ಕೊಲ್ಲಂ: ಕೇಂದ್ರ ಸರ್ಕಾರವು ಉಚಿತವಾಗಿ ಲಸಿಕೆಗಳನ್ನು ನೀಡುತ್ತಿದ್ದರೂ ಲಸಿಕೆಗಳ ವಿತರಣೆಯನ್ನು ರಾಜ್ಯ ಸರ್ಕಾರ ಬುಡಮೇಲುಗೊಳಿಸುತ್ತಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಕೊಲ್ಲಂ ಜಿಲ್ಲಾ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಿವೈಎಫ್‍ಐಗಳಿಗೆ ಲಸಿಕೆ ದೊರೆತರೂ ಕೇರಳದ ಹಿರಿಯ ನಾಗರಿಕರಿಗೆ ಲಸಿಕೆ ದೊರೆಯುತ್ತಿಲ್ಲ ಎಂದು ಸುರೇಂದ್ರನ್ ಲೇವಡಿ ಮಾಡಿದರು.
ಉತ್ತರಪ್ರದೇಶದಲ್ಲಿ ಯೋಗಿ ಸರ್ಕಾರವು ಲಸಿಕೆಗಳನ್ನು ಮನೆಗಳಿಗೆ ತಲುಪಿಸುತ್ತದೆ. ಈ ವರ್ಷದ ಅಂತ್ಯದ ವೇಳೆಗೆ ಅಲ್ಲಿ ಲಸಿಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ವ್ಯಾಕ್ಸಿನೇಷನ್ ಬಗ್ಗೆ ಕೇರಳದಲ್ಲಿ ಸರ್ವತ್ರ ಸ್ವಜನಪಕ್ಷಪಾತವಿದೆ ಎಂದು ಅವರು ಹೇಳಿದರು.
ಕೇಂದ್ರ ತಂಡವು ಕೇರಳಕ್ಕೆ ಭೇಟಿ ನೀಡಿ ತೃಪ್ತಿ ವ್ಯಕ್ತಪಡಿಸಿದೆ ಎಂಬ ಆರೋಗ್ಯ ಸಚಿವರ ಹೇಳಿಕೆ ಸುಳ್ಳಿನ ಕಂತೆಯಾಗಿದೆ. ಕೇರಳಕ್ಕೆ ಉತ್ತಮ ಪ್ರಮಾಣಪತ್ರವನ್ನು ಏಕೆ ನೀಡಬೇಕು? ಹೆಚ್ಚುತ್ತಿರುವ ಮರಣ? ಅಥವಾ ಸಾವಿನ ಸಂಖ್ಯೆಗಳನ್ನು ಮರೆಮಾಡಿರುವುದಕ್ಕೆ ಪ್ರಮಾಣ ಪತ್ರ ನೀಡಬೇಕೆ ಎಂದು ಸುರೇಂದ್ರನ್ ಕೇಳಿದರು.
ಕೊರೋನವನ್ನು ನಿಯಂತ್ರಿಸುವಲ್ಲಿ ರಾಜ್ಯದ ನಿರ್ಲಕ್ಷ್ಯದಿಂದಾಗಿ ಕೇಂದ್ರ ತಂಡವು ಕೇರಳಕ್ಕೆ ಬರಬೇಕಾಯಿತು. ಕೇಂದ್ರ ಸರ್ಕಾರವು ನೀಡುವ ಸಹಾಯವನ್ನು ಎಡ ಸರ್ಕಾರವು ಕೊರೋನಾ ನಿಯಂತ್ರಣಕ್ಕೆ ಬಳಸುತ್ತಿಲ್ಲ. ಲಸಿಕೆ ಸವಾಲಿನ ಮೂಲಕ ಸಂಗ್ರಹಿಸಿದ ಹಣದಿಂದ ಸರ್ಕಾರ ಏನು ಮಾಡಿದೆ ಎಂಬುದನ್ನು ವಿವರಿಸಬೇಕು. ಕೊರೋನಾದ ಆರ್ಥಿಕತೆಯ ಕುಸಿತಕ್ಕೆ ಸರ್ಕಾರಕ್ಕೆ ಯಾವ ಪರ್ಯಾಯ ಮಾರ್ಗವಿದೆ? ಎಲ್ಲಾ ಕ್ಷೇತ್ರಗಳು ಕುಸಿದಿದ್ದರೂ ಯಾವುದೇ ವಲಯಕ್ಕೆ ಪ್ಯಾಕೇಜ್ ನೀಡಲು ಸರ್ಕಾರ ಸಿದ್ಧವಿಲ್ಲ. ಮೀನುಗಾರರು ಮತ್ತು ಗೇರುಬೀಜ ಕಾರ್ಮಿಕರು ಸೇರಿದಂತೆ ಎಲ್ಲರೂ ಸಂಕಷ್ಟದಲ್ಲಿದ್ದಾರೆ ಎಂದರು.
