂದಿನ ಮೂರು ವರ್ಷಗಳ ಅವಧಿಗೆ ಸ್ವಾತಿ ಮಲಿವಾಳ್ ಅವರನ್ನೇ ಮುಂದುವರೆಸುವ ದಾಖಲೆಗೆ ಸಹಿ ಹಾಕಿ ಆದೇಶ ಹೊರಡಿಸಿದ್ದಾರೆ.
ಹಾಲಿ ಅವರ ಸೇವಾ ವೈಖರಿಗೆ ಮೆಚ್ಚುಗೆ ಸೂಚಿಸಿ ಅವರ ಕಾರ್ಯಾವಧಿಯನ್ನು ದೆಹಲಿ ಸರ್ಕಾರ ಮತ್ತೆ ಮೂರು ವರ್ಷಗಳ ವಿಸ್ತರಣೆ ಮಾಡಿದೆ ಎಂದು ತಿಳಿದುಬಂದಿದೆ. ಮಹಿಳಾ ಆಯೋಗದಲ್ಲಿ ಸ್ವಾತಿ ಮಲಿವಾಳ್ ಅವರಿಗೆ ಇದು ಸತತ 2ನೇ ಅವಧಿಯಾಗಿದೆ. ಈ ಹಿಂದೆ 2018ರಲ್ಲೂ ಅವರ ಅವಧಿಯನ್ನು ಮುಂದುವರೆಸಲಾಗಿತ್ತು.
ಈ ಕುರಿತಂತೆ ಟ್ವೀಟ್ ಕೂಡ ಮಾಡಿರುವ ಸಿಎಂ ಕೇಜ್ರಿವಾಲ್, 'ದೆಹಲಿ ಮಹಿಳಾ ಆಯೋಗವು ಅತ್ಯುತ್ತಮ ಕೆಲಸ ಮಾಡುತ್ತಿದೆ. ಮಲಿವಾಳ್ ಅವರ ಅವಧಿ ಕೊನೆಗೊಳ್ಳುತ್ತಿದೆ. ಹೀಗಾಗಿ ಅವರ ನೇತೃತ್ವದ ಆಯೋಗಕ್ಕೆ ನಾನು ಇನ್ನೊಂದು ಒಂದು ಅವಧಿಯನ್ನು ಅನುಮೋದಿಸಿದ್ದೇನೆ. ಸ್ವಾತಿಜಿ ಮತ್ತು ಅವರ ತಂಡಕ್ಕೆ ಶುಭಾಶಯಗಳು. ಒಳ್ಳೆಯ ಕೆಲಸ ಮಾಡುತ್ತಲೇ ಇರಿ ಎಂದು ಟ್ವೀಟ್ ಮಾಡಿದ್ದಾರೆ.