ಕಾಸರಗೋಡು: ಕೋಡೋಂ-ಬೇಳೂರು ಗ್ರಾಮಪಂಚಾಯತ್ ನಲ್ಲಿ ಬಿಗಿ ಕಟ್ಟುನಿಟ್ಟು ಜಾರಿಗೊಳಿಸಲಾಗಿದೆ.
ಪಂಚಾಯತ್ ಡಿ ಕ್ಯಾಟಗರಿಯಲ್ಲಿ ಸೇರ್ಪಡೆಗೊಂಡಿರುವ, ಕಳೆದ 2 ದಿನಗಳಿಂದ ಕೋವಿಡ್ ಟೆಸ್ಟ್ ಪಾಸಿಟಿವಿಟಿ ರೇಟ್ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಶುಕ್ರವಾರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಧಾನ ಕಟ್ಟುನಿಟ್ಟುಗಳು:
1. ಶನಿ, ಭಾನುವಾರಗಳಂದು ಬಿಗಿ ಕಟ್ಟುನಿಟ್ಟುಗಳೊಂದಿಗೆ ಸಂಪೂರ್ಣ ಲಾಕ್ ಡೌನ್ ಇರುವುದು( ಹಾಲು ವಿತರಣೆ ಹಾಲು ಸೊಸೈಟಿ ಮೂಲಕ ಮಾತ್ರ). ಪತ್ರಿಕೆ, ಪೆಟ್ರೋಲ್ ಪಂಪ್ ಹೊರತುಪಡಿಸಲಾಗಿದೆ.
2. P-11
2. ಇತರ ದಿನಗಳಲ್ಲಿ ಅಗತ್ಯದ ಸಾಮಾಗ್ರಿ ಮಾರಾಟ ಅಂಗಡಿಗಳು ಬೆಳಗ್ಗೆ 8 ರಿಂದ ಸಂಜೆ 5 ಗಂಟೆ ವರೆಗೆ ಕಾರ್ಯಾಚರಿಸಬಹುದು.
3. ವಿವಾಹ, ಮರಣಾನಂತರ ಕಾರ್ಯಕ್ರಮಗಳು, ಗೃಹಪ್ರವೇಶ ಸಹಿತ ಸಮಾರಂಭಗಳಿಗೆ ಕೋವಿಡ್ ಹರಡುವಿಕೆ ನಿಯಂತ್ರಣಕ್ಕೆ ಬರುವವರೆಗೆ ಅನುಮತಿಯಿಲ್ಲ.
4. ಆರಾಧನಾಲಯಗಳಲ್ಲಿ ಸಾರ್ವಜನಿಕರಿಗೆ ಪ್ರವೇಶಾತಿ ಇಲ್ಲ.
5. ಹೋಟೆಲ್ ಗಳಲ್ಲಿ ಹೋಂ ಡೆಲಿವರಿ, ಟೇಕ್ ಎವೇ ಸೇವೆ ಮಾತ್ರ.
6. ತುರ್ತು ಪರಿಸ್ಥಿತಿಯಲ್ಲಿ, ಅನುಮತಿ ಪತ್ರಗಳಿಲ್ಲದೆ ಪ್ರಯಾಣಕ್ಕೆ ಅನುಮತಿಯಿಲ್ಲ. ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
7. ಎಲ್ಲ ಹಣಕಾಸು ಸಂಸ್ಥೆಗಳು ಜು.16 ವರೆಗೆ ಮುಚ್ಚುಗಡೆಯಿರುವುದು.