HEALTH TIPS

ಆನ್‌ಲೈನ್‌ ಗೇಮ್‌ನಲ್ಲಿ 40 ಸಾವಿರ ಕಳೆದುಕೊಂಡ ಬಾಲಕ ಆತ್ಮಹತ್ಯೆಗೆ ಶರಣು

            ಛತ್ತಾರ್‌ಪುರಆನ್‌ಲೈನ್‌ ಗೇಮ್‌ನಲ್ಲಿ ₹40 ಸಾವಿರ ಕಳೆದುಕೊಂಡಿದ್ದಕ್ಕೆ ಬೇಸರಗೊಂಡ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತಾರ್‌ಪುರ ನಗರದಲ್ಲಿ ಶುಕ್ರವಾರ ನಡೆದಿದೆ.

            ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ ಓದುತ್ತಿರುವ ಈ ಬಾಲಕ ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿದ್ದಾನೆ. ಪತ್ರದಲ್ಲಿ, 'ಫ್ರೀ ಫೈರ್‌ ಗೇಮ್‌ ಆಡುವುದಕ್ಕಾಗಿ ₹40 ಸಾವಿರ ವ್ಯರ್ಥ ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ತಾಯಿಯಲ್ಲಿ ಕ್ಷಮೆ ಕೇಳಿದ್ದಾನೆ' ಎಂದು ಡೆಪ್ಯುಟಿ ಸೂಪರಿಂಟೆಂಡ್ ಆಫ್ ಪೊಲೀಸ್ (ಡಿಎಸ್‌ಪಿ)ಶಶಾಂಕ್ ಜೈನ್ ತಿಳಿಸಿದ್ದಾರೆ.

              ತಂದೆ ಪ್ಯಾಥಾಲಜಿ ಲ್ಯಾಬ್ ನಡೆಸುತ್ತಿದ್ದಾರೆ. ತಾಯಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾರೆ. ಈ ಬಾಲಕ ಗೇಮ್‌ ಆಡುವುದಕ್ಕಾಗಿ ತನ್ನ ತಾಯಿಯ ಖಾತೆಯಿಂದ ₹40 ಸಾವಿರ ಪಡೆದುಕೊಂಡಿದ್ದಾನೆ. ಈ ಹಣ ಪಡೆದ ನಂತರ, ತಾಯಿಯ ಮೊಬೈಲ್‌ಗೆ ಸಂದೇಶ ಬಂದಿದೆ. ಹಣ ಪಡೆದಿರುವ ಬಗ್ಗೆ ತಾಯಿ ಮಗನನ್ನು ಗದರಿದ್ದಾರೆ. ಇದರಿಂದ ಬೇಸರಗೊಂಡು ಖಿನ್ನತೆ ಒಳಗಾದ ಬಾಲಕ ಯಾರೂ ಇಲ್ಲದ ಸಮಯದಲ್ಲಿ ಮನೆಯ ಕೋಣೆಯೊಂದರಲ್ಲಿ, ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

            ಇಂಥದ್ದೇ ಘಟನೆಯೊಂದು ಈ ವರ್ಷದ ಜನವರಿಯಲ್ಲಿ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಧಾನಾ ಪಟ್ಟಣದಲ್ಲಿ ನಡೆದಿತ್ತು. ಇದೇ 'ಫ್ರೀ ಫೈರ್‌' ಗೇಮ್‌ ಆಡುವುದಕ್ಕೆ ತಂದೆ ಅಡ್ಡಿಯುಂಟು ಮಾಡಿದರು ಎಂಬ ಕಾರಣಕ್ಕೆ 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries