ಕಾಸರಗೋಡು: ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ನೀಲೇಶ್ವರ ನಗರಸಭೆ "ಸಿ" ಕ್ಯಾಗರಿಯಲ್ಲಿ ಸೇರ್ಪಡೆಗೊಂಡಿದೆ. ಈ ಕಾರಣದಿಂದ ಹೆಚ್ಚುವರಿ ಕಟ್ಟುನಿಟ್ಟು ಜಾರಿಗೊಳಿಸಲು ನಗರಸಭೆ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆ ನಿರ್ಧರಿಸಿದೆ.
ನೀಲೇಶ್ವರ ನಗರಸಭೆಯ ವಾರ್ಡ್ ಗಳಲ್ಲಿ ಜು.5,6,7 ರಂದು ಕೋವಿಡ್ ತಪಾಸಣೆ ಶಿಬಿರಗಳು ನಡೆಯಲಿವೆ. ಜು.5ರಂದು ತೈಕಡಪ್ಪುರಂ ಪ್ರಾಥಮಿಕ ಆರೋಗ್ಯ ಕೇಂದ್ರ, 6ರಂದು ರಾಟರಿ ಹಾಲ್, 7ರಂದು ಬೋಟುಜೆಟ್ಟಿ ಪ್ರದೇಶಗಳಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30 ವರೆಗೆ ಈ ಶಿಬಿರಗಳು ಜರುಗುವುವು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪಿ.ಪಿ.ಮುಹಮ್ಮದ್ ರಾಫಿ, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಟಿ.ಪಿ.ಲತಾ, ನಗರಸಭೆ ಕಾರ್ಯದರ್ಶಿ ಸಿ.ಕೆ.ಶಿವಾಜಿ, ನೀಲೇಶ್ವರ ತಾಲೂಕು ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಎ.ಜಮಾಲ್ ಅಹಮ್ಮದ್, ಸೆಕ್ಟರಲ್ ಮೆಜಿಸ್ಟ್ರೇಟ್ ಇಸ್ಮಾಯಿಲ್ ಪಿ., ನಗರಸಭೆ ಹೆಲ್ತ್ ಇನ್ಸ್ ಪೆಕ್ಟರ್ ಎ.ಕೆ.ಪ್ರಕಶನ್, ಕಂದಾಯ ಇನ್ಸ್ ಪೆಕ್ಟರ್ ಕೆ.ಮನೋಜ್ ಕುಮಾರ್ ಉಪಸ್ಥಿತರಿದ್ದರು.
ಕಟ್ಟುನಿಟ್ಟುಗಳು :
ನಗರಸಭೆ ಪ್ರದೇಶದಲ್ಲಿ ಅಗತ್ಯ ಸಾಮಾಗ್ರಿಗಳ ಅಂಗಡಿಗಳು ಮಾತ್ರ ಸಂಜೆ 7 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದು. ಬಟ್ಟೆ,ಕಲಿಕೋಪಕರಣ, ಪಾದರಕ್ಷೆ ಅಂಗಡಿಗಳು ಶುಕ್ರವಾರ ಮಾತ್ರ ತೆರಯಬೇಕು. ಸೂಪರ್ ಮಾರ್ಕೆಟ್ ಗಳು, ತರಕಾರಿ ಅಂಗಡಿಗಳು ಶೇ 25 ಸಿಬ್ಬಂದಿಯನ್ನು ಬಳಸಿ ನಿಗದಿ ಪಡಿಸಲಾದ ದಿನಗಳಲ್ಲಿ ಮಾತ್ರ ಕಾರ್ಯಾಚರಿಸಬಹುದು. ಹೋಟೆಲ್/ ರೆಸ್ಟಾರೆಂಟ್ ಗಳಲ್ಲಿ ಪಾರ್ಸೆಲ್/ ಹೋಂ ಡೆಲಿವರಿ ಮಾತ್ರ ಇರುವುದು. ತಳ್ಳುಗಾಡಿಗಳ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.