ಕೋಝಿಕೋಡ್: ಎರ್ನಾಕುಳಂ-ಕಣ್ಣೂರು ಎಕ್ಸಿಕ್ಯುಟಿವ್ ರೈಲಿನಲ್ಲಿ ಮಹಿಳೆಗೆ ಕಿರುಕುಳ ನೀಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಿರುಕುಳ ಯತ್ನವನ್ನು ಸಹ ಪ್ರಯಾಣಿಕರೊಬ್ಬರು ಮಾಡಿದ್ದಾರೆ. ಮಹಿಳೆ ಸುರಕ್ಷಾ ಸರಪಳಿಯನ್ನು ಎಳೆದ ಸಂದರ್ಭ ಆರೋಪಿ ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಕಿರುಕುಳಕ್ಕೊಳಗಾದ ಮಹಿಳೆ 43 ರ ಹರೆಯದ ಚಾತ್ತಮಂಗಲಂ ನಿವಾಸಿಯಾಗಿದ್ದಾರೆ. ಅವರು ಎರ್ನಾಕುಳಂನಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಕೋಝಿಕೋಡ್ ನಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ರೈಲಿನ ಕೊನೆಯ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನು ಕಿರುಕುಳಗ್ಯೆಯ್ಯಲು ಪ್ರಯತ್ನಿಸಿದನು.
ಮದ್ಯದ ಅಮಲಿನಲ್ಲಿದ್ದ ಆರೋಪಿ ತ್ರಿಶೂರ್ ನಿಲ್ದಾಣ ಕಲಕೆದ ನಂತರ ಕಿರುಕುಳ ನೀಡಲು ಪ್ರಾರಂಭಿಸಿದನು. ಈ ಸಂದರ್ಭ ಮತ್ತೊಂದು ಕುಟುಂಬವು ಇದೇ ಬೋಗಿಯಲ್ಲಿತ್ತು. ಬಳಿಕ ಮಹಿಳೆ ಭಯಭೀತರಾಗಿ ಸರಪಣಿಯನ್ನು ಎಳೆದು ರೈಲು ನಿಲ್ಲಿಸಿದಳು.