HEALTH TIPS

ವಿದೇಶಗಳಿಗೆ 6.4 ಕೋಟಿ ಡೋಸ್ ಕೊರೊನಾ ಲಸಿಕೆ ರವಾನೆ: ಕೇಂದ್ರ ಸರ್ಕಾರ

      ನವದೆಹಲಿ: ಭಾರತ ಸರ್ಕಾರ ಈ ವರೆಗೂ ವಿದೇಶಗಳಿಗೆ 6.4 ಕೋಟಿ ಡೋಸ್ ಕೊರೊನಾ ಲಸಿಕೆ ರವಾನೆ ಮಾಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

        ಈ ಕುರಿತಂತೆ ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದ್ದು, ಈ ವರ್ಷದ ಜನವರಿ 12 ರಿಂದ ಜುಲೈ 22ರ ಅವಧಿಯಲ್ಲಿ ಒಟ್ಟು 6.4 ಕೋಟಿ ಕೋವಿಡ್ ಲಸಿಕೆಗಳನ್ನು ವಿದೇಶಗಳಿಗೆ ಕಳುಹಿಸಿಕೊಟ್ಟಿದೆ.

        ಲೋಕಸಭೆಯಲ್ಲಿ ಈ ಕುರಿತು ಲಿಖಿತ ಉತ್ತರ ನೀಡಿದ ನಾಗರಿಕ ವಿಮಾನಯನ ಸಚಿವ ವಿ.ಕೆ.ಸಿಂಗ್‌ ಅವರು, ಈ ಅವಧಿಯಲ್ಲಿ ಒಟ್ಟಾಗಿ 42.2 ಕೋಟಿ ಡೋಸ್‌ ಲಸಿಕೆಗಳನ್ನು ವಿಮಾನಗಳ ಮೂಲಕ ರವಾನಿಸಲಾಗಿದೆ. ಈ ಪೈಕಿ 35.8 ಕೋಟಿ ಡೋಸ್‌ ಲಸಿಕೆಗಳನ್ನು ದೇಶೀಯ ವಿಮಾನಗಳ ಮೂಲಕ  ಕಳುಹಿಸಲಾಗಿದೆ. 

         ಈ ಅವಧಿಯಲ್ಲಿ ದೇಶದಾದ್ಯಂತ ನೀಡಲಾಗಿರುವ ಲಸಿಕೆಯ ಪ್ರಮಾಣ 45 ಕೋಟಿಗೂ ಅಧಿಕವಾಗಿದೆ. ಇವರಲ್ಲಿ 18–44 ವರ್ಷದವರಿಗೆ ನೀಡಿದ 15.38 ಕೋಟಿ ಡೋಸ್‌ ಲಸಿಕೆಗಳು ಸೇರಿವೆ ಎಂದು ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries