ಉಪ್ಪಳ: 100ಕ್ಕೂ ಅಧಿಕ ಟೈಪೋಗ್ರಾಫಿ ಚಿತ್ರ ರಚನೆಗೈದು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಸೃಷ್ಟಿಸಿದ ಉಪ್ಪಳ ನಿವಾಸಿ ರಾಫಿಯ ರವರಿಗೆ ಕಾಸರಗೋಡು ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ರವರಿಂದ ಇತ್ತೀಚೆಗೆ ಪ್ರಮಾಣಪತ್ರ, ಮೆಡಲ್ ಸ್ವೀಕರಿಸಿದ್ದಾರೆ.
ಟೈಪೋಗ್ರಾಫಿ ಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮಹಾತ್ಮಗಾಂಧಿ, ಸಿನಿಮಾ ತಾರೆಯರಾದ ಮೋಹನ್ ಲಾಲ್, ಮಮ್ಮುಟ್ಟಿ, ಸಹಿತ ರಾಜಕೀಯ ನೇತಾರರು, ಸಿನಿಮಾ ತಾರೆಯರು, ಕ್ರಿಕೇಟ್ ತಾರೆಯರು, ಗಣ್ಯ ವ್ಯಕ್ತಿಗಳ ಸಹಿತ ನೂರಕ್ಕಿಂತ ಅಧಿಕ ವ್ಯಕ್ತಿಗಳ ಭಾಚಿತ್ರಗಳನ್ನು ರಚಿಸಿ ಸಾಧನೆಗೈದಿದ್ದಾರೆ. ಮಲಯಾಳ ಹಾಗೂ ಇಂಗ್ಲೀಷ್ ಅಕ್ಷರಗಳನ್ನು ಉಪಯೋಗಿಸಿ ರಾಫಿಯಾ ಚಿತ್ರಗಳನ್ನು ರಚಿಸಿದ್ದಾರೆ. ಬೇಕೂರು ಸಕಾಈರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ಇವರು ಮಂಗಳೂರಿನ ವಿವಿಧ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಚಿಕ್ಕಂದಿನಲ್ಲೇ ಚಿತ್ರ ರಚನೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಶಾಲಾ ಕಲೋತ್ಸವಗಳಲ್ಲಿ ಚಿತ್ರ ರಚನೆ, ಪೈಂಟಿಂಗ್, ಪೆನ್ಸಿಲ್ ಡ್ರಾಯಿಂಗಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದರು. ಮುಂದೆ ಪದವಿ ಶಿಕ್ಷಣವನ್ನು ಕೈಗೊಳ್ಳುವಾಗಲೂ ಚಿತ್ರರಚನೆಯ ಆಸಕ್ತಿಯನ್ನು ಉಳಿಸಿಕೊಂಡಿದ್ದರು. ಮೂಡುಬಿದಿರೆ ಮೆಡಿಕಲ್ ಕಾಲೇಜಿನಲ್ಲಿ ಬಯೋಕೆಮಿಸ್ಟ್ರಿ ಉಪನ್ಯಾಸಕಿಯಾಗಿದ್ದರು. ಕಾಸರಗೋಡು ನಿವಾಸಿಯಾದ ಕೊಲ್ಲಿ ಉದ್ಯೋಗಿ ಇರ್ಷಾದ್ ರವರ ಪತ್ನಿಯಾಗಿರುವ ಇವರು ಉಪ್ಪಳ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್-ಅಂಗನವಾಡಿ ಕಾರ್ಯಕರ್ತೆ ಜುಬೈದ ದಂಪತಿ ಪುತ್ರಿಯಾಗಿದ್ದಾರೆ. ತನ್ನ ಚಿತ್ರರಚನೆಗೆ ಕುಟುಂಬದ ಎಲ್ಲಾ ರೀತಿಯ ಪ್ರೋತ್ಸಾಹ ಲಭಿಸುತ್ತಿದೆ ಎಂದು ರಾಫಿಯಾ ತಿಳಿಸುತ್ತಾರೆ. ಜಿಲ್ಲಾಧಿಕಾರಿಯವರಿಂದ ರಾಫಿಯರವರ ಪತಿ, ತಂದೆ,ತಾಯಿ ಯವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಯವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.