ಕಾಸರಗೋಡು: ಜಿಲ್ಲೆಯಲ್ಲಿ ಇಂದು(ಶುಕ್ರವಾರ) 793 ಮಂದಿ ಜನರಿಗೆ ಕೋವಿಡ್ ಸೋಂಕು ದೃಢಪಡಿಸಲಾಗಿದೆ. ಪರೀಕ್ಷಾ ಸಕಾರಾತ್ಮಕ ದರ ಶೇ. 14.6 ರಷ್ಟಿದೆ. ಚಿಕಿತ್ಸೆ ಪಡೆದ 651 ಮಂದಿಗೆ ನೆಗೆಟಿವ್ ಆಗಿದೆ. ಪ್ರಸ್ತುತ, 6434 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 320 ಕ್ಕೆ ಏರಿದೆ.
ಜಿಲ್ಲೆಯಲ್ಲಿ ಒಟ್ಟು 29510 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. ಮನೆಗಳಲ್ಲಿ 28263 ಮಂದಿ ಮತ್ತು ವಿವಿಧ ಪುನರ್ ವಸತಿ ಕೇಂದ್ರಗಳಲ್ಲಿ 1247 ಮಂದಿ ನಿರೀಕ್ಷಣೆಯಲ್ಲಿದ್ದಾರೆ. ಹೊಸದಾಗಿ 1664 ಮಂದಿ ಜನರನ್ನು ಹೊಸತಾಗಿ ಮೇಲ್ವಿಚಾರಣೆ ಮಾಡಲಾಗಿದೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ ಇಂದು 3879 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ (ಆರ್‍ಟಿಪಿಸಿಆರ್ 2196, ಆಂಟಿಜೆನ್ 1670, ಟ್ರುನಾಟ್ 13). 2150 ಮಂದಿಯ ಪರೀಕ್ಷಾ ಫಲಿತಾಂಶಗಳು ಲಭಿಸಲು ಬಾಕಿಯಿದೆ. 1194 ಮಂದಿ ನಿರೀಕ್ಷಣಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಹೊಸದಾಗಿ ದಾಖಲಾದ 697 ಮಂದಿ ಜನರನ್ನು ಆಸ್ಪತ್ರೆಗಳು ಮತ್ತು ಇತರ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. ಆಸ್ಪತ್ರೆಗಳು ಮತ್ತು ಆರೈಕೆ ಕೇಂದ್ರಗಳಿಂದ ಇಂದು 651 ಮಂದಿ ಜನರನ್ನು ಬಿಡುಗಡೆ ಮಾಡಲಾಗಿದೆ.
ಕೋವಿಡ್ ಇದುವರೆಗೆ ಜಿಲ್ಲೆಯ 101246 ಮಂದಿ ಜನರಲ್ಲಿ ದೃಢಪಡಿಸಲಾಗಿದ್ದು, ಇಲ್ಲಿಯವರೆಗೆ 93997 ಮಂದಿ ಜನರು ಕೋವಿಡ್ ಮುಕ್ತರಾಗಿದ್ದಾರೆ.
ಕೇರಳದಲ್ಲಿ ಶುಕ್ರವಾರ 17,518 ಮಂದಿಗೆ ಮತ್ತೆ ಸೋಂಕುಯ ದೃಢಪಡಿಸಲಾಗಿದ್ದು, ಪರೀಕ್ಷಾ ಸಕಾರಾತ್ಮಕ ದರ ಶೇ.13.63 ಆಗಿ ಕಳವಳಕ್ಕೆ ಕಾರಣವಾಗಿದೆ.