ತಿರುವನಂತಪುರ: ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೊಳಿಸುವುದರ ವಿರುದ್ಧ ಟೀಕೆಗಳು ಹೆಚ್ಚುತ್ತಿವೆ. ವಾರಾಂತ್ಯದ ಲಾಕ್‍ಡೌನ್ ಮತ್ತು ಪರ್ಯಾಯ ದಿನಗಳಲ್ಲಿ ಹೊಸ ಹೊಸ ಅವಿಷ್ಕಾರಗಳನ್ನು ತರುತ್ತಿರುವುದು ಹೆಚ್ಚು ತೊಂದರೆಗಳಿಗೆ ಕಾರಣವಾಗುತ್ತಿದೆ ಎಂದು ಆರೋಪಗಳು ಕೇಳಿಬಂದಿದೆ. ಲಾಕ್ ಡೌನ್ ಸಂದರ್ಭ ಕೋವಿಡ್ ಹರಡುವಿಕೆಯು ಕಡಿಮೆಯಾಗಿಲ್ಲ ಎಂದು ಬೊಟ್ಟುಮಾಡಲಾಗುತ್ತಿದೆ.
ಸಾಮಾನ್ಯ ಜನರ ಜೀವನದಲ್ಲಿ ದೊಡ್ಡ ಬಿಕ್ಕಟ್ಟಿನ ತೀವ್ರ ಗುಲ್ಲುಗಳ ಬಳಿಕ ಲಾಕ್‍ಡೌನ್‍ಗಳಿಗೆ ರಿಯಾಯಿತಿ ನೀಡಲು ಸರ್ಕಾರ ನಿರ್ಧರಿಸಿತು. ಆದರೆ ಈ ವಿನಾಯಿತಿಗಳು ಅಸಮರ್ಪಕವೆಂದು ವ್ಯಾಪಕ ಟೀಕೆಗಳಿವೆ. ಹೆಚ್ಚಿನ ಅಂಗಡಿಗಳು ಇನ್ನೂ ಪರ್ಯಾಯ ದಿನಗಳಲ್ಲಿ ಮಾತ್ರ ತೆರೆದಿರುತ್ತವೆ.
ಬ್ಯಾಂಕುಗಳು ನಿಯಮಾನುಸಾರ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಆರಂಭಿಕ ದಿನಗಳಲ್ಲಿ, ಜನಸಂದಣಿಯು ತೀವ್ರ ಪ್ರಮಾಣದಲ್ಲಿ ಪೇಟೆಗಳಲ್ಲಿ ಒಟ್ಟುಗೂಡುತ್ತಾರೆ. ನಗರಗಳಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಯಾವುದೇ ಸಂಯಮವಿಲ್ಲದೆ ಜನರು ಈ ದಿನಗಳಲ್ಲಿ ಆಗಮಿಸುತ್ತಿರುವುದರಿಂದ, ಯಾವುದೇ ಭದ್ರತೆಗಳೂ ಇಲ್ಲದೆ ನಿಯಂತ್ರಣಗಳು ಸುದ್ದಿಗಷ್ಟೇ ಸ|ಈಮಿತವಾಗಿದೆ.
ಇದರ ಬದಲಿಗೆ ಎಲ್ಲಾ ವ್ಯಾಪಾರಿ ಕೇಂದ್ರಗಳನ್ನು ಪ್ರತಿದಿನ ತೆರೆಯಲು ಅನುಮತಿಸಿದರೆ ಮತ್ತು ಕೋವಿಡ್ ಪ್ರೊಟೋಕಾಲ್ ನ್ನು ಜಾರಿಗೊಳಿಸಿದರೆ ಅದು ಪರಿಣಾಮಕಾರಿಯಾಗುವುದು. ರಸ್ತೆ ದಟ್ಟಣೆ ಕಡಿಮೆಯಾಗುತ್ತದೆ. ಮತ್ತು ಪ್ರತಿದಿನ ವ್ಯವಹಾರಗಳಲ್ಲಿ ಕೆಲಸ ಮಾಡುವ ಸಾಮಾನ್ಯ ಜನರಿಗೆ ಇದು ಪ್ರಯೋಜನವನ್ನು ನೀಡುತ್ತದೆ.
ಮಾಸ್ಕ್, ಸ್ಯಾನಿಟೈಜರ್‍ಗಳು ಮತ್ತು ಸಾಮಾಜಿಕ ದೂರವನ್ನು ಅನುಸರಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕವೂ ಇದನ್ನು ನಿಯಂತ್ರಿಸಬಹುದು. ವ್ಯಾಪಾರ ಕೇಂದ್ರಗಳಲ್ಲಿ ಜನಸಂದಣಿಯನ್ನು ಕಂಡರೆ ಪೋಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಅಂಗಡಿಯವರು ಮತ್ತು ಉಲ್ಲಂಘಿಸುವವರಿಗೆ ತಕ್ಷಣ ಶಿಕ್ಷೆ ವಿಧಿಸಬೇಕು.
ಜನಸಂದಣಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಏನನ್ನೂ ಮಾಡದೆ ಒಮ್ಮಿಂದೊಮ್ಮೆಗೆ ಪೇಟೆ ತೆರೆದುಕೊಂಡು ಜನರು ಕಿಕ್ಕಿರಿಯುವುದು ಸೋಂಕು ಹರಡುವುದನ್ನು ಕಡಿಮೆಗೊಳಿಸಬಹುದೇ? ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಅಂತೆಯೇ, ವಾರಾಂತ್ಯದ ಸಂಪೂರ್ಣ ಲಾಕ್‍ಡೌನ್ ಆರಂಭಿಕ ದಿನಗಳಲ್ಲಿ ಹೆಚ್ಚು ಪ್ರಶ್ನಾರ್ಹವೂ ಆಗುತ್ತಿದೆ. ಇದರ ಪರಿಣಾಮಕಾರಿತ್ವವು ಇನ್ನೂ ಅನುಮಾನದಲ್ಲಿದೆ.
ಕೇರಳ ಸಾಮಾನ್ಯ ಸ್ಥಿತಿಗೆ ಬರದಿದ್ದರೆ, ಕೋವಿಡ್ ಸಾವಿನೊಂದಿಗೆ ಸಾಲದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ತಜ್ಞರು ಹೇಳುತ್ತಾರೆ. ಕಳೆದ 15 ದಿನಗಳಲ್ಲಿ ಮಾತ್ರ ಕೋವಿಡ್ ಬಿಕ್ಕಟ್ಟಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿದೆ. ಇಂತಹ ಅಸಮರ್ಪಕ ನಿಯಂತ್ರಣಗಳು ಮುಂದುವರಿದರೆ ಈ ಸಂಖ್ಯೆ ಹೆಚ್ಚಾಗಬಹುದು ಎಂಬ ಕಳವಳವಿದೆ.
ಇದೇ ವೇಳೆ ಸರ್ಕಾರದ ದೊಡ್ಡ-ಪ್ರಮಾಣದ ನಿಯಂತ್ರಣಗಳ ಹೊರತಾಗಿಯೂ, ಕೋವಿಡ್‍ನ ಹರಡುವಿಕೆ ಇನ್ನೂ ಕಡಿಮೆಯಾಗುತ್ತಿಲ್ಲ ಎಂಬುದನ್ನು ಕಡೆಗಣಿಸಲಾಗುವುದಿಲ್ಲ. ಪರೀಕ್ಷಾ ಸಕಾರಾತ್ಮಕತೆ ದರ 10 ರ ಸನಿಹ ಆಚೀಚೆ ಗಾಬರಿಗೊಳಿಸುತ್ತಲೂ ಇದೆ. ಪರೀಕ್ಷೆಯ ಕೊರತೆಯು ಹೆಚ್ಚಿನ ಮಟ್ಟದ ಸಕಾರಾತ್ಮಕತೆಗೆ ಮುಖ್ಯ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.