HEALTH TIPS

ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕೋತ್ಸವ: ಸಾರ್ವಜನಿಕ ಶಿಕ್ಷಣಾಲಯಗಳ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳು

                      

       ಕಾಸರಗೋಡು: ದೇಶದ ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕೋತ್ಸವ ಅಂಗವಾಗಿ ಕಾಸರಗೊಡು ಜಿಲ್ಲೆಯ ಸಾರ್ವಜನಿಕ ಶಿಕ್ಷಣಾಲಯಗಳ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. 

                      ರಾಜ್ಯ ಸರಕಾರದ ಆದೇಶ ಪ್ರಕಾರ ಸಾರ್ವಜನಿಕ ಶಿಕ್ಷಣ ಇಲಾ ವತಿಯಿಂದ ಆಗಸ್ಟ್ ನಿಂದ ಸೆಪ್ಟೆಂಬರ್ ತಿಂಗಳ ವರೆಗೆ ಜಿಲ್ಲೆಯ ಸಾರ್ವಜನಿಕ ಶಿಕ್ಷಣಾಲಯಗಳ ವಿದ್ಯಾರ್ಥಿಗಳಿಗಾಗಿ "ಚಿರಸ್ಮರಣೆ" ಎಂಬ ಹೆಸರಿನಲ್ಲಿ ವಿಸ್ತೃತ ಕಾರ್ಯಕ್ರಮಗಳು ಜರುಗಲಿವೆ. ಪ್ರೌಢಶಾಲೆ, ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗಳ ಮಟ್ಟದಲ್ಲಿ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಪ್ರಬಂಧ ರಚನೆ ಸ್ಪರ್ಧೆ ನಡೆಯಲಿದೆ. "ಅಧಿಕಾರ ಶಾಹಿ ವಿರುದ್ಧ ಸಂಗ್ರಾಮದಲ್ಲಿ ಕಯ್ಯೂರು ಆಂದೋಲನದ ಕೊಡುಗೆ" ಎಂಬುದು ವಿಷಯವಾಗಿದೆ. ಶಾಲಾ ಮಟ್ಟದ ಸ್ಪರ್ಧೆ ಆ.5ರ ಮುಂಚಿತವಾಗಿ ಪೂರ್ಣಗೊಳಿಸಲಾಗುವುದು. ಎ-4 ಹಾಳೆಯಲ್ಲಿ ಬರೆದು ಸಿದ್ಧಪಡಿಸಿದ ಪ್ರಬಂಧವನ್ನು ಶಾಲಾ ಮುಖ್ಯಸ್ಥರ ದೃಡೀಕರಣ ಪತ್ರ ಸಹಿತ ಸಲ್ಲಿಸಬೇಕು. 

           ಪ್ರೌಢಶಾಲೆ, ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗಳ ಮಟ್ಟದಲ್ಲಿ ಚಿತ್ರ ರಚನೆ ಸ್ಪರ್ಧೆ ನಡೆಯಲಿದೆ. ಶಾಲಾ, ಪಂಚಾಯತ್/ ನಗರಸಭೆ ಮಟ್ಟದ ಸ್ಪರ್ಧೆ ನಡೆಯಲಿದೆ. ಹಿರಿಯ ಪ್ರಾಥಮಿಕ ವಿಭಾಗ ಮಕ್ಕಳಿಗೆ ಪಂಚಾಯತ್/ ನಗರಸಭೆ ಮಟ್ಟದಲ್ಲಿ ಸ್ಪರ್ಧೆ ಇರುವುದು. ಶಾಲಾ ಮುಖ್ಯಸ್ಥರ ದೃಡೀಕರಣ ಪತ್ರ ಸಹಿತ ಸಲ್ಲಿಸಬೇಕು.   

                   ಪ್ರೌಢಶಾಲೆ ಮಟ್ಟದಲ್ಲಿ "ಬ್ರಿಟಿಷ್ ಆಡಳಿತೆ ವಿರುದ್ಧ ಕಾಸರಗೋಡು ಜಿಲ್ಲೆಯಲ್ಲಿ ನಡೆದ ಜನಪರ ಆಂಧೋಲನಗಳು" ಎಂಬ ವಿಷಯದಲ್ಲಿ ಅಧ್ಯಯನ ಪ್ರಾಕೆಕ್ಟ್ ರಚನೆ ಸ್ಪರ್ಧೆ ಕನ್ನಡ ಮತ್ತು ಮಲೆಯಾಳಂ ನಲ್ಲಿ ನಡೆಯಲಿದೆ. ತಲಾ 5 ಮಂದಿಯ ತಂಡ ಪ್ರಾಜೆಕ್ಟ್ ಸಿದ್ಧಪಡಿಸಬೇಕು. ಶಾಲೆಯಿಮದ ಆಯ್ಕೆ ಮಾಡಲಾದ ಅತ್ಯುತ್ತಮ ಪ್ರಾಜೆಕ್ಟ್  ನ್ನು ಮುಖ್ಯಸ್ಥರ ದೃಡೀಕರಣ ಪತ್ರ ಸಹಿತ ಆಯಾ ಉಪಜಿಲ್ಲಾ ಕಚೇರಿಗೆ ಸಲ್ಲಿಸಬೇಕು. 

              ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗಾಗಿ ಜೀವಚರಿತ್ರೆ ನಿಘಂಟು ರಚನೆ ಸ್ಪರ್ಧೆ ಕನ್ನಡ ಮತ್ತು ಮಲೆಯಾಳಂ ನಲ್ಲಿ ಜರುಗಲಿದೆ. "ಕಾಸರಗೋಡು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ತಿಳಿಯೋಣ" ಎಂಬ ವಿಷಯದಲ್ಲಿ ಸ್ಪರ್ಧೆ ಇರುವುದು. ಶಾಲಾ ಮಟ್ಟದ ಸ್ಪರ್ಧೆ ಆ.14ರ ಮುಂಚಿತವಾಗಿ ಪೂರ್ಣಗೊಳಿಸಬೇಕು. ಎ-4 ಹಾಳೆಯಲ್ಲಿ ಬರೆದು ಸಿದ್ಧಪಡಿಸಿದ ಪ್ರಬಂಧವನ್ನು ಶಾಲಾ ಮುಖ್ಯಸ್ಥರ ದೃಡೀಕರಣ ಪತ್ರ ಸಹಿತ ಸಲ್ಲಿಸಬೇಕು.

                 ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯ ಹೋರಾಟ ಸಂಬಂಧಿ ರಸಪ್ರಶ್ನೆ ಸ್ಪರ್ಧೆ ಕನ್ನಡ ಮತ್ತು ಮಲೆಯಾಳಂ ನಲ್ಲಿ ಜರುಗಲಿದೆ. ಕಾಸರಗೋಡು ಜಿಲ್ಲೆಯಲ್ಲಿ( ಹಳೆಯ ಕಾಸರಗೋಡು ತಾಲೂಕಿನಲ್ಲಿ) ಸ್ವಾತಂತ್ರ್ಯ ಹೋರಾಟ" ಎಂಬುದು ವಿಷಯ.  

         ತದನಂತರ ಸ್ಪರ್ಧಾ ವಿಜೇತರನ್ನು ಬಳಸಿಕೊಂಡು ಸ್ವಾತಂತ್ರ್ಯ ಹೋರಾಟ ಅಧ್ಯಯನ ಯಾತ್ರೆ ನಡೆಯಲಿದೆ. 2 ದಿನಗಳ ಕಾಲ ನಡೆಯುವ ಅಧ್ಯಯನ ಯಾತ್ರೆ ಮಂಜೇಶ್ವರ ಗೋವಿಂದ ಪೈ ಅವರ ಸ್ಮಾರಕ ಕೇಂದ್ರ "ಗಿಳಿವಿಂಡು", ಪೈವಳಿಕೆ, ಕಾಡಗಂ, ಉಬೈದ್ ಸ್ಮಾರಕ ಗ್ರಂಥಾಲಯ, ರಾವಣೇಶ್ವರಂ, ಬೇಕಲಕೋಟೆ, ವೆಳ್ಳಿಕೋತ್, ಅತಿಯಾಂಬೂರು ಎ.ಸಿ.ಕಣ್ಣನ್ ಸ್ಮಾರಕ, ಮಾಂತೋಪ್ ಮೈದಾನ, ಮಡಿಕೈ ಎಚಿಕಾನಂ, ನೀಲೇಶ್ವರ ರಾಜಾಸ್, ಕುಟ್ಟಮತ್ ಸ್ಮಾರಕ, ಕಯ್ಯೂರು ಹೋರಾಟ ಕೇಂದ್ರ ಮೊದಲಾದೆಡೆ ಪರ್ಯಟನೆ ನಡೆಸಲಿದೆ. ವಿವಿಧಕೇಂದ್ರಗಳಲ್ಲಿ ಸಂಸದ, ಶಾಸಕರು, ಸ್ಥಲೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು, ಇತಿಹಾಸ ಪರಿಣತರು ಭಾಗವಹಿಸುವರು.     


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries