HEALTH TIPS

ಕರ್ನಾಟಕ ಸೇರಿ 8 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ

              ನವದೆಹಲಿ: ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೂತನ ರಾಜ್ಯಪಾಲರುಗಳನ್ನು ನೇಮಿಸಿದ್ದಾರೆ.

           ಪ್ರಧಾನಿ ಮೋದಿ ಶೀಘ್ರವೇ ಸಂಪುಟ ವಿಸ್ತರಣೆ ಮಾಡಲಿರುವುದಾಗಿ ತಿಳಿದುಬಂದಿದ್ದು, ಕೇಂದ್ರ ಸಚಿವ ಸಂಪುಟ ವಿಸ್ತರಣೆ ವದಂತಿ ಬೆನ್ನಲ್ಲಿಯೇ ಈ ನೇಮಕಗಳನ್ನು ಮಾಡಲಾಗಿದೆ.

                    ಎಂಟು ರಾಜ್ಯಗಳಿಗೆ ನೇಮಕವಾಗಿರುವ ನೂತನ ರಾಜ್ಯಪಾಲರ ಪಟ್ಟಿ ಇಲ್ಲಿದೆ...

1. ಕರ್ನಾಟಕ- ಥಾವರ್ ಚಂದ್ ಗೆಹ್ಲೋಟ್

2. ಗೋವಾ- ಪಿ.ಎಸ್. ಶ್ರೀಧರನ್ ಪಿಳ್ಳೈ

3. ತ್ರಿಪುರ- ಸತ್ಯದೇವ್ ನಾರಾಯಣ್ ಆರ್ಯ

4. ಜಾರ್ಖಂಡ್- ರಮೇಶ್ ಬೈಸ್

5. ಹರಿಯಾಣ- ಬಂಡಾರು ದತ್ತಾತ್ರೇಯ

6. ಮಿಜೋರಾಂ- ಹರಿಬಾಬು ಕಂಭಂಪತಿ

7. ಮಧ್ಯಪ್ರದೇಶ- ಮಂಗುಭಾಯ್ ಚಗನ್‌ಭಾಯ್ ಪಟೇಲ್

8. ಹಿಮಾಚಲ ಪ್ರದೇಶ- ರಾಜೇಂದ್ರನ್ ವಿಶ್ವನಾಥ್ ಅರ್ಲೆಕರ್

            ಕರ್ನಾಟಕಕ್ಕೆ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್: ಕರ್ನಾಟಕಕ್ಕೆ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ನೇಮಕವಾಗಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ 73 ವರ್ಷದ ಥಾವರ್ ಚಂದ್ ಗೆಹ್ಲೋಟ್ ಕೇಂದ್ರ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries