ನವದೆಹಲಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) 61 ಡ್ರೋನ್‌ಗಳು ಮತ್ತು ನಾಲ್ಕು ಸುರಂಗಗಳನ್ನು ಪತ್ತೆ ಮಾಡಿದೆ ಎಂದು ಬಿಎಸ್‌ಎಫ್ ಮುಖ್ಯಸ್ಥ ರಾಕೇಶ್ ಅಸ್ತಾನಾ ತಿಳಿಸಿದ್ದಾರೆ.
ಬಿಎಸ್ಎಫ್ ಆಯೋಜಿಸಿದ್ದ 'ರುಸ್ತಮ್ಜಿ ಸ್ಮಾರಕ ಉಪನ್ಯಾಸ'ದಲ್ಲಿ ಮಾತನಾಡ ಅವರು, ಕಳೆದ ಒಂದು ವರ್ಷದಲ್ಲಿ 22 ಒಳನುಸುಳುಕೋರರನ್ನು ಹತ್ಯೆ ಮಾಡಲಾಗಿದ್ದು, 165 ಜನರನ್ನು ಗಡಿಯಲ್ಲಿ ಬಂಧಿಸಲಾಗಿದೆ ಎಂದು ಗಡಿ ಪಡೆಯ ಮುಖ್ಯಸ್ಥರು ಬಹಿರಂಗಪಡಿಸಿದ್ದಾರೆ.
2,786 ಕೋಟಿ ರೂ. ಮೌಲ್ಯದ 633 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 55 ಶಸ್ತ್ರಾಸ್ತ್ರಗಳು ಮತ್ತು 4,233 ಸುತ್ತು ಮದ್ದುಗುಂಡುಗಳನ್ನು ಬಿಎಸ್ಎಫ್ ಮುಖ್ಯಸ್ಥರು ತಿಳಿಸಿದ್ದಾರೆ.
ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ 12,821 ಕೆಜಿ ಮಾದಕ ವಸ್ತುಗಳು, 61 ಶಸ್ತ್ರಾಸ್ತ್ರಗಳು ಮತ್ತು 7,976 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹನ್ನೆರಡು ನುಸುಳುಕೋರರು ಮತ್ತು ಕಳ್ಳಸಾಗಾಣಿಕೆದಾರರು ಸಾವನ್ನಪ್ಪಿದ್ದಾರೆ. 3,984 ಜನರನ್ನು ಗಡಿ ಪ್ರವೇಶಿಸದಂತೆ ತಡೆಹಿಡಿಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಒಳನುಸುಳುವಿಕೆ, ಮಾನವ ಕಳ್ಳಸಾಗಣೆ, ಮಾದಕ ವಸ್ತುಗಳು, ಶಸ್ತ್ರಾಸ್ತ್ರ ಮತ್ತು ಗೋವು ಕಳ್ಳಸಾಗಣೆ, ಸುರಂಗಗಳು ಮತ್ತು ಡ್ರೋನ್‌ಗಳು ದೊಡ್ಡ ಸವಾಲುಗಳಾಗಿದ್ದು ಪಡೆಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
'ಬಿಎಸ್ಎಫ್ ಉಗ್ರರ ಸುರಂಗ ಮಾರ್ಗಗಳನ್ನಷ್ಟೇ ಕಂಡುಹಿಡಿದಿಲ್ಲ. ಅದರ ಜೊತೆಗೆ ಅದರಿಂದ ಎಷ್ಟು ಜನ ಒಳನುಸುಳಿರಬಹುದು ಎಂಬುದನ್ನು ಅಧ್ಯಯನ ಮಾಡಿದೆ. ಗಡಿಯುದ್ದಕ್ಕೂ ಭಾರತದೊಳಕ್ಕೆ ಹೆಚ್ಚಿನ ಸುರಂಗಗಳನ್ನು ಅಗೆದಿಲ್ಲ ಎಂದು ನಾವು ಖಚಿತಪಡಿಸುತ್ತಿದ್ದೇವೆ. ನಾವು ಸಹ ಹೊಸ ಬೇಲಿಗನ್ನು ನಿರ್ಮಿಸುತ್ತಿರುವುದಾಗಿ ಅಮಿತ್ ಶಾ ಹೇಳಿದರು.