ಕಾಸರಗೋಡು: ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಭಾಷೆ ಮತ್ತು ತೌಲನಿಕ ಸಾಹಿತ್ಯ ವಿಭಾಗದ ನೇತೃತ್ವದಲ್ಲಿ ಸರಣಿ ರೂಪದಲ್ಲಿ ಜನಾಕರ್ಷಣೆಗಳೊಂದಿಗೆ ನಡೆಯುತ್ತಿರುವ ರಾಷ್ಟ್ರೀಯ ಜಾಲಗೋಷ್ಠಿ ಉಪನ್ಯಾಸ ಕಾರ್ಯಕ್ರಮದ 9ನೇ ಅವತರಣಿಕೆ ಇಂದು ಸಂಜೆ 5 ರಿಂದ ಗೂಗಲ್ ಮೀಟ್ ಮೂಲಕ ನಡೆಯಲಿದೆ.
ಇಂದು "ಮಣ್ಣಿನ ವಾಸನೆಯ ಗಾಂಧಿ" ವಿಷಯದಲ್ಲಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಎಂ. ಎಸ್. ಆಶಾದೇವಿ ಉಪನ್ಯಾಸ ನೀಡುವರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಾಮಾಜಿಕ ವಿಜ್ಞಾನ ನಿಕಾಯದ ಅಧ್ಯಕ್ಷ ಹಾಗೂ ಸರಣಿ ಉಪನ್ಯಾಸ ಮಾಲಿಕೆಗಳ ಸಂಯೋಜಕ ಡಾ. ಮೋಹನ್ ಎ. ಕೆ. ಪ್ರಾಸ್ತಾವಿಕವಾಗಿ ಮಾನಾಡುವರು.
ವಿಶ್ವ ವಿದ್ಯಾನಿಲಯದ ವಿವಿ|ಧ ವಿಭಾಗದ ವಿದ್ಯಾರ್ಥಿಗಳು, ಕನ್ನಡ ನಾಡಿನ ಉದ್ದಗಲದ ಸಾಹಿತ್ಯ-ಸಾಂಸ್ಕøತಿಕ ರಂಗದ ಆಸಕ್ತರು ಪಾಲ್ಗೊಳ್ಳುವರು.
ಆಸಕ್ತರು ಗೂಗಲ್ ಮೀಟ್ ಲಿಂಕ್ ಮೂಲಕ ಭಾಗವಹಿಸಬಹುದು. Join with Google Meet: