HEALTH TIPS

ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರಿಗಿದು ಸಂತೋಷದ ಸುದ್ದಿ; ಕೇಂದ್ರ ಸರ್ಕಾರದ ಮಾರ್ಗಸೂಚಿ ಪರಿಷ್ಕರಣೆ

          ನವದೆಹಲಿ: ದೇಶದಲ್ಲಿನ ಕೋಟ್ಯಂತರ ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರಿಗೆ ಇದು ಸಂತೋಷದ ಸುದ್ದಿ. ಏಕೆಂದರೆ ಕೇಂದ್ರ ಸರ್ಕಾರವು ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ (ಎಂಎಸ್​ಎಂಇ) ಕೇತ್ರಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಪರಿಷ್ಕರಿಸಿದೆ. ಇದರಿಂದಾಗಿ ಬಹುನಿರೀಕ್ಷಿತ ಬದಲಾವಣೆಯೊಂದು ಆಗಿದೆ.


          ಎಂಎಸ್​ಎಂಇ ಸಚಿವ ನಿತಿನ್​ ಗಡ್ಕರಿ ಅವರು ಪರಿಷ್ಕೃತ ಮಾರ್ಗಸೂಚಿ ಕುರಿತು ಇಂದು ಮಾಹಿತಿ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಎಂಎಸ್​ಎಂಇ ಕ್ಷೇತ್ರವನ್ನು ಸಬಲೀಕರಣಗೊಳಿಸಲು ಮುಂದಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರನ್ನು ಎಂಎಸ್​ಎಂಇ ವ್ಯಾಪ್ತಿಗೆ ತರುತ್ತಿದ್ದೇವೆ. ಇದರಿಂದ ದೇಶದ 2.5 ಕೋಟಿ ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

           ರಿಟೇಲ್ ಹಾಗೂ ಹೋಲ್​ಸೇಲ್​ ವಹಿವಾಟು ಎಂಎಸ್​ಎಂಇ ವ್ಯಾಪ್ತಿಯಿಂದ ಬಿಟ್ಟುಹೋಗಿತ್ತು. ಈಗ ಮಾರ್ಗಸೂಚಿ ಪರಿಷ್ಕರಿಸಿ ಅದನ್ನು ಎಂಎಸ್​ಎಂಇ ವ್ಯಾಪ್ತಿಗೆ ಸೇರಿಸಲಾಗಿದೆ. ಪರಿಣಾಮವಾಗಿ ಇನ್ನು ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರು ಉದ್ಯಮ್ (https://udyamregistration.gov.in/) ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದೂ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries