ಹಿಮಾಚಲ ಪ್ರದೇಶ: ಆಸ್ಟ್ರಾ ಜೆನಿಕಾ ಕಂಪೆನಿಯ ಕೋವಿಶೀಲ್ಡ್ ಕೋವಿಡ್ ಲಸಿಕೆಯ ಎರಡು ಡೋಸ್ 65 ವರ್ಷ ಮೇಲ್ಪಟ್ಟ ಜನರಲ್ಲಿ ಸಾವಿನಿಂದ ಶೇ 95ರಷ್ಟು ರಕ್ಷಣೆ ಒದಗಿಸುತ್ತದೆ ಎಂದು ಇಂಗ್ಲೆಂಡ್ ನ ಸಾರ್ವಜನಿಕ ಆರೋಗ್ಯ ಇಲಾಖೆಯ ಲಸಿಕೆ ಪರಿಣಾಮತ್ವದ ವರದಿ ತಿಳಿಸಿದೆ.
ವೈರಸ್ ನಿಂದ ರಕ್ಷಿಸಿಕೊಳ್ಳಲು ಜನರು ತಾವಾಗಿಯೇ ಮುಂದೆ ಬಂದು ಲಸಿಕೆ ಪಡೆಯಬೇಕು ಎಂದು ಇಲಾಖೆ ತಿಳಿಸಿದೆ. ಇತ್ತೀಚಿನ ಅಧ್ಯಯನದ ವರದಿಯಂತೆ, ಕೊರೊನಾ ವೈರಸ್ ನ ಎರಡು ರೂಪಾಂತರಗಳ ಪೈಕಿ ಡೆಲ್ಟಾ ರೂಪಾಂತರ ಹೊಸ ಪ್ರಕರಣಗಳ ಪೈಕಿ ಹೆಚ್ಚಾಗಿ ಕಂಡುಬರುತ್ತಿದೆ.
ಅಲ್ಲದೆ ಜಾಗತಿಕವಾಗಿಯೂ ತೀವ್ರವಾಗಿ ಏರಿಕೆಯಾಗುತ್ತಿದೆ. ಡೆಲ್ಟಾ ರೂಪಾಂತರ ವಿರುದ್ಧ ಲಸಿಕೆಯ ಪರಿಣಾಮತ್ವ ಬಗ್ಗೆ ವರದಿ ಬೆಳಕು ಚೆಲ್ಲಿದೆ ಎಂದು ಇಲಾಖೆ ವರದಿಯನ್ನು ಉಲ್ಲೇಖಿಸಿ ವಕ್ತಾರರು ಹೇಳಿದ್ದಾರೆ.