ಪ್ರತಿ ವರ್ಷ ಜುಲೈ ೧ ರಂದು `ಕನ್ನಡ ಪತ್ರಿಕಾ ದಿನ' ಆಚರಿಸಲಾಗುತ್ತದೆ. ಕನ್ನಡ ಪತ್ರಿಕೋದ್ಯಮ, ಪತ್ರಿಕೆಗಳು ಮೊದಲಾದವಗಳ ಕುರಿತು ಚರ್ಚೆ, ಅವಲೋಕನ ನಡೆಯುತ್ತವೆ. ಪತ್ರಿಕೋದ್ಯಮದ ಪರಿಚಯ ಜನಸಾಮಾನ್ಯರಿಗೆ ಆಗಬೇಕು ಎಂಬ ಉದ್ದೇಶದಿಂದ ಈ ದಿನವನ್ನು ಪತ್ರಿಕಾ ದಿನವೆಂದು ಆಚರಿಸಲಾಗುತ್ತದೆ.
ಇಂದು ಪತ್ರಿಕೋದ್ಯಮವೆಂಬುದು ಕಾಲದ ಸ್ಥಿತ್ಯಂತರದಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ. ಪತ್ರಿಕೋದ್ಯಮದ ರೀತಿ, ಸ್ವರೂಪ ಬದಲಾಗಿದೆ. ಮುದ್ರಣ ಮಾಧ್ಯಮದ ಜಾಗವನ್ನು ಬಹುಪಾಲು ಆನ್ ಲೈನ್ ಪತ್ರಿಕೆಗಳು ಆಕ್ರಮಿಸಿಕೊಳ್ಳುತ್ತಿವೆ. ಸಾಮಾಜಿಕ ತಾಣಗಳು ಕೂಡ ಸುದ್ದಿಗಳನ್ನು ಸೆಕೆಂಡು, ಸೆಕೆಂಡಿಗೂ ಹೊತ್ತು ತರುತ್ತವೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ತಾಂತ್ರಿಕವಾಗಿ ಹೆಚ್ಚು ಸಮೃದ್ಧವಾಗುತ್ತಿವೆ. ಇಂದು ಸುದ್ದಿ ತಿಳಿಯಬೇಕೆಂದರೆ ಬಹುಪಾಲು ಮಂದಿ ಪತ್ರಿಕೆಯನ್ನು ಹಿಡಿದುಕೊಂಡು ಕೂರುವುದಿಲ್ಲ. ಕೈಯಲ್ಲಿ ಸ್ಮಾರ್ಟ್ ಫೋನ್, ಟ್ಯಾಬ್ ಇದ್ದರೆ ಸಾಕು, ಇಂಟರ್ನೆಟ್ ಸಂಪರ್ಕವಿದ್ದರೆ ಜಗತ್ತಿನ ಯಾವ ಭಾಗದ ವಿಷಯವನ್ನು ಕೂಡ ಅಂಗೈಯಲ್ಲಿ ಹಿಡಿದುಕೊಂಡು ನೋಡಬಹುದು ಎಂಬAತಾಗಿದೆ. ತಂತ್ರಜ್ಞಾನದ ಬೆಳವಣಿಗೆ ಸುದ್ದಿ ಮಾಧ್ಯಮದ ಮೇಲೆ ಕೂಡ ಇಷ್ಟರ ಮಟ್ಟಿನ ಪರಿಣಾಮ ಬೀರಿದೆ.
ಕಳೆದೊಂದೂವರೆ ವರ್ಷಗಳಿಂದ ವ್ಯಾಕುಲಗೊಳಿಸುತ್ತಿರುವ ಕೋವಿಡ್ ಕಾರಣದಿಂದ ಪತ್ರಿಕಾ ಮಾಧ್ಯಮ ಕ್ಷೇತ್ರ ವ್ಯಾಪಕ ಸ|ಂಕಷ್ಟಕ್ಕೊಳಗಾಗಿದೆ. ಸಾವಿರಾರು ಪತ್ರಕರ್ತರೂ ದಿಕ್ಕೆಟ್ಟಿದ್ದಾರೆ. ಈ ವರ್ಷದ ಪತ್ರಿಕಾ ದಿನಾಚರಣೆಯ ಈ ಹೊತ್ತಲ್ಲಿ ಬದಲಾದ ವರ್ತಮಾನದ ಸನ್ನಿವೇಶಗಳೂ ಸೇರಿ ಭಿನ್ನ ಚಿಂತನೆಗಳ ಹಾದಿಯ ಬಗೆಗೂ ಪತ್ರಕರ್ತರು ನೋಡಬೇಕಾದ ಸ್ಥಿತಿ ಇದೆ.
ದಿನಾಚರಣೆಯ ಅಂಗವಾಗಿ ಕಾಸರಗೋಡಿನ ಪತ್ರಿಕೋದ್ಯಮ, ಏಳು-ಬೀಳುಗಳು ಮತ್ತು ವರ್ತಮಾನದ ಹೂರಣಗಳೊಡನೆ ಸಮರಸ ಸುದ್ದಿ ಜಿಲ್ಲೆಯ ಹಿರಿಯ ಪತ್ರಕರ್ತ ಸುಬ್ಬಣ್ಣ ಶೆಟ್ಟಿ ಕೆ. ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ವೀಕ್ಷಕರಿಗಾಗಿ ಪ್ರಸಾರಗೊಳ್ಳುತ್ತಿದೆ. ವೀಕ್ಷಿಸಿ, ಪ್ರೋತ್ಸಾಹಿಸಿ ಮತ್ತು ಈ ಸಂವೇದನೆಗಳ ಸಹಯಾತ್ರಿಕರಾಗಿ ಎಂಬ ಕಳಕಳಿಯೊಂದಿಗೆ ವಂದನೆಗಳು.
ಕನ್ನಡ ಪತ್ರಿಕಾ ದಿನದ ಅಂಗವಾಗಿ ವಿಶೇಷ ಸಮರಸ ಸಂವಾದ ಅತಿಥಿ: ಶ್ರೀ .ಸುಬ್ಬಣ್ಣ ಶೆಟ್ಟಿ ಕೆ. ಹಿರಿಯ ಪತ್ರಕರ್ತರು. ಕಾಸರಗೋಡು
0
ಜುಲೈ 01, 2021
Tags