ತಿರುವನಂತಪುರ: ರಾಜ್ಯದಲ್ಲಿ ಇಂದು 8037 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ತ್ರಿಶೂರ್ 922, ಪಾಲಕ್ಕಾಡ್ 902, ಮಲಪ್ಪುರಂ 894, ಕೋಝಿಕೋಡ್ 758, ತಿರುವನಂತಪುರ 744, ಕೊಲ್ಲಂ 741, ಎರ್ನಾಕುಳಂ 713, ಕಣ್ಣೂರು 560, ಆಲಪ್ಪುಳ 545, ಕಾಸರಗೋಡು 360, ಕೊಟ್ಟಾಯಂ 355, ಪತ್ತನಂತಿಟ್ಟು 237, ಇಡುಕ್ಕಿ 168, ವಯನಾಡ್ 138 ಎಂಬಂತೆ ಸೋಂಕು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 80,134 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ಪ್ರಮಾಣ ಶೇ.10.03 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,36,36,292 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 102 ಮಂದಿ ಸೋಂಕಿನಿಂದ ಮೃತರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 13,818 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 15 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 7361 ಮಂದಿ ಜನರಿಗೆ ಸೋಂಕು ತಗುಲಿತು. 624 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತ್ರಿಶೂರ್ 917, ಪಾಲಕ್ಕಾಡ್ 496, ಮಲಪ್ಪುರಂ 862, ಕೋಝಿಕೋಡ್ 741, ತಿರುವನಂತಪುರ 648, ಕೊಲ್ಲಂ 739, ಎರ್ನಾಕುಳಂ 689, ಕಣ್ಣೂರು 506, ಆಲಪ್ಪುಳ 527, ಕಾಸರಗೋಡು 359, ಕೊಟ್ಟಾಯಂ 346, ಪತ್ತನಂತಿಟ್ಟು 132,ಇಡುಕ್ಕಿ 164, ವಯನಾಡ್ 135 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು ಮೂವತ್ತೇಳು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 10, ಎರ್ನಾಕುಳಂ 7, ಪಾಲಕ್ಕಾಡ್ 6, ತಿರುವನಂತಪುರ 3, ಕೊಲ್ಲಂ, ಪತ್ತನಂತಿಟ್ಟು, ಕೊಟ್ಟಾಯಂ, ತ್ರಿಶೂರ್ 2, ಇಡುಕಿ, ವಯನಾಡ್ ಮತ್ತು ಕಾಸರಗೋಡು 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 11,346 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1209, ಕೊಲ್ಲಂ 1290, ಪತ್ತನಂತಿಟ್ಟು 459, ಆಲಪ್ಪುಳ 607, ಕೊಟ್ಟಾಯಂ 300, ಇಡುಕ್ಕಿ 318, ಎರ್ನಾಕುಳಂ 1105, ತ್ರಿಶೂರ್ 1513, ಪಾಲಕ್ಕಾಡ್ 943, ಮಲಪ್ಪುರಂ 1188, ಕೋಝಿಕೋಡ್ 1041, ವಯನಾಡ್ 314,ಕಣ್ಣೂರು 406, ಕಾಸರಗೋಡು 653 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,00,626 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 28,66,806 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,94,627 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,70,055 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 24,572 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 1869 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪಿಆರ್ 6 ಕೆಳಗೆ 143, ಟಿಪಿಆರ್. 6 ರಿಂದ 12 ರ ನಡುವೆ 510, ಟಿಪಿಆರ್. 12 ರಿಂದ 18 ರ ನಡುವೆ 293, ಟಿಪಿಆರ್. 18 ಮತ್ತು ಮೇಲ್ಪಟ್ಟ 88 ಸ್ಥಳೀಯ ಸಂಸ್ಥೆಗಳು ಇವೆ.