ನವದೆಹಲಿ: ಹಾಲಿ ವರ್ಷ ದೇಶದಲ್ಲಿ 69 ಬಾರಿ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ತೈಲೋತ್ಪನ್ನಗಳ ದರ ಏರಿಕೆಯಿಂದಲೇ ಕೇಂದ್ರ ಸರ್ಕಾರ ಬರೊಬ್ಬರಿ 4.91ಲಕ್ಷ ಕೋಟಿ ರೂ ಆದಾಯಗಳಿಸಿದೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿತ್ಯವೂ ಏರಿಕೆಯಾಗುತ್ತಿದೆ. ತೈಲೋತ್ಪನ್ನಗಳ ದರ ಏರಿಕೆ ವಿಚಾರ ನಿತ್ಯವೂ ಸುದ್ದಿಯಾಗುತ್ತಿದೆ. ಈ ವರ್ಷ ಇಲ್ಲಿವರೆಗೆ ಅದೂ 7 ತಿಂಗಳ ಅವಧಿಯಲ್ಲಿ 69 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗಿದೆ. ಈ ತೈಲ ಬೆಲೆ ಏರಿಕೆಯಿಂದಲೇ ಕೇಂದ್ರ ಸರ್ಕಾರಕ್ಕೆ ಈ ವರ್ಷವೇ ಸರಿಸುಮಾರು 5 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಹೇಳಿದ್ದಾರೆ.
ತೈಲ ಬೆಲೆ ಹೆಚ್ಚಳ ಮತ್ತು ಲಾಭದ ವಿಚಾರದಲ್ಲಿ ಕೇಂದ್ರದ ಮೋದಿ ಸರಕಾರ ವಾಸ್ತವಿಕ ಸಂಗತಿಯನ್ನು ಜನರಿಗೆ ಮನವರಿಕೆ ಮಾಡಿಕೊಡದೆ ರಾಜ್ಯ ಸರ್ಕಾರಗಳನ್ನು ಖಳನಾಯಕನನ್ನಾಗಿ ಮಾಡಲು ಮಾಡಿದೆ ಎಂದು ಅವರು ದೂರಿದ್ದಾರೆ. 'ಮೋದಿ ಸರ್ಕಾರ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ತೈಲದ ಮೇಲಿನ ಸುಂಕಗಳನ್ನು ಇಳಿಕೆ ಮಾಡಿ ಜನರ ಮೇಲಿನ ತೆರಿಗೆ ಭಾರ ಕಡಿಮೆ ಮಾಡುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಇದರಿಂದಾಗಿ ಕಳೆದ ಒಂದು ವರ್ಷದಿಂದಲೂ ಜನರು ಪಡಬಾರದ ಬವಣೆ ಪಡುತ್ತಿದ್ದಾರೆ. ದೇಶದ ನಾನಾ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ನೂರರ ಗಡಿ ದಾಟಿದೆ. ಅದೇ ರೀತಿ ಹಲವು ರಾಜ್ಯಗಳಲ್ಲಿ ಡೀಸೆಲ್ ಬೆಲೆ ಸಹ ನೂರರ ಗಡಿಗೆ ಬಂದು ನಿಂತಿದೆ.ಇನ್ನೂ ಅಡುಗೆ ಸಿಲಿಂಡರ್ ಬೆಲೆ ಬೆಲೆ 850 ರೂಪಾಯಿಗೆ ತಲುಪಿದೆ ಮೇಲಾಗಿ ಯಾವುದೇ ಸಬ್ಸಿಡಿ ಹಣ ಬರುತ್ತಿಲ್ಲ ಹೀಗಾಗಿ ಮಧ್ಯಮ ವರ್ಗದವರ ಜೀವನ ತುಂಬಾ ಕಷ್ಟಕರವಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಅದರಲ್ಲೂ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ ಅಂದರೆ ಕಳೆದ 2014ರಿಂದ ಇಲ್ಲಿವರೆಗೆ ತೈಲೆ ಬೆಲೆ ಹೆಚ್ಚಳ ಮತ್ತು ಅನಿಲ ಸಿಲಿಂಡರ್ ಬೆಲೆ ಹೆಚ್ಚಳದಿಂದ ಸರ್ಕಾರಕ್ಕೆ 25 ಲಕ್ಷ ಕೋಟಿರೂ ರೂಪಾಯಿ ಆದಾಯ ಬಂದಿದೆ. ಜನರ ಕಷ್ಟಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಮತ್ತು ಅವರಿಗೆ ಅನುಕೂಲ ಮತ್ತು ಸೌಲಭ್ಯ ಕಲ್ಪಿಸದೆ ಕೇಂದ್ರ ಸರ್ಕಾರ ಖಜಾನೆ ತುಂಬಿಸಿಕೊಳ್ಳುವುದರಲ್ಲೆ ಬಹಳ ಆಸಕ್ತಿ ತೋರಿದೆ. ಕೆಲವು ರಾಜ್ಯಗಳು ತೈಲಿದ ಮೆಲಿನ ಸುಂಕವನನ್ನು ಕಡಿಮೆ ಮಾಡಿದ ಜನರ ಕಷ್ಟ ನಿವಾರಣೆ ಮಾಡುತ್ತಿವೆ ಅದೇ ರೀತಿ ಪಶ್ಚಿಮ ಬಂಗಾಳ ಸರ್ಕಾರ ತೈಲದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಕನ್ನಡ ಕಷ್ಟ ಜನರ ನಿವಾರಿಸಲು ಪ್ರಯತ್ನ ಮಾಡಬೇಕೆಂದು ಅವರು ಒತ್ತಾಯ ಮಾಡಿದ್ದಾರೆ.