HEALTH TIPS

ಎರಡನೇ ಅವಧಿಯ ಪಿಣರಾಯಿ ಸರ್ಕಾರದ 60 ದಿನಗಳಲ್ಲಿ ವಿವಾದಗಳದ್ದೇ ಸರಣಿ: ಅರವತ್ತು ದಿನಗಳಲ್ಲಿ ಮೊದಲ ವಿಕೆಟ್ ಪತನದ ಸಾಧ್ಯತೆ

           ತಿರುವನಂತಪುರಂ: ಎರಡನೇ ಅವಧಿಯ ಪಿಣರಾಯಿ ಸರ್ಕಾರ 62 ದಿನಗಳನ್ನು ಅವಲೋಕಿಸಿದಾಗ ವಿವಾದಗಳ ಸರಣಿಗಳನ್ನು ಎದುರಿಸಿರುವುದು ಗಮನಾರ್ಹವಾಗಿ ಕಂಡುಬರುತ್ತದೆ. ಕೋವಿಡ್ ಬಿಕ್ಕಟ್ಟಿನ ಹೊರತಾಗಿಯೂ, ಪ್ರಣಾಳಿಕೆಯಲ್ಲಿನ ಭರವಸೆಗಳ ಸಾಕಾರತೆಗೆ ಸರ್ಕಾರವು ನೀಡಿದ್ದ ಘೋಷಣೆಗಳನ್ನು ಜಾರಿಗೊಳಿಸಲು ತಿಣುಕಾಡಿದ್ದು ಕಂಡುಬರುತ್ತದೆ. ಕೋವಿಡ್ ಪ್ಯಾಕೇಜ್ ಮತ್ತು 20 ಲಕ್ಷ ಜನರಿಗೆ ಉದ್ಯೋಗ ಸೇರಿದಂತೆ ಮೊದಲ ಬಜೆಟ್ ಮತ್ತು 100 ದಿನಗಳ ಕ್ರಿಯಾ ಯೋಜನೆ ಜಾರಿಗೊಳಿಸುವ ಭರವಸೆಗಳನ್ನು ಜನರು ಶ್ಲಾಘಿಸಿದ್ದರು.

                    ಆದರೆ ಸರ್ಕಾರವು ವಿರಾಮಗಳಿಲ್ಲದ ವಿವಾದದಿಂದ ಬಳಲುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನಗಳಲ್ಲಿ ಮರಮಟ್ಟುಗಳ ಮಾರಾಟ ವಂಚನೆ ವಿವಾದ ಭುಗಿಲೆದ್ದಿತು. ಲೂಟಿ ಪ್ರಕರಣದಲ್ಲಿ ಮಾಜಿ ಕಂದಾಯ ಸಚಿವರು ಮತ್ತು ಅರಣ್ಯ ಸಚಿವರು ಇಬ್ಬರೂ ವಿಚಾರಣೆಯಲ್ಲಿದ್ದಾರೆ.

              ಇಂದಿಗೂ ಸರ್ಕಾರ ವಿವಾದದಿಂದ ಮುಕ್ತವಾಗಿಲ್ಲ. ಏತನ್ಮಧ್ಯೆ, ಮಹಿಳಾ ಆಯೋಗದ ಅಧ್ಯಕ್ಷರು ಬಳಸಿದವಿವಾದಾತ್ಮಕ ಪದ ಪ್ರಯೋಗ ಗುಲ್ಲೆಬ್ಬಿಸಿತು. ಕೊನೆಗೆ, ವಿವಾದದಲ್ಲಿ ಅಧ್ಯಕ್ಷರನ್ನು ಉಚ್ಚಾಟಿಸುವ ಮೂಲಕ ಸರ್ಕಾರ ತಪ್ಪಿಸಿಕೊಂಡಿದೆ.

        ಬಳಿಕ, ರಾಷ್ಟ್ರಮಟ್ಟದಲ್ಲಿ ಚರ್ಚಿಸಲ್ಪಟ್ಟ ಕೈಟೆಕ್ಸ್ ವಿವಾದವು ಸರ್ಕಾರ ಮತ್ತು ಕೇರಳದ ಬಗ್ಗೆ ಋಣಾತ್ಮಕ ಚಿಂತನೆಗೆ ಎಡೆಮಾಡಿ, ಎಡಪಕ್ಷದ ವರ್ಚಸ್ಸಿಗೆ ಕುಂದುತಂದಿತು. ಚಿನ್ನ ಕಳ್ಳಸಾಗಣೆ, ಮಹಿಳಾ ದೌರ್ಜನ್ಯ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಸೇರಿದಂತೆ ಅಪರಾಧಗಳಲ್ಲಿ ಪಕ್ಷದ ಕಾರ್ಯಕರ್ತರು ಭಾಗಿಗಳಾಗುವ ಮೂಲಕ ಸರ್ಕಾರವನ್ನು ದುರ್ಬಲಗೊಳಿಸಿದೆ. ಕೋವಿಡ್ ಸಾವಿನ ಸಂಖ್ಯೆಯಲ್ಲಿನ ವ್ಯತ್ಯಾಸಗಳು ಇತ್ತೀಚೆಗೆ ಬೆಳಕಿಗೆ ಬಂದಿದ್ದರಿಂದ ಸರ್ಕಾರದ ನಡೆಗಳೂ ಅನುಮಾನಾಸ್ಪದವಾಗಿವೆ.

               ಈ ಎಲ್ಲದರ ಮಧ್ಯೆ, ಸರ್ಕಾರ ಅಧಿಕಾರದಲ್ಲಿರುತ್ತ ಸಚಿವ ಎ.ಕೆ.ಶಶೀಂದ್ರನ್ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡರು. ದೂರು ದಾಖಲಿಸಿದ ಹುಡುಗಿಯ ತಂದೆಯನ್ನು ಕರೆಸಿ ದೂರನ್ನು ಸರಿಯಾದ ರೀತಿಯಲ್ಲಿ ಪರಿಹರಿಸಬೇಕೆಂದು ಸಚಿರು ಹೇಳಿರುವರೆಂಬ ಮಾತುಗಳೂ ಸರ್ಕಾರವನ್ನು ಕಷ್ಟಕ್ಕೆ ತಳ್ಳಿದೆ. 

              ದೂರನ್ನು ಹಿಂಪಡೆಯಲು ಅಥವಾ ಇತ್ಯರ್ಥಗೊಳಿಸಲು ಸಚಿವರು ಬಾಲಕಿಯ ತಂದೆಗೆ ಕರೆ ಮಾಡಿರುವುದು ಸ್ಪಷ್ಟವಾಗಿದೆ. ಈ ವಿಷಯದಲ್ಲಿ ಸರ್ಕಾರ ಸಚಿವರೊಂದಿಗಿದೆ ಎಂದು ಹೇಳಿದ್ದರೂ, ವಿವಾದ ಎಷ್ಟು ದಿನ ಮುಂದುವರಿಯುತ್ತದೆ ಎಂಬುದನ್ನು ಮುಖ್ಯಮಂತ್ರಿ ಶೀಘ್ರದಲ್ಲೇ ನಿರ್ಧರಿಸಬಹುದು. ಸಚಿವ ಎ.ಕೆ.ಶಶೀಂದ್ರನ್ ಅವರು ಹಿಂದಿನ ಸರ್ಕಾರದ ಅವಧಿಯಲ್ಲೂ ದೂರವಾಣಿ ಕರೆ ವಿವಾದದಲ್ಲಿ ಸಿಲುಕಿ ರಾಜೀನಾಮೆ ನೀಡಬೇಕಾಯಿತು. ಆದರೆ ಸರ್ಕಾರ ಇನ್ನೂ ಪಾಠ ಕಲಿತಿಲ್ಲ ಎಂಬುದು ವಿಶೇಷವಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries