ತಿರುವನಂತಪುರ: ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಕೇರಳದಲ್ಲಿ ಘೋಷಿಸಲಾದ ಹೆಚ್ಚಿನ ರಿಯಾಯಿತಿಗಳನ್ನು ನೀಡಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ವೈದ್ಯರ ಸಂಘಟನೆಯಾದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕಿಡಿಕಾರಿದೆ. ಐಎಂಎ ಈ ನಿರ್ಧಾರವನ್ನು ಸೂಕ್ತವಲ್ಲ ಎಂದು ಟೀಕಿಸಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಲೇ ಆದೇಶವನ್ನು ಹಿಂಪಡೆಯಬೇಕೆಂದು ಐಎಂಎ ಒತ್ತಾಯಿಸಿದೆ.
ರಾಜ್ಯದಲ್ಲಿ ಕೊರೋನದ ಮೂರನೇ ಅಲೆ ಪ್ರಾರಂಭವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಸಂದರ್ಭದಲ್ಲಿ, ಬಕ್ರೀದ್ ರಿಯಾಯಿತಿಗಳು ಸೂಕ್ತವಲ್ಲ. ಇದು ಸೋಂಕು ಉಲ್ಬಣಕ್ಕೆ ಕಾರಣವಾಗಬಹುದು. ಕೇರಳ ಮುಖ್ಯಮಂತ್ರಿಗಳು ಆದೇಶವನ್ನು ಆದಷ್ಟು ಬೇಗ ಹಿಂತೆಗೆದುಕೊಳ್ಳಬೇಕು ಎಂದು ಐಎಂಎ ಹೇಳಿದೆ.
ಬಕ್ರೀದ್ ಆಚರಣೆಗೆ ಮೂರು ದಿನಗಳ ರಿಯಾಯಿತಿಗಳನ್ನು ಕೇರಳದಲ್ಲಿ ನೀಡಲಾಗಿದೆ. ಎಲ್ಲಾ ಅಂಗಡಿಗಳೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಸೋಂಕು ಹರಡುವಿಕೆಯ ಹೆಚ್ಚಳದಿಂದಾಗಿ ಟ್ರಿಪಲ್ ಲಾಕ್‍ಡೌನ್‍ಗಳನ್ನು ವಿಧಿಸಲಾಗಿರುವ ಪ್ರದೇಶಗಳಲ್ಲಿಯೂ ರಿಯಾಯಿತಿಗಳನ್ನು ನೀಡಲಾಗಿದೆ. ವಿನಾಯಿತಿಗಳು ನಿಬರ್ಂಧಗಳಿಗೆ ಒಳಪಟ್ಟಿವೆ ಎಂದು ಸರ್ಕಾರ ವಿವರಿಸಿತ್ತು.