HEALTH TIPS

5ಜಿ ಟೆಕ್ನಾಲಜಿಯು ಜಗತ್ತಿನಲ್ಲೇ ಮಹತ್ವದ ಬದಲಾವಣೆಯನ್ನು ತರಲಿದೆ: ಪ್ರಧಾನಿ ಮೋದಿ

           ನವದೆಹಲಿ: 5ಜಿ ಟೆಕ್ನಾಲಜಿಯು ಜಗತ್ತಿನಲ್ಲೇ ಮಹತ್ವದ ಬದಲಾವಣೆಯನ್ನು ತರಲಿದ್ದು, ಅದಕ್ಕಾಗಿ ಭಾರತ ಪೂರ್ವ ತಯಾರಿ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

         ಡಿಜಿಟಲ್ ಇಂಡಿಯಾ ಆರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅದರ ಫಲಾನುಭವಿಗಳನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಪ್ರಧಾನಿ ಮೋದಿ, ಈ ದಶಕವು ಡಿಜಿಟಲ್ ತಂತ್ರಜ್ಞಾನದಲ್ಲಿನ ಭಾರತದ ಸಾಮರ್ಥ್ಯಗಳನ್ನು ಮತ್ತು ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಅದರ ಪಾಲನ್ನು ಹೆಚ್ಚಿಸುತ್ತದೆ ಎಂದರು.

          ಡಿಜಿಟಲ್ ಸಬಲೀಕರಣದೊಂದಿಗೆ ಯುವಕರು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದನ್ನು ಮುಂದುವರಿಸುತ್ತಾರೆ ಎಂದರು. ಡಿಜಿಟಲ್ ಇಂಡಿಯಾ ಎಂದರೆ ಎಲ್ಲರಿಗೂ ಅವಕಾಶ, ಎಲ್ಲರಿಗೂ ಸೌಲಭ್ಯ, ಎಲ್ಲರ ಭಾಗವಹಿಸುವಿಕೆ. ಡಿಜಿಟಲ್ ಇಂಡಿಯಾ ಎಂದರೆ ಸರ್ಕಾರಿ ವ್ಯವಸ್ಥೆಗೆ ಪ್ರತಿಯೊಬ್ಬರ ಪ್ರವೇಶ. ಡಿಜಿಟಲ್ ಇಂಡಿಯಾ ಎಂದರೆ ಪಾರದರ್ಶಕ, ತಾರತಮ್ಯರಹಿತ ವ್ಯವಸ್ಥೆ ಮತ್ತು ಭ್ರಷ್ಟಾಚಾರದ ಮೇಲಿನ ದಾಳಿ. ಡಿಜಿಟಲ್ ಇಂಡಿಯಾ ಎಂದರೆ ಸಮಯ, ಶ್ರಮ ಮತ್ತು ಹಣವನ್ನು ಉಳಿಸುವುದು. ಡಿಜಿಟಲ್ ಇಂಡಿಯಾ ಎಂದರೆ ವೇಗದ ಲಾಭ, ಪೂರ್ಣ ಲಾಭ. ಡಿಜಿಟಲ್ ಇಂಡಿಯಾ ಎಂದರೆ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂದು ಪ್ರಧಾನಿ ಮೋದಿ ವರ್ಣಿಸಿದರು.

             ಡಿಜಿಟಲ್ ವಹಿವಾಟು ರೈತರ ಜೀವನದಲ್ಲಿ ಅಭೂತಪೂರ್ವ ಬದಲಾವಣೆಯನ್ನು ತಂದಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಅಡಿಯಲ್ಲಿ 1.35 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ 10 ಕೋಟಿಗೂ ಹೆಚ್ಚು ರೈತ ಕುಟುಂಬಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು.

          ಡಿಜಿಟಲ್ ಇಂಡಿಯಾ ಕಾರಣದಿಂದಾಗಿ ಕಳೆದ 6-7 ವರ್ಷಗಳಲ್ಲಿ ಸುಮಾರು 17 ಲಕ್ಷ ಕೋಟಿ ರೂಪಾಯಿಯನ್ನು ವಿವಿಧ ಯೋಜನೆಗಳಡಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries