ಕಾಸರಗೋಡು: ಉದುಮಾ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲಿ ಹಿಸ್ಟರಿ, ಸ್ಟಾಟಿಸ್ಟಿಕ್ಸ್, ಕಾಮರ್ಸ್ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಯ ನೇಮಕಾತಿ ನಡೆಯಲಿದೆ. ಜು.8ರಂದು(ಗುರುವಾರ) ಬೆಳಗ್ಗೆ 10 ಗಂಟೆಗೆ ಹಿಸ್ಟರಿ ವಿಷಯದಲ್ಲಿ, 12 ಗಂಟೆಗೆ ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ, ಜು.9ರಂದು ಬೆಳಗ್ಗೆ 10 ಗಂಟೆಗೆ ಕಾಮರ್ಸ್ ವಿಷಯದಲ್ಲಿ ಸಂದರ್ಶನ ನಡೆಯಲಿದೆ. ಅರ್ಹ ಉದ್ಯೋಗಾರ್ಥಿಗಳು ಕೋಯಿಕೋಡ್ ಡೆಪ್ಯೂಟಿ ಡೈರೆಕ್ಟರೇಟ್ ಆಫ್ ಕಾಲೇಜಿಯೇಟ್ ಎಜುಕೇಷನ್ ನ ಗೆಸ್ಟ್ ಪಾನೆಲ್ ರೆಜಿಸ್ಟ್ರೇಷನ್ ನಂಬ್ರ, ಅಸಲಿ ಅರ್ಹತಾಪತ್ರಗಳ ಸಹಿತ ಪ್ರಾಂಶುಪಾಲರ ಚೇಂಬರ್ ಗೆ ಹಾಜರಾಗಬೇಕು.