ಕಾಸರಗೋಡು: ಪೆರಿಯ ಅವಳಿ ಕೊಲೆ ಪ್ರಕರಣದ ಆರೋಪಿಗಳ ಪತ್ನಿಯರು ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ ಲಾಲ್ ಮತ್ತು ಕೃಪೇಶ್ ಅವರ ಕೊಲೆ ಪ್ರಕರಣದ ಆರೋಪಿಗಳ ಪತ್ನಿಯರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ನೀಡಲಾಗಿತ್ತು. ಈ ಬಗ್ಗೆ ತೀವ್ರ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ, ಪಕ್ಷದ ಸೂಚನೆಯ ಮೇರೆಗೆ ಅವರು ರಾಜೀನಾಮೆ ನೀಡಿದರು.
ಮೊದಲ ಆರೋಪಿ ಪೀತಾಂಬರನ್ ಅವರ ಪತ್ನಿ ಪಿ.ಮಂಜುಷಾ, ಎರಡನೇ ಆರೋಪಿ ಸಿ. ಜಾರ್ಜ್ ಅವರ ಪತ್ನಿ ಚಿಂಚು ಫಿಲಿಪ್ ಮತ್ತು ಮೂರನೇ ಆರೋಪಿ ಕೆಎಂ ಸುರೇಶ್ ಅವರ ಪತ್ನಿ ಎಸ್ ಬೇಬಿ ನಿನ್ನೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಕೊಲೆಗೈದವರ ಪತ್ನಿಯರಿಗೆ ಉದ್ಯೋಗ ನೀಡಿದ್ದಕ್ಕಾಗಿ ಭಾರೀ ವಿವಾದ ಸೃಷ್ಟಿಯಾಗಿತ್ತು.
ಪ್ರಕರಣದ ಆರೋಪಿಗಳಿಗೆ ಮಾನವ ಹಕ್ಕುಗಳಿವೆ ಎಂದು ಸಿಪಿಎಂ ಆರೋಪಿಗಳ ಪತ್ನಿಯರಿಗೆ ನೀಡಿದ ಉದ್ಯೋಗವಕಾಶಗಳಿಗೆ ಬೆಂಬಲ ಸೂಚಿಸಿದೆ. ಕಳೆದ ಆರು ತಿಂಗಳ ಹಿಂದೆ ನೇಮಕಾತಿ ನಡೆದಿತ್ತು.