ಮಂಜೇಶ್ವರ: ಕರ್ನಾಟಕ-ಕೇರಳ ಗಡಿಪ್ರದೇಶ ತಲಪ್ಪಾಡಿಯಲ್ಲಿ ನೂತನವಾಗಿ ನಿರ್ಮಿಸಲಾಗುವ ಜಂಟಿ ಪೋರೆಸ್ಟ್ ಚೆಕ್ ಪೆÇೀಸ್ಟ್ಗೆ ಶಿಲಾನ್ಯಾಸ ಮಂಗಳವಾರ ಜರುಗಿತು.
ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಆನ್ ಲೈನ್ ಮೂಲಕ ಶಿಲಾನ್ಯಾಸ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು ಗಡಿಪ್ರದೇಶದಲ್ಲಿ, ಅರಣ್ಯ ಪ್ರಾಂತದಲ್ಲಿ ನಡೆಯುವ ಕಾನೂನು ಉಲ್ಲಂಘನೆ, ಸಂಘರ್ಷ ಇತ್ಯಾದಿ ನಿಯಂತ್ರಿಸಿ, ಕಾನೂನು ಪಾಲನೆ ನಡೆಸಲು ಜಂಟಿ ಚೆಕ್ ಪೆÇೀಸ್ಟ್ ನಿರ್ಮಾಣ ಪೂರಕವಾಗಲಿದೆ. 10.27 ಕೋಟಿ ರೂ. ವೆಚ್ಚದಲ್ಲಿ ಜಂಟಿ ಫಾರೆಸ್ಟ್ ಚೆಕ್ ಪೆÇೀಸ್ಟ್ ಸಮುಚ್ಚಯಗಳು, 11.27 ಕೋಟಿ ರೂ. ವೆಚ್ಚದಲ್ಲಿ ಅರಣ್ಯ ಠಾಣೆಗಳು ನಿರ್ಮಾಣಗೊಳ್ಳಲಿವೆ. ಮುಂದಿನ ವರ್ಷ ಮಾರ್ಚ್ ತಿಂಗಳ ವೇಳೆಗೆ ನಿರ್ಮಾಣ ಚಟುವಟಿಕೆಗಳು ಪೂರ್ಣಗೊಳ್ಳಲಿವೆ ಎಂದವರು ನುಡಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಡಿವಿಝನಲ್ ಫಾರೆಸ್ಟ್ ಅಧಿಕಾರಿ ಅಜಿತ್ ಕೆ.ರಾಮನ್, ಕಾಸರಗೋಡು ರೇಂಜ್ ಅಧಿಕಾರಿ ಟಿ.ಜಿ.ಸೋಲಮನ್, ಇತರ ಸಿಬ್ಬಂದಿ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಜಂಟಿ ಚೆಕ್ ಪೋಸ್ಟ್ ಸಂಕೀರ್ಣಗಳು ನಿರ್ಮಾಣಮಾಡಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಕೇಂದ್ರ, ವನಶ್ರೀ ಇಕೋ ಶಾಪ್, ಇತರ ತತ್ಸಂಬಂಧಿ ಸೌಲಭ್ಯಗಳು ಇತ್ಯಾದಿಗಳನ್ನು ಅಳವಡಿಸಿ ಪ್ರಧಾನ ಚೆಕ್ ಪೆÇೀಸ್ಟ್ ಗಳ ಸಂಯೋಜಿತ ಫಾರೆಸ್ಟ್ ಕಾಂಪ್ಲೆಕ್ಸ್ ಆಗಿ ಇವನ್ನು ಮಾರ್ಪಡಿಸುವುದು ಇಲ್ಲಿನ ಉದ್ದೇಶ. ರಾಜ್ಯದ ಸರಕಾರದ ನೂರು ದಿನಗಳ ಕ್ರಿಯಾ ಯೋಜನೆ ಅಂಗವಾಗಿ 9 ಜಿಲ್ಲೆಗಳಿಗೆ 14 ಜಂಟಿ ಫೆÇೀರೆಸ್ಟ್ ಚೆಕ್ ಪೆÇೀಸ್ಟ್ ಸಮುಚ್ಚಯಗಳನ್ನು ನಿರ್ಮಿಸಲಾಗುವುದು. ನಬಾರ್ಡ್ ಆರ್.ಐ.ಡಿ.ಎಫ್. ಆರ್ಥಿಕ ಸಹಾಯದೊಂದಿಗೆ ರಾಜ್ಯದಲ್ಲಿ 15 ನೂತನ ಅರಣ್ಯ ಠಾಣೆ ಕಟ್ಟಡಗಳನ್ನು ನೂರು ದಿನಗಳ ಕ್ರಿಯಾಯೋಜನೆ ಅಂಗವಾಗಿ ನಿರ್ಮಿಸಲಾಗುವುದು.