2020ರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ಪ್ರಭಾವಶಾಲಿ ಮತ್ತು ಮಹತ್ವಾಕಾಂಕ್ಷೆಯ ಬೆಳವಣಿಗೆಯಾಗಿದ್ದು, ಅದು ಜ್ವಾಜ್ವಲ್ಯಮಾನವಾಗಿಯೂ ಮತ್ತು ಆಶಾದಾಯಕ ಭವಿಷ್ಯವಾಗಿಯೂ ಕಂಡು ಬರುತ್ತದೆ. ನೀತಿ ಕುರಿತಂತೆ ಸಮಿತಿಯ ಕೆಲವು ಸದಸ್ಯರು ಈ ಬಗ್ಗೆ ಸ್ಪಷ್ಟ ನಿರ್ದೇಶನವನ್ನೂ ನೀಡಿದ್ದಾರೆ. ಬದಲಿಗೆ ಇದು ಸ್ವಾಭಾವಿಕ ಮತ್ತು ನಿರೀಕ್ಷಿತ ಸಂಗತಿಯಾಗಿತ್ತು ಎನಿಸಿತು. ನಾನು ತಿಳಿದುಕೊಂಡAತೆ ತಜ್ಞರಲ್ಲಿ ಪ್ರಸಿದ್ಧ ವಿಜ್ಞಾನಿ ಡಾ. ಕೆ ಕಸ್ತೂರಿ ರಂಗನ್ ಮತ್ತು ಉದ್ಯಮ ಆಡಳಿತದ ಹಿನ್ನೆಲೆ ಹೊಂದಿರುವ ವಿದ್ವಾಂಸ ಡಾ. ಎಂ. ಕೆ. ಶ್ರೀಧರ್ ಮಕಮ್ ಪ್ರಮುಖರು. ಮಕಮ್ ಅವರು ಈಗ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಂಶೋಧನಾ ಮತ್ತು ನೀತಿ ಕೇಂದ್ರದ ಮುಖ್ಯಸ್ಥರಾಗಿದ್ದಾರೆ. ಆದರೆ, ಸಮಿತಿಯಲ್ಲಿ ಹೊಸ ಚಿಂತನೆಗಳ ಮೂಲಕ ಭಾರಿ ಗಮನ ಸೆಳೆದ ಪ್ರತಿನಿಧಿ ಎಂದರೆ ಪ್ರಿನ್ಸ್ಟನ್ ನ ಗಣಿತ ಪ್ರಾಧ್ಯಾಪಕ ಮತ್ತು ಫೀಲ್ಡ್ಸ್ ಪದಕ ವಿಜೇತ ಮಂಜುಲ್ ಭಾರ್ಗವ್. ಇವರು ಭಾರತೀಯ ಶಾಸ್ತ್ರೀಯ ಸಂಗೀತದ ಕುರಿತಂತೆಯೂ ಅಪಾರ ಪ್ರೀತಿ ಆಸ್ಥೆ ಇರಿಸಿಕೊಂಡವರು.
ಆದರೆ ಉಜ್ವಲ ಭವಿಷ್ಯದ ಕಡೆಗೆ ಭಾರತದಂತಹ ದೈತ್ಯನನ್ನು ಎಳೆದೊಯ್ಯ ಬೇಕಿರುವುದು ಕೂಡ ಗಮನಿಸಬೇಕಾದ ಮಹತ್ವದ ಕಾರ್ಯ. ಹೀಗಾಗಿ ನೀತಿಯ ಅಂತಿಮ ಯಶಸ್ಸು ಎಂಬುದು ಗಣನೀಯ ಪ್ರಮಾಣದ ಸಂಪನ್ಮೂಲಗಳ ವಿನಿಯೋಗ ಮತ್ತು ಅನೇಕರ ಸಹಕಾರವನ್ನು ಅವಲಂಬಿಸಿರುತ್ತದೆ. ಎಲ್ಲರಿಗೂ ಈಗಾಗಲೇ ತಿಳಿದಿರುವಂತೆಯಾವುದೇ ನೀತಿ ಉತ್ತಮ ರೀತಿಯಲ್ಲಿ ಅನುಷ್ಠಾನಗೊಂಡಾಗ ಮಾತ್ರ ಅದು ಪರಿಣಾಮಕಾರಿ ಆಗಬಲ್ಲದು.
ಉನ್ನತ ಶಿಕ್ಷಣದ ವಿಷಯಕ್ಕೆ ಬಂದರೆ, ಹಲವಾರು ಗಮನಾರ್ಹ ಸಂಗತಿಗಳು ಎದ್ದು ಕಾಣುತ್ತವೆ. ಮೊದಲನೆಯದಾಗಿ, ಅಧ್ಯಯನ ಶಿಸ್ತುಗಳನ್ನು ಪ್ರತ್ಯೇಕವಾಗಿ ಪರಿಗಣಿಸಿರುವ ಕುರಿತಂತೆ ನೀತಿಯಲ್ಲಿ ತೀಕ್ಷ್ಣ ವಿಮರ್ಶೆ ಇರುವುದನ್ನು ಗಮನಿಸಬಹುದು. ದೇಶದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ ನಮ್ಮಂತಹ ಅನೇಕರಿಗೆ - ಮತ್ತು ಇಂದು ಹಾಗೆಯೇ ಶಿಕ್ಷಣ ಪಡೆಯುತ್ತಿರುವ ಅನೇಕರಿಗೆ ನಿಸ್ಸಂದೇಹವಾಗಿ ಅಧ್ಯಯನ ಶಿಸ್ತುಗಳು ಬದಲಿಸಲು ಸಾಧ್ಯವೇ ಇಲ್ಲದ ಕಠಿಣ ಪೆಟ್ಟಿಗೆಗಳಲ್ಲಿ ಎರಕ ಹೊಯ್ದ ಶಾಶ್ವತ ಅಚ್ಚುಗಳಂತೆ ಕಂಡುಬರುತ್ತಿವೆ. ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗಲೇ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಎಂದು ಪ್ರತ್ಯೇಕ ಬಣ್ಣ ಬಳಿಯಲಾಗುತ್ತದೆ. ಇದರಿಂದ ನಿಮ್ಮ ವೃತ್ತಿಜೀವನದ ಪಾತ್ರ ನಿರ್ಧರಿಸಲು ತೊಂದರೆ ಉಂಟಾಗುತ್ತದೆ. ಏಕೆಂದರೆ ನಿಜಕ್ಕೂ ಬದುಕು ಎಂಬುದು ಈ ಎಲ್ಲವುಗಳ ಸಮ್ಮಿಶ್ರವೇ ಆಗಿರುತ್ತದೆ. ಸ್ಪಷ್ಟವಾಗಿ ಇದೆಲ್ಲಾ ಬ್ರಿಟಿಷ್ ವಸಾಹತುಶಾಹಿ ವಿಶ್ವವಿದ್ಯಾಲಯಗಳಿಂದ ಪ್ರೇರಿತಗೊಂಡ ಪಠ್ಯಕ್ರಮ ಪರಂಪರೆಯಾಗಿದೆ. ಆಕ್ಸ್ ಫರ್ಡ್ ಮಾದರಿಯನ್ನು ಅನುಸರಿಸದೇ ಲಂಡನ್ ವಿಶ್ವವಿದ್ಯಾಲಯದ ಅನುಸಾರ ಪಠ್ಯಕ್ರಮ ರೂಪುಗೊಂಡಿತು. ಪರಿಣಾಮ ಇದು ಭಾರತೀಯರಂತಹ ಕಂದು ವರ್ಣೀಯರನ್ನು ಸಮರ್ಥ ಗುಮಾಸ್ತರನ್ನಾಗಿ ಮಾಡಲು ಮುಂದಾಯಿತು. ಈ ವ್ಯವಸ್ಥೆ ಇಂದಿನವರೆಗೂ ಬದಲಾಗದೆ ಇದೆ. ಈ ಮಧ್ಯೆ ಜಗತ್ತು 21 ನೇ ಶತಮಾನದ ಜ್ಞಾನ ಪರಂಪರೆಯನ್ನು ಪ್ರವೇಶಿಸಿದೆ, ಅಲ್ಲಿ ಸ್ಟ್ಯಾನ್‌ಫೋರ್ಡ್ ಪ್ರಯೋಗಾಲಯದೊಳಗೆ ಗಣಿತ, ಸಂಗೀತ ಹಾಗೂ ಸಾಹಿತ್ಯವನ್ನು ಬೆರೆಸಲಾಗುತ್ತದೆ ಮತ್ತು ಸಿಲಿಕಾನ್ ಕಣಿವೆಯ ನವೀನ ಸಂಸ್ಕೃತಿಯನ್ನು ಹುರಿಗೊಳಿಸಲಾಗುತ್ತದೆ. ನಾನು ಬೇರೆಡೆ ಕಾಂಟ್ರಾಡಿಸಿಪ್ಲಿನಾರಿಟಿ ( ) ಎಂದು ಕರೆದಿರುವ ಅಂತರಶಿಸ್ತೀಯ ಅಧ್ಯಯನದ ಮೇಲೆ ಈ ನೀತಿ ಗಮನ ಹರಿಸಿದೆ. ಇದರಲ್ಲಿ ಹೊಂದಾಣಿಕೆ ಅಸಂಭವ ಎಂದು ಭಾವಿಸಿದ ಮಾದರಿಯನ್ನು ನೀಡಲಾಗಿದೆ. ಅಂತಿಮವಾಗಿ ಈ ನೀತಿಯಿಂದಾಗಿ 21ನೇ ಶತಮಾನದ ನವೀನ ಜ್ಞಾನ ಆಧಾರಿತ ಆರ್ಥಿಕತೆ ( ಏಟಿoತಿಟeಜge eಛಿoಟಿomಥಿ ) ಕಡೆಗೆ ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆ ಹೊರಳಲಿದೆ ಎಂಬ ಭರವಸೆ ನಮ್ಮಲ್ಲಿ ಮೂಡುತ್ತದೆ.ಸಂಶೋಧನೆ ಮತ್ತು ಬೋಧನೆಯನ್ನು ಒಂದುಗೂಡಿಸುವ ಬಹುಶಿಸ್ತೀಯ ವಿಶ್ವವಿದ್ಯಾಲಯಗಳ ಚಿಂತನಾ ಕ್ರಮಕ್ಕೆ ಅನುಗುಣವಾಗಿ ಸಮಿತಿಯ ಈ ಧೋರಣೆ ಇದೆ. ಶಿಸ್ತುಗಳನ್ನು ಕಟ್ಟುನಿಟ್ಟಾಗಿ ಬೇರ್ಪಡಿಸುವುದು ಮಾತ್ರವಲ್ಲ, ಬೋಧನೆ ಮತ್ತು ಸಂಶೋಧನೆಯನ್ನು ಸಂಪೂರ್ಣ ಧ್ರುವೀಕರಣಗೊಳಿಸುವುದು 19ನೇ ಶತಮಾನದ ವಸಾಹತುಶಾಹಿ ಮಾದರಿಯ ವ್ಯವಸ್ಥಿತ ರೂಢಿಯಾಗಿತ್ತು. ಏಷ್ಯಾಟಿಕ್ ಸೊಸೈಟಿಯೇ ಆಗಿರಲಿ ಅಥವಾ ಇನ್ನಾವುದೇ ವೈಜ್ಞಾನಿಕ ಅನ್ವೇಷಣೆಯ ವಿಶೇಷ ಕೇಂದ್ರಗಳೇ ಆಗಿರಲಿ, ಸಂಶೋಧನಾ ಸಂಸ್ಥೆಗಳಲ್ಲಿ ಸಂಶೋಧನೆಗಳು ನಡೆಯುತ್ತಿದ್ದವು. ಕಾಲೇಜುಗಳಲ್ಲಿ ಬೋಧನೆಗಳು ನಡೆಯುತ್ತಿದ್ದವು. ಅಲೆಕ್ಸಾಂಡರ್ ವಾನ್ ಹಂಬೋಲ್ಟ್ ವಿನ್ಯಾಸಗೊಳಿಸಿದ ಜರ್ಮನ್ ಮಾದರಿ, ಒಂದೇ ಸ್ಥಳದಲ್ಲಿ ಸಂಶೋಧನೆ ಮತ್ತು ಬೋಧನೆಯನ್ನು ಬೆಸೆಯಿತು, ಇದು 20ನೇ ಶತಮಾನದಲ್ಲಿ ಉನ್ನತ-ಶಕ್ತಿಯ ಅಮೆರಿಕನ್ ವಿಶ್ವವಿದ್ಯಾಲಯಗಳಿಗೆ ಸ್ಫೂರ್ತಿ ನೀಡಿತು. ಬೆರಳೆಣಿಕೆಯ ಪ್ರಕರಣಗಳನ್ನು ಹೊರತುಪಡಿಸಿದರೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಇದು ಬಹುತೇಕ ಕಾಣೆಯಾಗಿದೆ, ಎನ್ ಇ ಪಿ 2020 ಈ ಕಾರಣಕ್ಕೆ ಅತ್ಯಂತ ಸಂವೇದನಾಶೀಲವಾಗಿದೆ ಎಂದು ತೋರುತ್ತದೆ, ಅಧ್ಯಯನ ಶಿಸ್ತು ವಿಭಾಗಗಳಲ್ಲಿ ದೀರ್ಘಕಾಲದವರೆಗೆ ಸಂಶೋಧನೆ ಮತ್ತು ಬೋಧನೆ ಬೆಸೆದಿರಬೇಕು ಎಂದು ಇದು ಒತ್ತಾಯಿಸುತ್ತದೆ, ಉದಾಹರಣೆಗೆ ನೀತಿ ನಿರ್ದಿಷ್ಟಪಡಿಸಿರುವ ಮಾನವಿಕ ವಿಷಯಗಳು ಮತ್ತು ಎಸ್‌ಟಿಇಎಂ (Sಖಿಇಒ) ವಿಭಾಗಗಳ ನಡುವಿನ ಸಹಯೋಗ.
ಪ್ರಸ್ತುತ ಇಂದಿನ ಕೋವಿಡ್ ಸಂಕಷ್ಟದಲ್ಲಿ ಸಂಗೀತ ಕಲೆಗಳ ಶಿಕ್ಷಣದ ಹಾದಿ ದುರ್ಗಮವಾದಂತಿದೆ. ಈ ನಿಟ್ಟಿನಲ್ಲಿ ಕಾಸರಗೋಡಿನ ಹೆಮ್ಮೆ ಎನಿಸಿದ ಬದಿಯಡ್ಕ ಸಮೀಪದ ಬಳ್ಳಪದವಿನ ವಿದ್ವಾನ್ ಯೋಗೀಶ ಶರ್ಮ ಅವರು ಮುನ್ನಡೆಸುತ್ತಿರುವ ಸಂಗೀಥ ಶಿಕ್ಷಣ ಸಂಸ್ಥೆ ವೈವಿಧ್ಯತೆಯಿಂದ ಎಂದಿಗೂ ಗಮನೀಯವಾದುದು.
ಅಪಾರ ನಾದೋಪಾಸನಾ ಕಾಳಜಿ, ನಾದದ ಬಗೆಗಿನ ಪೂಜನೀಯತೆಯ ಅವರೊಳಗೆ ಬಹಳಷ್ಟು ತುಡಿತಗಳಿದ್ದು, ಅವರೊಂದಿಗೆ ಸಮರಸ ಸುದ್ದಿ ನಡೆಸಿದ ಸಂವಾದದ ಆಯ್ದ ಭಾಗಗಳ ಅವತರಣಿಕೆ ಇಲ್ಲೀಗ ಬಿತ್ತರಿಸಲಾಗಿದೆ. ವೀಕ್ಷಕ ಬಂಧುಗಳು ಪ್ರೀತಿಪೂರ್ವಕ ಗಮನಿಸುತ್ತೀರೆಂಬುದು ನಮ್ಮ ಗ್ರಹಿಕೆ. ವೀಕ್ಷಿಸಿ, ಹಂಚಿ ಮತ್ತು ಪ್ರೋತ್ಸಾಹಿಸಿ
ಸಮರಸ ಸಂವಾದ: ಯೋಗ ಮತ್ತು ನಾದೋಪಾಸನೆಗಳ ತಪಸ್ವಿ ವಿದ್ವಾನ್.ಯೋಗೀಶ ಶರ್ಮ ಬಳ್ಳಪದವು
0
ಜುಲೈ 06, 2021
Tags