HEALTH TIPS

ಕೇಂದ್ರ ಸರ್ಕಾರ ಒದಗಿಸಿದ 594 ಟನ್ ನೆಲಗಡಲೆ ವಿತರಿಸದೆ ಬಾಕಿ: ಇನ್ನದು ಪಶುಗಳಿಗೆ ಮೇವನ್ನಾಗಿ ಬಳಸಲು ಸರ್ಕಾರದ ನಿರ್ಧಾರ!

              ತಿರುವನಂತಪುರ: ಕೇಂದ್ರ ಸರ್ಕಾರ ಒದಗಿಸಿಯೂ  ವಿತರಿಸದೆ ಹಾಳಾಗುತ್ತಿರುವ  594.38 ಟನ್ (5,94,384 ಕೆಜಿ) ನೆಲಗಡಲೆಯನ್ನು ಪಶುಗಳ ಮೇವಾಗಿ ಬಳಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ಲಾಕ್ ಡೌನ್ ಸಮಯದಲ್ಲಿ, ಕೇಂದ್ರವು ವಿತರಿಸಿದ ಕಡಲೆಯನ್ನು ರಾಜ್ಯ ಸರ್ಕಾರವು ಬಳಸದೆ ಹಾಳುಗಹೆಡವಿತ್ತು. ಇದನ್ನು ಕೇರಳ ಫೀಡ್ಸ್ ಲಿಮಿಟೆಡ್ ಎಂಬ ರಾಜ್ಯ ಸಾರ್ವಜನಿಕ ವಲಯದ ಸಂಸ್ಥೆಗೆ ಉಚಿತವಾಗಿ ನೀಡಲು ಆಹಾರ ಇಲಾಖೆ ನಿರ್ಧರಿಸಿದೆ.

               ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎ) ಯೋಜನೆಯಡಿ 1.5 ಕೆಜಿ ಹಳದಿ ಮತ್ತು ಗುಲಾಬಿ ಪಡಿತರ ಚೀಟಿ ಸದಸ್ಯರಿಗೆ 5 ಕೆಜಿ ಅಕ್ಕಿ ಮತ್ತು 1 ಕೆಜಿ ನೆಲಗಡಲೆ ಉಚಿತವಾಗಿ ನೀಡಲು ಕೇಂದ್ರ ಸರ್ಕಾರ ರವಾನಿಸಿತ್ತು. ವಿತರಣೆಯು ಜೂನ್ ನಿಂದ ನವೆಂಬರ್ 2020 ರವರೆಗೆ ಇತ್ತು. ಇದರಲ್ಲಿ ಉಳಿದ 594.38 ಟನ್‍ಗಳನ್ನು ರಾಜ್ಯದ 14,000 ಕ್ಕೂ ಹೆಚ್ಚು ಪಡಿತರ ಅಂಗಡಿಗಳಲ್ಲಿ ತಿಂಗಳುಗಟ್ಟಲೆ ಸಂಗ್ರಹಿಸಲಾಗಿದೆ. ಅದರಿಂದ 4000 ಕೆಜಿ ಖಾದ್ಯವನ್ನು ತೆಗೆಯಲಾಗಿತ್ತು. ಆದರೆ ಕಡಲೆ ವಿತರಿಸದೆ ಬಾಕಿಯಾಗಿತ್ತು.

         ಕಡಲೆ ಸುಮಾರು 100 ಎನ್‍ಎಫ್‍ಎಸ್‍ಎ ಗೋಡೌನ್‍ಗಳಲ್ಲಿ ಸಂಗ್ರಹವಾಗಿದೆ. ಮುಂದಿನ ವಾರದಿಂದ ಮೇವಿನ ಬಳಕೆಗಾಗಿ ಇದನ್ನು ಹಸ್ತಾಂತರಿಸಲಾಗುವುದು. 4000 ಕೆಜಿ ಖಾದ್ಯ ನೆಲಗಡಲೆಗಳನ್ನು ಸಪ್ಲೈಕೊ ಮೂಲಕ ಮಾರಾಟ ಮಾಡಲು ಯೋಜಿಸಲಾಗಿದೆ. ಅವರು ರಾಜ್ಯ ಸರ್ಕಾರ ಒದಗಿಸಿದ ಉಚಿತ ಕಿಟ್‍ನಲ್ಲಿ ಬಟಾಣಿ ಸೇರಿಸಲು ಪ್ರಯತ್ನಿಸಿದರೂ ಬಳಿಕ ಅದನ್ನು ಕೈಬಿಡಲಾಯಿತು. ಈ ಹಿಂದೆ, ಕಡಲೆ ಹಾಳಾಗುತ್ತಿರುವ ಬಗ್ಗೆ ಮಾಧ್ಯಮಗಳು ವರದಿಮಾಡಿದ್ದವು. ಆದರೆ ಇದೇ ವೇಳೆ ಚುನಾವಣೆ ಆಗಮಿಸಿದ್ದರಿಂದ ಮತ್ತೆ ಯಾವುದೇ ಪ್ರಕ್ರಿಯೆಗಳೂ ರಾಜ್ಯ ಸರ್ಕಾರದಿಂದ ನಡೆದಿರಲಿಲ.  ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದೀಗ ಅದನ್ನು ಮೇವನ್ನಾಗಿ ಬಳಸುವ ನಿರ್ಧಾರ ಕೈಗೊಳ್ಳಲಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries