ತಿರುವನಂತಪುರ: ಕೇರಳ ವಿಶ್ವವಿದ್ಯಾಲಯದಲ್ಲಿ ಮಲಯಾಳಂ ನಿಘಂಟು ವಿಭಾಗದ ಅಧ್ಯಕ್ಷರಾಗಿ ಸಂಸ್ಕøತ ಶಿಕ್ಷಕರನ್ನು ನೇಮಿಸಲಾಗಿದೆ. ಆಯ್ಕೆಯಾದ ಪೂರ್ಣಿಮಾ ಮೋಹನ್ ಅವರಿಗೆ ಮಲಯಾಳ ಮಾತನಾಡಲು ಗೊತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಖ್ಯಾತ ಅಂಕಣಕಾರ ಅಂಜು ಪಾರ್ವತಿ ಪ್ರಭೀಶ್ ಈ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಕಾಲೇಜು ಶಿಕ್ಷಕಿ ಪೂರ್ಣಿಮಾ ಮೋಹನ್ ಅವರು ಮಲಯಾಳಂನೊಂದಿಗೆ ಬೆರೆಸಿದ ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ ಫೆÇೀನೆಟಿಕ್ಸ್ ತರಗತಿಯನ್ನು ತೆಗೆದುಕೊಂಡರು ಎಂದು ಅಂಜು ಹೇಳುತ್ತಾರೆ.
ತಿರುವನಂತಪುರ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತದ ಉಪನ್ಯಾಸಕಿ ಪೂರ್ಣಿಮಾ ಮೋಹನ್ ಅವರು ತಮ್ಮ ದೈನಂದಿನ ಸಂಭಾಷಣೆಯಲ್ಲಿ ಹೇಳಿದ ಹಲವು ಪದಗಳು ಮತ್ತು ನುಡಿಗಟ್ಟುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಸಂದರ್ಭ ಅವರು ಭಾಷೆಯನ್ನು ಆಧುನಿಕ ಮಣಿಪ್ರವಾಳಂ ಎಂದು ಅಪಹಾಸ್ಯ ಮಾಡಲಾಗುತ್ತಿತ್ತು. ಅಂಜು ಆ ಬಳಿಕ ಶಿಕ್ಷಕಿಯಾದಾಗ ಪೂರ್ಣಿಮಾರನ್ನು ಭೇಟಿಯಾದಾಗ ಮಲಯಾಳಂ ತನಗೆ ಬರುತ್ತಿಲ್ಲವೆಂದು ಹೇಳಿದ್ದರು ಎಂದು ಬಹಿರಂಗಪಡಿಸಲಾಗಿದೆ.
ಕೇರಳ ವಿಶ್ವವಿದ್ಯಾಲಯದಲ್ಲಿ ಮಲಯಾಳ ನಿಘಂಟು ಸಮಿತಿ ಅಧ್ಯಕ್ಷರಾಗಿ ಪೂರ್ಣಿಮಾ ಮೋಹನ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದ ಬಳಿಕ ಪೂರ್ಣಿಮಾ ಸಹಿತ ಎಲ್ಲಾ ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದಾರೆ. ವಿಶ್ವವಿದ್ಯಾಲಯದ ಸುಗ್ರೀವಾಜ್ಞೆಯ ಪ್ರಕಾರ, ಮಲಯಾಳ ನಿಘಂಟು ಸಂಪಾದಕರಿಗೆ ಬೇಕಾದ ಅರ್ಹತೆಯು ಮಲಯಾಳ ಭಾಷೆಯಲ್ಲಿ ಹೆಚ್ಚಿನ ಪ್ರಾವೀಣ್ಯತೆ, ಸಂಶೋಧನಾ ಪದವಿ ಮತ್ತು ಮಲಯಾಳಂನಲ್ಲಿ ಹತ್ತು ವರ್ಷಗಳ ಬೋಧನಾ ಅನುಭವ ಎಂಬುದಾಗಿದೆ. ಸಂಸ್ಕೃತದಲ್ಲಿ ಸಂಶೋಧನಾ ಪದವಿ ಪಡೆದವರಿಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುವಂತೆ ಸುಗ್ರೀವಾಜ್ಞೆಯನ್ನು ತಿದ್ದುಪಡಿ ಮಾಡಲಾಗಿತ್ತು.
ಮಲಯಾಳ ಭಾಷೆಯನ್ನೂ ಮಾತನಾಡಲು ಸಾಧ್ಯವಾಗದ ವ್ಯಕ್ತಿಗೆ ಈ ಹುದ್ದೆಯನ್ನು ನೀಡಲಾಗಿದೆ ಎಂದು ಅಂಜು ವ್ಯವಸ್ಥೆಯನ್ನು ದೂಷಿಸಿರುವರು. ಮುಖ್ಯಮಂತ್ರಿಯ ಮಾಜಿ ಖಾಸಗಿ ಕಾರ್ಯದರ್ಶಿ ಆರ್ ಮೋಹನನ್ ಅವರ ಪತ್ನಿ ಪೂರ್ಣಿಮಾ ಆಗಿದ್ದು, ಈಗ ಸಿಎಂ ಕಚೇರಿಯಲ್ಲಿ ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿಯಾಗಿದ್ದರಿಂದ ಮಾತ್ರ ಈ ನೇಮಕಾತಿ ಮಾಡಲಾಗಿದೆ ಎಂದು ಅಂಜು ಹೇಳಿರುವರು.
ಫೇಸ್ಬುಕ್ ಪೋಸ್ಟ್ ಪೂರ್ಣ ಆವೃತ್ತಿ-
ಕೇರಳ ವಿಶ್ವವಿದ್ಯಾಲಯದಲ್ಲಿ ಮಲಯಾಳ ನಿಘಂಟು ರಚನೆಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಅವರು ಕಾಲಡಿ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಶಿಕ್ಷಕರಾಗಿದ್ದಾರೆ. ಪೂರ್ಣಿಮಾ ಮೋಹನ್ ತಿರುವನಂತಪುರ ಸಂಸ್ಕೃತ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದಲ್ಲಿ ನನ್ನ ಶಿಕ್ಷಕರಾಗಿದ್ದರು. ಅವರು ನಮಗೆ ಪೊನೆಟಿಕ್ಸ್ ಕಲಿಸುತ್ತಿದ್ದರು. ಮಲಯಾಳಂ ಮಾತನಾಡದ ಶಿಕ್ಷಕಿ ಪೂರ್ಣಿಮಾ, ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ ಸಂಸ್ಕೃತ ಪೊನೆಟಿಕ್ಸ್ ತರಗತಿಯನ್ನು ತೆಗೆದುಕೊಳ್ಳುತ್ತಿದ್ದರು. ಅದು ತಮಿಳು ಉಚ್ಚಾರಣೆಯಲ್ಲಿತ್ತು. ಪೂರ್ಣಿಮಾ ಆ ಸಮಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದಲ್ಲಿ ಉಪನ್ಯಾಸಕರಾಗಿದ್ದರು (ಆಗ ಅವರ ಭಾಷೆಯನ್ನು ಆಧುನಿಕ ಮಣಿಪ್ರವಾಳ ಎಂದು ಅಪಹಾಸ್ಯ ಮಾಡಲಾಯಿತು).