ಕೊಟೇಶನ್ ತಂಡಗಳಿಗೆ ಮತ್ತು ಚಿನ್ನ ಕಳ್ಳಸಾಗಾಣಿಕೆದಾರರಿಗೆ ನೆರವು ನೀಡುವ ಸರ್ಕಾರ ಕೇರಳದಲ್ಲಿದೆ. ಪಿಣರಾಯಿ ಸರ್ಕಾರ ಮಹಿಳಾ ದೌರ್ಜನ್ಯಗೈದ ಅಪರಾಧಿಗಳನ್ನು ರಕ್ಷಿಸುತ್ತಿದೆ. ಉನ್ನಾವೊ ಮತ್ತು ಕಟ್ವಾದಲ್ಲಿ ನಡೆದ ಕಿರುಕುಳದಲ್ಲಿ ಮೇಣದ ಬತ್ತಿಗಳನ್ನು ಬೆಳಗಿಸಿದ ಡಿವೈಎಫ್, ಕೇರಳದಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಯಾಕೆ ಮೌನವಾಗಿದೆ ಎಂದು ಅವರು ಸವಾಲೆಸೆದರು.
ಕೈಟೆಕ್ಸ್ ಕೇರಳವನ್ನು ತೊರೆಯುವುದಾಗಿ ಹೇಳಿದಾಗಲೂ ಅವರ ಷೇರು ಮಾರುಕಟ್ಟೆ ಗಗನಕ್ಕೇರಿತ್ತು. ಕೈಟೆಕ್ಸ್ ನಂತಹ ಕಂಪೆನಿಗಳಿಲ್ಲದೆ ಕೇರಳ ಮುಂದೆ ಏನು ಮಾಡಲಿದೆ ಎಂಬುದು ಸರ್ಕಾರದ ಕಲ್ಪನೆಯಲ್ಲೇನಾದರೂ ಇದೆಯೇ ಎಂದವರು ಪ್ರಶ್ನಿಸಿದರು.
ಸರ್ಕಾರವನ್ನು ಪ್ರಶ್ನಿಸುವವರ ವಿರುದ್ಧ ಸೇಡು ತೀರಿಸಲಾಗುತ್ತಿದೆ. ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಜೈಲಿಗೆ ಹೋದ ಆರೋಪಿಗಳನ್ನು ಅ|ಧಿಕಾರಿಗಳು ಬೆದರಿಸುತ್ತಿದ್ದಾರೆ. ಗುಟ್ಟು ರಟ್ಟಾ|ಗದಿರಲಿ ಎಂಬ ಅಜೆಂಡ ಅದರ ಹಿಂದಿದೆ. ವಿ ಮುರಲೀಧರನ್ ಮತ್ತು ಬಿಜೆಪಿ ಮುಖಂಡರನ್ನು ಮಾತನಾಡಲು ಮನವೊಲಿಸಲಾಗುತ್ತಿದೆ. ಮೋದಿ ಸರ್ಕಾರ ತಂದಿರುವ ಸಹಕಾರ ಸಚಿವಾಲಯದ ಬಗ್ಗೆ ಸಿಪಿಎಂ ಏಕೆ ಹೆದರುತ್ತಿದೆ? ಕೇಂದ್ರ ಸಹಕಾರ ಸಚಿವಾಲಯದ ವಿರುದ್ಧ ನಿರ್ಣಯ ಮಂಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಸುರೇಂದ್ರನ್ ಹೇಳಿದ್ದಾರೆ.