ತಿರುವನಂತಪುರ: ರಾಜ್ಯದ ಎಲ್ಲ ಅಂಗನವಾಡಿಗಳನ್ನು ವಿದ್ಯುದ್ದೀಕರಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ವಿದ್ಯುತ್ ಸಚಿವ ಕೃಷ್ಣನ್ ಕುಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೇರಳದಲ್ಲಿ ಪ್ರಸ್ತುತ 2,256 ಅಂಗನವಾಡಿಗಳು ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿದೆ. ವೈರಿಂಗ್ ಪೂರ್ಣಗೊಂಡೂ ಈಗಲೂ ವಿದ್ಯುತ್ ಸಂಪರ್ಕ ಲಭಿಸದ ಕೇಂದ್ರಗಳಿಗೆ ಸಮರೋಪಾದಿಯಲ್ಲಿ ಸಂಪರ್ಕ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.
ಒಂದು ಕಂಬ ಮಾತ್ರ ಅಗತ್ಯವಿರುವ ಅಂಗನವಾಡಿಗಳಿಗೆ ಕೆಎಸ್‍ಇಬಿ ಯು ಅವರ ವಿಶೇಷ ಯೋಜನೆಯಲ್ಲಿ ಸೇರಿಸಿ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಿದೆ. ವೈರಿಂಗ್ ಪ್ರಕ್ರಿಯೆಯಲ್ಲಿರುವವರಿಗೆ ವೈರಿಂಗ್ ಪೂರ್ಣಗೊಳಿಸಲು ಮತ್ತು ಒಂದು ತಿಂಗಳೊಳಗೆ ಕೆಎಸ್‍ಇಬಿಗೆ ಮಾಹಿತಿ ನೀಡುವಂತೆ ನಿರ್ದೇಶಿಸಲಾಗಿದೆ.
ಸ್ವಂತ ಕಟ್ಟಡವಿದ್ದೂ ನಿಧಿ ಲಭ್ಯವಾಗದ 221 ಅಂಗನವಾಡಿಗಳು ರಾಜ್ಯದಲ್ಲಿವೆ. ಈ ನಿಟ್ಟಿನಲ್ಲಿ ಆಯಾ ಪಂಚಾಯಿತಿಗಳು ನಿಧಿಯನ್ನು ಮೀಸಲಿರಿಸಿ ವಿದ್ಯುತ್ ಸಂಪರ್ಕಕ್ಕೆ ಬೇಕಾದ ನೆರವನ್ನು ನೀಡಬೇಕಾಗಿದೆ. ಸಾರ್ವಜನಿಕ ಕಟ್ಟಡಗಳು ಮತ್ತು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿಗಳ ವಿದ್ಯುದೀಕರಣದಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ಅದನ್ನು ಇತರ ಕಟ್ಟಡಗಳಿಗೆ ವರ್ಗಾಯಿಸಲಾಗುತ್ತದೆ. ಈವರೆಗೆ 30 ಅಂಗನವಾಡಿಗಳನ್ನು ಈ ರೀತಿ ಬದಲಾಯಿಸಲಾಗಿದೆ. 6 ಜಿಲ್ಲೆಗಳಲ್ಲಿ 21 ಅಂಗನವಾಡಿಗಳು ವಿದ್ಯುತ್ ತಂತಿಗಳನ್ನು ಅಳವಡಿಸಲು ಸಮಸ್ಯೆಗಳಿವೆ. ಆ ಸ್ಥಳಗಳಲ್ಲಿ ಎಎನ್‍ಆರ್‍ಟಿ ಒದಗಿಸಿದ ಯೋಜನೆಗೆ ಅನುಮೋದನೆ ನೀಡಲು ಸಹ ನಿರ್ಧರಿಸಲಾಗಿದೆ.
ಸಭೆಯಲ್ಲಿ ಎರಡೂ ವಿಭಾಗಗಳ ಕಾರ್ಯದರ್ಶಿಗಳು, ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಕ್ಷೇತ್ರ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.