ಕಾಸರಗೋಡು: ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಪಂದ್ಯಾಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಳುಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಒಲಿಂಪಿಕ್ಸ್ ವೇವ್ ನಡೆಸುತ್ತಿರುವ ವಿವಿಧ ಕಾರ್ಯಕ್ರಮಗಳು ಗಮನಸೆಳೆಯುತ್ತಿವೆ.
ಸ್ಪೋಟ್ರ್ಸ್ ಫಾರ್ ಆಲ್ ಎಂಬ ಆಶಯದೊಂದಿಗೆ ಒಲಿಂಪಿಕ್ಸ್ ಚಾರ್ಟರ್ ಕೊಡುಗೆಯಾಗಿ ನೀಡಿರುವ ಯೋಜನೆಯೇ ಒಲಿಂಪಿಕ್ಸ್ ವೇವ್ ಆಗಿದೆ. ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮಗಳು ನಡೆಯುತ್ತಿವೆ.
ಇದರ ಅಂಗವಾಗಿ ಆ.4ರಂದು ಸಂಜೆ 4 ಗಂಟೆಗೆ ಕಾಲಿಕಡವಿನಲ್ಲಿ ಒಲಿಂಪಿಕ್ಸ್ ವಾಕ್ ಜರುಗಲಿದೆ. ಆ.5ರಂದು ಬೆಳಗ್ಗೆ 10 ಗಂಟೆಗೆ ಹೊಸದುರ್ಗ ಸರಕಾರಿ ಹೈಯರ್ ಸೆಕೆಂಡರಿ, ಪ್ರೌಢಶಾಲೆ ಮಕ್ಕಳಿಗಾಗಿ ಒಲಿಂಪಿಕ್ಸ್ ಮತ್ತು ಜಗತ್ತು ಎಂಬ ವಿಷಯದಲ್ಲಿ ರಸಪ್ರಶ್ನೆ, ಒಲಿಂಪಿಕ್ಸ್ ಲೇಖನ ಸ್ಪರ್ಧೆ ಜರುಗಲಿದೆ. ಆ.6ರಂದು ಸಂಜೆ ನೀಲೇಶ್ವರದಲ್ಲಿ ಸೈಕಲ್ ರಾಲಿ ನಡೆಯಲಿದೆ.
ಈ ಸಂಬಂಧ ನಡೆದ ಸಮಾಲೋಚನೆ ಸಭೆಯಲ್ಲಿ ಅಧ್ಯಕ್ಷ ಡಾ.ಎಂ.ಕೆ.ರಾಜಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಡಾ.ವಿ.ಸುರೇಶನ್ ಮಾಹಿತಿ ನೀಡಿದರು. ವಿ.ಬಾಲನ್, ಎಂ.ಅಚ್ಯುತನ್, ವಿ.ವಿ.ವಿಜಯಮೋಹನ್, ಗಂಗಾಧರನ್ ಮೇಕಾಡ್, ವಿಕಾಸ್ ಪಲೇರಿ, ಕೆ.ವಿ.ಗೋಪಾಲನ್ ಉಪಸ್ಥಿತರಿದ್ದರು.