ಮಂಜೇಶ್ವರ: ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಕೇರಳ ಸರ್ಕಾರ ವಿರುದ್ಧ ಪ್ರತಿಭಟನೆ ಮಜೀರ್ಪಳ್ಳದಲ್ಲಿ ನಿನ್ನೆ ನಡೆಯಿತು. ಕಾರ್ಯಕ್ರಮ ವನ್ನು ಮಂಡಲ ಅಧ್ಯಕ್ಷ ರಾದ ಮಣಿಕಂಠ ರೈ.ಉದ್ಘಾಟನೆ ಮಾಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ವರ್ಕಾಡಿ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಬಾಕ್ರಬೈಲ್ ವಹಿಸಿದರು.ಕಾರ್ಯಕ್ರಮದಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ಆಶಾಲತಾ, ರಾಜ್ ಕುಮಾರ್ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಪದ್ಮಾವತಿ, ಗೀತಾ ಭಾಸ್ಕರ್, ಮಮತಾ ಉಪಸ್ಥಿತರಿದ್ದರು. ಜೀವನ್ ವರ್ಕಾಡಿ ಸ್ವಾಗತಿಸಿ, ಸುನೀಲ್ ಬಟ್ಯಕಳ ವಂದಿಸಿದರು.