ತಿರುವನಂತಪುರ: ಆಗಸ್ಟ್ 9 ರಿಂದ ರಾಜ್ಯದ ಎಲ್ಲಾ ವ್ಯಾಪಾರ ಸಂಸ್ಥೆಗಳು ತೆರೆದಿರುತ್ತವೆ ಎಂದು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ(ಕೆ.ವಿ.ವಿ.ಇ.ಎಸ್.) ತಿಳಿಸಿದೆ. ಇಂದು ನಡೆದ ರಾಜ್ಯ ಸಮಿತಿ ಸಭೆಯ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದ್ದಯ, ಅಂಗಡಿಗಳು ತೆರೆಯುವ ವೇಳೆ ಪೊಲೀಸ್ ಕ್ರಮವಿದ್ದರೆ ಸಾವಿನವರೆಗೂ ಉಪವಾಸ ಮಾಡುವುದಾಗಿ ನಾಯಕರು ಹೇಳಿದರು.
ಕೋವಿಡ್ ವಿಸ್ತರಣೆಯಿಂದಾಗಿ ಅಂಗಡಿಗಳನ್ನು ಇನ್ನೂ ಮುಚ್ಚಲ್ಪಡುವುದಾದರೆ ಸಾವಿರಾರು ವ್ಯಾಪಾರಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ನಾಯಕರು ಹೇಳಿದರು. ಮುಖ್ಯಮಂತ್ರಿ ಹೇಳಿದ್ದರಿಂದ ಈ ಹಿಂದೆಯೇ ನಿರ್ಧರಿಸಿದ್ದ ಆಂದೋಲನವನ್ನು ಮುಂದೂಡಲಾಗಿತ್ತು. ಆದರೆ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ವ್ಯವಹಾರ ಕೇಂದ್ರಗಳನ್ನು ಮುಚ್ಚಿದರೂ, ಟಿಪಿಆರ್ ಕಡಿಮೆಯಾಗಿಲ್ಲ. ಆದ್ದರಿಂದ ಆಗಸ್ಟ್ 9 ರಿಂದ ಎಲ್ಲಾ ಅಂಗಡಿಗಳು ತೆರೆದಿರಲಿವೆ ಎಂದು ನಾಯಕರು ತಿಳಿಸಿದ್ದಾರೆ.
ಓಣಂಗೆ 3 ವಾರಗಳಿರುವಾಗ ಅಂಗಡಿಗಳನ್ನು ತೆರೆಯಲು ಸಾಧ್ಯವಾಗಲಿಲ್ಲ. ಕೆಲವು ದಿನಗಳವರೆಗೆ ಸಂಸ್ಥೆಗಳನ್ನು ತೆರೆಯಲು ಅವಕಾಶ ನೀಡಲಾಗುದೆ.ಆದರೆ ಹಲವೆಡೆ ಅನಿಶ್ಚಿತತೆಯಿದೆ. ಇನ್ನು ಮುಂದೆ ಹೀಗೆ ಮುಂದುವರಿಯಲು ಸಾಧ್ಯವಿಲ್ಲ. ಆನ್‌ಲೈನ್ ವ್ಯವಹಾರ ಕ್ಷೇತ್ರವು ಮುಖ್ಯಮಂತ್ರಿಗೆ ಸಲಹೆಗಾರರನ್ನು ನೇಮಕ ಮಾಡಿಕೊಂಡಿದೆಯೇ ಎಂಬ ಅನುಮಾನವಿದೆ ಎಂದು ಕೆ.ವಿ.ವಿ.ಇ.ಎಸ್.ಗಂಭೀರ ಆರೋಪ ಮಾಡಿದೆ.