HEALTH TIPS

ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ಕೇಂದ್ರದೊಂದಿಗೆ ಘರ್ಷಣೆ ಮಾಡದಿರಲು ಕೇರಳದ ನಿರ್ಧಾರ

             ತಿರುವನಂತಪುರ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೇಂದ್ರದೊಂದಿಗೆ ಘರ್ಷಣೆ ಮಾಡದಿರಲು ಕೇರಳ ನಿರ್ಧರಿಸಿದೆ. ಒಂದರಿಂದ ಹನ್ನೆರಡು ತರಗತಿಗಳ ತನಕದ ಪಠ್ಯಕ್ರಮವನ್ನು ಪರಿಷ್ಕರಿಸಲಾಗುವುದು. ಇದರ ಭಾಗವಾಗಿ ಕರಡು ಪಠ್ಯಕ್ರಮವನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗುವುದು. ಆರಂಭದಲ್ಲಿ ಕೇರಳ ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ ವ್ಯಕ್ತಪಡಿಸಿದ್ದರೂ, ಇದೀಗ ತನ್ನ ನಿಲುವನ್ನು ಬದಲಿಸಿದೆ ಎಂಬ ಸೂಚನೆಗಳಿವೆ.

                   ಎಂಟು ವರ್ಷಗಳ ಮಧ್ಯಂತರದ ಬಳಿಕÀ, ರಾಜ್ಯವು ಒಂದರಿಂದ ಹನ್ನೆರಡು ತರಗತಿಗಳ ತನಕದ ತರಗತಿಗಳ ಪಠ್ಯಕ್ರಮ ಸುಧಾರಣೆಯತ್ತ ಸಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧವಿದ್ದರೂ, ಕರಡು ಪಠ್ಯಕ್ರಮವನ್ನು ಸಿದ್ಧಪಡಿಸಿ ಅದನ್ನು ಕೇಂದ್ರಕ್ಕೆ ಸಲ್ಲಿಸಲು ಸರ್ಕಾರ ಯೋಜಿಸಿದೆ. ಯಾವುದೇ ನೀತಿ ನಿರ್ಧಾರ ತೆಗೆದುಕೊಳ್ಳದಿದ್ದರೂ, ಕೇಂದ್ರದೊಂದಿಗೆ ಸ್ಪರ್ಧೆ, ಜಟಾಪಟಿಗಿಳಿಯುವ ಅಗತ್ಯವಿಲ್ಲ ಎಂಬುದು ಕೇರಳದ ಈಗಿನ ನಿಲುವಾಗಿದೆ. 

             ಕೇರಳದ್ದೇ ಆದ ವಿಧಾನಕ್ಕೆ ಅನುಗುಣವಾಗಿ ಕರಡು ಸಿದ್ಧಪಡಿಸುವುದು ಸರ್ಕಾರದ ಕ್ರಮ ಎನ್ನಲಾಗಿದೆ. ಶಿಕ್ಷಣವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಶಾಸನ ರಚಿಸುವ ವಿಷಯವಾಗಿದೆ ಮತ್ತು ಸ್ವ ನಿರ್ಧಾರ ್ನ ಚಲಾಯಿಸಬಹುದು ಎಂದು ಕೇರಳ ಅಭಿಪ್ರಾಯಪಟ್ಟಿದೆ. ಕೇಂದ್ರದ ನೆರವನ್ನೂ ಕಳೆದುಕೊಳ್ಳಬಾರದು ಎಂಬ ಅಭಿಪ್ರಾಯವೂ ಸರ್ಕಾರದಲ್ಲಿದೆ. ರಾಜ್ಯಗಳಿಂದ ಕರಡನ್ನು ಅಂಗೀಕರಿಸಿದ ಬಳಿಕ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು ಸಿದ್ಧಪಡಿಸಿ ಹಿಂದಕ್ಕೆ ಕಳುಹಿಸಿ ಅದನ್ನು ನಂತರ ಗಮನಾರ್ಹವಾಗಿ ಬದಲಾಯಿಸಲಾಗುವುದಿಲ್ಲ. ಅದಕ್ಕಾಗಿಯೇ ಸರ್ಕಾರ ಆರಂಭಿಕ ಪ್ರತಿಭಟನೆಗಳಿಂದ ಹಿಂದೆ ಸರಿಯುತ್ತಿದೆ.

               ಏತನ್ಮಧ್ಯೆ, ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪೋಕಸ್ ಗುಂಪುಗಳ ರಚನೆಗೆ ತಜ್ಞರ ಸಮಿತಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ಎಸ್.ಸಿ.ಇ.ಆರ್.ಟಿ. ಶೀಘ್ರದಲ್ಲೇ ಪ್ರಾರಂಭಿಸುತ್ತದೆ. ಪಠ್ಯಕ್ರಮ - ಪೋಕಸ್ ಗುಂಪುಗಳ ಕಲಿಕೆಯ ವಿಧಾನಗಳು, ಭಾಷಾ ಸಮಸ್ಯೆಗಳು ಮತ್ತು ಲಿಂಗ ನ್ಯಾಯ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ವಿಷಯಗಳಲ್ಲಿ ತಜ್ಞರ ಸಮಿತಿಯ ಅ|ಧ್ಯಯನ ಒಳಗೊಂಡಿರುತ್ತವೆ. ಇದರೊಂದಿಗೆ ಕೇರಳದಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರವ ಸಾಧ್ಯತೆಗಳಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries