ತಿರುವನಂತಪುರ: ಕೋವಿಡ್ ಲಸಿಕೆಯ ತೀವ್ರ ಕೊರತೆಯ ಮಧ್ಯೆ ರಾಜ್ಯಕ್ಕೆ ಇಂದು 9,72,590 ಡೋಸ್ ಲಸಿಕೆಗಳು ಇಂದು ರವಾನೆಯಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. 8,97,870 ಡೋಸ್ ಕೋವಿಚೀಲ್ಡ್ ಲಸಿಕೆಗಳು ಮತ್ತು 74,720 ಡೋಸ್ ಕೋವಾಕ್ಸ್ ಲಸಿಕೆಗಳಲ್ಲಿ ಲಭ್ಯವಾಗಿದೆ. ಸಂಜೆ ವೇಳೆಗೆ 5 ಲಕ್ಷ ಲಸಿಕೆ ಎರ್ನಾಕುಳಂ ತಲುಪಿದೆ. ಇದಲ್ಲದೆ, ಎರ್ನಾಕುಳಂನಲ್ಲಿ 1,72,380 ಡೋಸ್ ಕೋವಿಶೀಲ್ಡ್ ಲಸಿಕೆಗಳನ್ನು ಮತ್ತು ಕೋಝಿಕೋಡ್ ವಲಯಕ್ಕೆ 77,220 ಡೋಸ್ ಕೋವಿಶೀಲ್ಡ್ ಲಸಿಕೆಗಳನ್ನು ವಿತರಿಸಲಾಗಿದೆ. ಕೊವಾಕ್ಸ್ ಲಸಿಕೆ ತಿರುವನಂತಪುರಂನಲ್ಲಿ 25,500, ಎರ್ನಾಕುಳಂನಲ್ಲಿ 28,740 ಮತ್ತು ಕೋಝಿಕೋಡ್ ಗೆ 20,480 ಡೋಸ್ ತಲುಪಿದೆ. 1,48,270 ಡೋಸ್ ಕೋವಿಶೀಲ್ಡ್ ಲಸಿಕೆ ಇಂದು ರಾತ್ರಿ ತಿರುವನಂತಪುರಕ್ಕೆ ಬರಲಿದೆ.ಕೊರತೆಯ ಮಧ್ಯೆ ಲಸಿಕೆಗಳು ಇಂದು ತಡವಾಗಿಯಾದರೂ ತಲಪಿಸಲಾಗಿದೆ. ಲಭ್ಯವಿರುವ ಲಸಿಕೆಯನ್ನು ಲಸಿಕೆ ಕೇಂದ್ರಗಳಿಗೆ ಆದಷ್ಟು ಬೇಗ ತಲುಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವರು ಹೇಳಿದರು.
ಪ್ರಸ್ತುತ ರಾಜ್ಯದಲ್ಲಿ ಲಭ್ಯವಿರುವ ಲಸಿಕೆ ಮೂರರಿಂದ ನಾಲ್ಕು ದಿನಗಳವರೆಗೆ ಮಾತ್ರ ಸಾಕಾಗಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಲಸಿಕೆಗಳು ಬೇಕಾಗುತ್ತವೆ. ಲಸಿಕೆ ಕೊರತೆಯನ್ನು ಎದುರಿಸುತ್ತಿರುವ ರಾಜ್ಯಕ್ಕೆ ಆದಷ್ಟು ಬೇಗ ಅಗತ್ಯವಾದ ಲಸಿಕೆ ನೀಡಬೇಕೆಂದು ಒತ್ತಾಯಿಸಿ ಎಡ ಸಂಸದರು ನಡೆಸಿದ ಚರ್ಚೆಯ ವೇಳೆ ಕೇರಳಕ್ಕೆ ಆದಷ್ಟು ಬೇಗ ಹೆಚ್ಚಿನ ಲಸಿಕೆ ಪ್ರಮಾಣವನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವರು ಭರವಸೆ ನೀಡಿದ್ದರು.
ಈವರೆಗೆ ರಾಜ್ಯದಲ್ಲಿ ಒಟ್ಟು 1,90,02,710 ಮಂದಿ ಜನರಿಗೆ ಒಂದು ಮತ್ತು ಎರಡನೇ ಡೋಸ್‌ಗಳನ್ನು ನೀಡಲಾಗಿದೆ. ಈ ಪೈಕಿ 1,32,86,462 ಮಂದಿ ಜನರಿಗೆ ಮೊದಲ ಡೋಸ್ ಮತ್ತು 57,16,248 ಮಂದಿ ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 2021 ರಲ್ಲಿ ಕೇರಳದ ಅಂದಾಜು ಜನಸಂಖ್ಯೆಯ ಪ್ರಕಾರ, ಶೇಕಡಾ 37.85 ರಷ್ಟು ಜನರಿಗೆ ಮೊದಲ ಡೋಸ್ ಮತ್ತು ಶೇಕಡಾ 16.28 ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ. ಇದಲ್ಲದೆ, ಎರಡನೇ ಡೋಸ್ ಸ್ವೀಕರಿಸುವವರ ಶೇಕಡಾವಾರು ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿದೆ.
ಲಸಿಕೆ ಪಡೆದವರಲ್ಲಿ ಮಹಿಳೆಯರದೇ ಮೇಲುಗ್ಯೆಯಾಗಿದೆ. 98,77,701 ಮಂದಿ ಮಹಿಳೆಯರು ಮತ್ತು 91,21,745 ಮಂದಿ ಪುರುಷರಿಗೆ ಲಸಿಕೆ ನೀಡಲಾಗಿದೆ. ಲಸಿಕೆಯನ್ನು 18 ರಿಂದ 44 ವರ್ಷದೊಳಗಿನ 49,27,692 ಮಂದಿ ಜನರಿಗೆ, 45 ರಿಂದ 60 ವರ್ಷದೊಳಗಿನ 66,77,979 ಮಂದಿಗೆ, ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ 73,97,039 ಮಂದಿ ಜನರಿಗೆ ಲಸಿಕೆ ನೀಡಲಾಗಿದೆ.