ಕಾಸರಗೋಡು: ಕಾಞಂಗಾಡ್‍ನಲ್ಲಿ ಅಪ್ರಾಪ್ತ ಬಾಲಕಿಯನ್ನು ಕಿರುಕುಳ ನೀಡಿದ ಮೂವರನ್ನು ಬಂಧಿಸಲಾಗಿದೆ. ಮೂವರು ಬಂಧಿತರಲ್ಲಿ ಇಬ್ಬರು ಸ್ಥಳೀಯರು.
ಕಿರುಕುಳಕ್ಕೊಳಗಾದ 14 ವರ್ಷದ ಬಾಲಕಿಯನ್ನು ಚೈಲ್ಡ್ ಲೈನ್ ಕಾರ್ಯಕರ್ತರು ನಡೆಸಿದ ಸಮಾಲೋಚನೆಯಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಬಾಲಕಿ ಪೋಲೀಸರಿಗೆ ದೂರು ನೀಡಿದಳು.
ವನಿತಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐದು ಪ್ರಕರಣಗಳು ದಾಖಲಾಗಿವೆ. ಮಗುವಿನ ದೂರಿನಲ್ಲಿ ಹೇಳಿರುವಂತೆ, ಆರೋಪಿಗಳು ಕಳೆದ ಒಂದು ವರ್ಷದಿಂದ ಪೀಡಿಸಿರುವರು ಎನ್ನಲಾಗಿದೆ.
ಬಂಧಿತ ಮೂವರನ್ನು ರಿಮಾಂಡ್ ಮಾಡಲಾಗಿದೆ. ಬಂಧಿತರನ್ನು ಶೀಘ್ರದಲ್ಲೇ ವಿಚಾರಣೆಗೊಳಪಡಿಸಲಾಗುವುದು. ಬಾಲಕಿ ಪ್ರಸ್ತುತ ಮಕ್ಕಳ ಕಲ್ಯಾಣ ಸಮಿತಿಯ ಆರೈಕೆಯಲ್ಲಿದ್ದಾಳೆ.