ತಿರುವನಂತಪುರ: ರಾಜ್ಯದಲ್ಲಿ ಇಂದು ಮತ್ತೆ ಮೂವರಿಗೆ ಝಿಕಾ ವೈರಸ್ ದೃಢ|ಪಟ್ಟಿದೆ. 46 ವರ್ಷದ ವ್ಯಕ್ತಿ, ಒಂದು ವರ್ಷದ 10 ತಿಂಗಳ ಮಗು ಮತ್ತು 29 ವರ್ಷದ ಆಸ್ಪತ್ರೆ ಕೆಲಸಗಾರನಿಗೆ ಈ ರೋಗ ಪತ್ತೆಯಾಗಿದೆ. ಇದು ಒಟ್ಟು ಪ್ರಕರಣಗಳ ಸಂಖ್ಯೆಯನ್ನು 18 ಕ್ಕೆ ಏರಿಸಿದೆ. ಆದರೆ ಮತ್ತೊಂದು ಲೆÀಕ್ಕಾಚಾರದ ಅನುಸಾರ ಇದು 40ಕ್ಕಿಂತಲೂ ಮೇಲಿದೆ ಎನ್ನಲಾಗಿದೆ.
ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಕುರಿತು ಪ್ರಕಟಣೆ ನೀಡಿದ್ದಾರೆ. ಹೊಸದಾಗಿ ದೃಢಪಡಿಸಿದ ಪ್ರಕರಣಗಳು ತಿರುವನಂತಪುರದಿಂದ ವರದಿಯಾಗಿರುವುದಾಗಿದೆ. ರೋಗಲಕ್ಷಣಗಳು ಕಾಣಿಸಿಕೊಂಡ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಯತ್ನಿಸಿದ ಇತರ ಇಬ್ಬರು ಮತ್ತು ಸಿಬ್ಬಂದಿಗಳ ಮಾದರಿಗಳನ್ನು ಕೊಯಮತ್ತೂರಿನ ಲ್ಯಾಬ್‍ಗೆ ಕಳುಹಿಸಲಾಗಿದೆ. ಇಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ವೈರಸ್ ಪತ್ತೆಯಾಗಿದೆ. ಮೂರನೇ ಹಂತದಲ್ಲಿ ಕಳುಹಿಸಲಾದ ಎಂಟು ಮಾದರಿಗಳಲ್ಲಿ ರೋಗವನ್ನು ದೃಢಪಡಿಸಿದವರು ಸೇರಿದ್ದಾರೆ.
ಆದಾಗ್ಯೂ, ಎರಡನೇ ಹಂತದಲ್ಲಿ ಕಳುಹಿಸಲಾದ 27 ಮಾದರಿಗಳಲ್ಲಿ 26 ನಕಾರಾತ್ಮಕವಾಗಿವೆ.