ಭಾರತದ ಉಪಖಂಡದಲ್ಲಿ ಸಿಂಧೂ ನಾಗರಿಕತೆಯ ನಂತರ ಆರ್ಯರು ಒಂದು ವಿಭಿನ್ನ ಸಂಸ್ಕೃತಿಯನ್ನು ಬೆಳೆಸಿದರು. ಸಾ.ಶ.ಪೂ., ೨೦೦೦ದ ಆಸುಪಾಸಿನಲ್ಲಿ ವಾಯುವ್ಯ ದಿಕ್ಕಿನಿಂದ ಅವರು ಭಾರತಕ್ಕೆ ಬಂದಿರಬಹುದೆAದು ನಂಬಲಾಗಿದೆ. ಆರಂಭಿಕ ಆರ್ಯರು ಯಾವುದೇ ಮರಾತತ್ವ ಮೂಲಾಧಾರಗಳನ್ನು ಬಿಟ್ಟು ಹೋಗಿಲ್ಲ. ಆದರೆ ಅವರು ಕೊಟ್ಟಿರುವ ಶ್ರೀಮಂತ ವೈದಿಕ ಸಾಹಿತ್ಯ ಅವರ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುತ್ತದೆ.
ವೇದ ಶಿಕ್ಷಣ ವ್ಯಕ್ತಿಯನ್ನು ಶಕ್ತಿಯಾಗಿ ರೂಪಿಸುತ್ತದೆ. ಆ ಶಕ್ತಿ ಸಾಮಾಜಿಕ ಕಳಕಳಿಯೊಂದಿಗೆ ರಾಷ್ಟç ದೇವೋಭವ ಎಂಬ ಪರಿಕಲ್ಪನೆಯಲ್ಲಿ ಸಮ್ಮಿಳಿತಗೊಂಡು ಸರ್ವೇ ಜನಾಃ ಸುಖಿನೋ ಭವಂತು ಎಂಬ ಸರ್ವರ ಒಳಿತಿನ ಮಹಾ ಸಂಶೋಧನೆಯೂ ಹೌದು.
ಈ ನಿಟ್ಟಿನಲ್ಲಿ ಕಳೆದ ಹಲವು ದಶಕಗಳಿಂದ ವೇದಗಳ ಬಗ್ಗೆ ನೂರಾರು ಶಿಷ್ಯರಿಗೆ ಜ್ಞಾನ ಎರೆದು ಬೆಳೆಸುತ್ತಿರುವವರಲ್ಲಿ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ ಅವರೂ ಒಬ್ಬರು. ಪ್ರಸ್ತುತ ನೀರ್ಚಾಲಿನಲ್ಲಿ ಹಲವು ಮಂದಿ ಯುವ ಆಸಕ್ತರಿಗೆ ಉಚಿತ ವೇದ ಪಾಠವನ್ನು ಬೋಧಿಸುತ್ತಿರುವ ವಿಶ್ವೇಶ್ವರ ಭಟ್ ಅವರೊಂದಿಗೆ ಸಮರಸ ಸುದ್ದಿ ನಡೆಸಿದ ಸಂವಾದದ ಆಯ್ದ ಭಾಗ ಓದುಗರಿಗೆ. ವೀಕ್ಷಿಸಿ, ಪ್ರೋತ್ಸಾಹಿಸಿ.
ಸಮರಸ ಸಂವಾದ:ವೇದ ಕುಲಪತಿ ಪಳ್ಳತ್ತಡ್ಕ ವಿಶ್ವೇಶ್ವರ ಭಟ್: ಉಚಿತ ವೇದ ಶಿಕ್ಷಣದ ಮೂಲಕ ಜ್ಞಾನ ಗಂಗೆ ಹರಿಸುತ್ತಿರುವ ವೇದ ವಸಿಷ್ಠ
0
ಜುಲೈ 04, 2021
Tags