ನವದೆಹಲಿ: ಕೇಂದ್ರ ಸಚಿವ ಸಂಪುಟದಲ್ಲಿರುವ 78 ಸಚಿವರ ಪೈಕಿ 42 ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದನ್ನು ಘೋಷಿಸಿಕೊಂಡಿದ್ದಾರೆ.
ನಾಲ್ವರ ವಿರುದ್ಧ ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದು, ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್) ವರದಿ. ಜು.07 ರಂದು ಕೇಂದ್ರ ಸಚಿವ ಸಂಪುಟಕ್ಕೆ 15 ಹೊಸ ಕ್ಯಾಬಿನೆಟ್ ಸಚಿವರು, 28 ರಾಜ್ಯ ಖಾತೆ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು.
ಒಟ್ಟಾರೆ ಸಚಿವರ ಪೈಕಿ 33 ಮಂದಿ (ಶೇ.42) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದನ್ನು ಘೋಷಿಸಿಕೊಂಡಿರುವುದನ್ನು ಎಡಿಆರ್ ವರದಿ ಮಾಡಿದೆ.
ಶೇ.24-31 ರಷ್ಟು ಸಚಿವರು ಕೊಲೆ, ಕೊಲೆ ಯತ್ನ, ದರೋಡೆಯಂತಹ ಗಂಭೀರವಾದ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ
ಕೂಚ್ ಬೆಹಾರ್ ಕ್ಷೇತ್ರದ ಸಂಸದ ನಿಸಿತ್ ಪ್ರಮಣಿಕ್ ಅವರನ್ನು ಗೃಹ ಖಾತೆ ರಾಜ್ಯ ಸಚಿವರನ್ನಾಗಿ ನೇಮಕ ಮಾಡಲಾಗಿದ್ದು ಇವರ ವಿರುದ್ಧ ಐಪಿಸಿ ಸೆಕ್ಷನ್ 302 ಪ್ರಕಾರ ಕೊಲೆಗೆ ಸಂಬಂಧಿಸಿದ ಪ್ರಕರಣವಿದೆ. 35 ವರ್ಷದ ಇವರು ಸಚಿವ ಸಂಪುಟದಲ್ಲಿ ಅತ್ಯಂತ ಕಿರಿಯ ಸಚಿವರಾಗಿದ್ದಾರೆ. ಜಾನ್ ಬಾರ್ಲ, ಪ್ರಮಣಿಕ್ , ಪಂಕಜ್ ಚೌಧರಿ, ವಿ ಮುರಳೀಧರನ್ ವಿರುದ್ಧ ಐಪಿಸಿ ಸೆಕ್ಷನ್ 307ರ ಪ್ರಕಾರ ಹತ್ಯೆ ಯತ್ನದ ಪ್ರಕರಣಗಳೂ ದಾಖಲಾಗಿವೆ.