ತಿರುವನಂತಪುರ: ಪ್ಲಸ್ ಟು, ವಿಎಚ್‍ಎಸ್‍ಇ ಫಲಿತಾಂಶಗಳನ್ನು ಇದೀಗ ಸಚಿವ ಶಿವಂಕುಟ್ಟಿ ಘೋಷಿಸಿದರು. ಈ ಬಾರಿ ರಾಜ್ಯಾದ್ಯಂತ ಶೇ.87.94 ಮಂದಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇ.85.13 ಉತ್ತೀರ್ಣತೆ ದಾಖಲಾಗಿತ್ತು. 2035 ಶಾಲೆಗಳಲ್ಲಿ 3,73,788 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 328702 ಮಂದಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ. ಮುಕ್ತ ಶಾಲಾ ವಿಭಾಗದಲ್ಲಿ ಉತ್ತೀರ್ಣತೆ ಶೇ. 53 ಆಗಿದೆ. 25293 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವರು.
ಮಿಕ್ಕುಳಿದಂತೆ ವಿಜ್ಞಾನ ವಿಭಾಗದಲ್ಲಿ 90.52 ಶೇ., ಮಾನವಿಕತೆ (ಆಟ್ರ್ಸ್) 80.4 ಶೇ., ವಾಣಿಜ್ಯ ಶಾಸ್ತ್ರ 89.13 ಶೇ. ಮತ್ತು ತಾಂತ್ರಿಕ ವಿಭಾಗದಲ್ಲಿ 84.39 ಶೇ.ಉತ್ತೀರ್ಣತೆ ದಾಖಲಾಗಿದೆ. ಎರ್ನಾಕುಳಂ ಜಿಲ್ಲೆಯಲ್ಲಿ (ಶೇ.91.11) ಅತಿ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ. ಅತಿ ಕಡಿಮೆ ಪತ್ತನಂತಿಟ್ಟಲ್ಲಿ ದಾಖಲಾಗಿದೆ.